Connect with us

    ನಾಡದೊರೆ ಮದಕರಿ ನಾಯಕರ ಅದ್ದೂರಿ ಜಯಂತ್ಯುತ್ಸವ | ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್

    ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

    ಮುಖ್ಯ ಸುದ್ದಿ

    ನಾಡದೊರೆ ಮದಕರಿ ನಾಯಕರ ಅದ್ದೂರಿ ಜಯಂತ್ಯುತ್ಸವ | ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್

    ಚಿತ್ರದುರ್ಗ ನ್ಯೂಸ್.ಕಾಂ: ನಾಡದೊರೆ ಮದಕರಿ ನಾಯಕರ ಜಯಂತ್ಯುತ್ಸವ ಅ.13 ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು, ನಾಯಕ ಸಮಾಜ ಸೇರಿದಂತೆ ಜಿಲ್ಲೆಯ ಸಮಸ್ತರು ಭಾಗವಹಿಸಲು ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಮನವಿ ಮಾಡಿದ್ದಾರೆ.

    ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಆಡಳಿತ ನಡೆಸಿ ಸಮಾಜದ ಸುಧಾರಣೆ, ನಾಡಿನ ರಕ್ಷಣೆ ಮಾಡಿರುವ ಮದಕರಿ ನಾಯಕರು ಒಂದು ಸಮಾಜಕ್ಕೆ ಸೀಮಿತವಲ್ಲ. ಎಲ್ಲರಿಗೂ ಅವರು ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಅದ್ದೂರಿಯಾಗಿ ಜಯಂತಿ ಆಚರಿಸೋಣ ಎಂದು ಕರೆ ನೀಡಿದರು.

    ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಇದರಲ್ಲಿ ಎಲ್ಲ ಸಮಾಜದ ಯುವಕರು, ಮುಖಂಡರು ಭಾಗವಹಿಸಿ ಎಂದರು.

     

    ಮದಕರಿ ನಾಯಕರ ಜಯಂತಿಗೆ ನಮ್ಮನ್ನು ಆಹ್ವಾನಿಸಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕುತ್ತು ಎಂದು ಕೆಲವರು ಆಪಾದಿಸಿದ್ದಾರೆ. ಆದರೆ, ಕಾರ್ಯಕ್ರಮದ ಮೊದಲ ಸುದ್ದಿಗೋಷ್ಠಿಯಲ್ಲೇ ಈ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಮದಕರಿ ನಾಯಕರು ನಾಡ ದೊರೆ. ಅವರು ಒಂದು ಸಮುದಾಯಕ್ಕಾಗಿ ಕೆಲಸ ಮಾಡಿಲ್ಲ. ಎಲ್ಲರಿಗಾಗಿ ಆಳ್ವಿಕೆ ಮಾಡಿದವರು. ಹಾಗಾಗಿ ಎಲ್ಲರೂ ಭಾಗವಹಿಸುವಂತೆ ಅಂದೇ ಮನವಿ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ: ಮದಕರಿ ನಾಯಕರ ಹೊಸ ಭಾವಚಿತ್ರ ಅನಾವರಣ | ನಟ ಕಿಚ್ಚ ಸುದೀಪ್ ಬೆಂಗಳೂರಿನಲ್ಲಿ ಲೋಕಾರ್ಪಣೆ

    madakari nayaka

    ವರ್ಷದಲ್ಲಿ ಮೂರು ಬಾರಿ ರಾಜವೀರ ಮದಕರಿ ನಾಯಕರ ಕಾರ್ಯಕ್ರಮ ನಡೆಯುತ್ತವೆ. ಮದಕರಿ ನಾಯಕರು ಪಟ್ಟಕ್ಕೇರಿದ ದಿನಾಚರಣೆ, ಮದಕರಿ ನಾಯಕ ಸ್ಮರಣೋತ್ಸವ ಹಾಗೂ ಮದಕರಿ ಉತ್ಸವ ಎಂಬ ಹೆಸರಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.

    ಈ ವರ್ಷದ ಮದಕರಿ ನಾಯಕರ ಜಯಂತಿ ಮೆರವಣಿಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಲಿದ್ದಾರೆ. ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಗೋವಿಂದಪ್ಪ, ಕೆ.ಸಿ.ವೀರೇಂದ್ರ(ಪಪ್ಪಿ), ಡಾ.ಎಂ.ಚಂದ್ರಪ್ಪ, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಭಾಗವಹಿಸಲಿದ್ದಾರೆ ಎಂದರು.

    ಜಯಂತಿ ಅಂಗವಾಗಿ ಮದಕರಿ ನಾಯಕರ ಪ್ರತಿಮೆಯನ್ನು ಹೂವು ಮತ್ತು ಲೈಟ್‍ಗಳ ಮೂಲಕ ವಿಶೇಷವಾಗಿ ಅಲಂಕಾರ ಮಾಡಲಾಗುತ್ತದೆ. ಇದರೊಟ್ಟಿಗೆ ಇತರೆ ಮಹಾಪುರುಷರ ಎಲ್ಲ ಪ್ರತಿಮೆಗಳನ್ನು ಅಲಂಕಾರ ಮಾಡಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಮದಕರಿ ನಾಯಕರು ಯುವಕರಾಗಿದ್ದ ಸಂದರ್ಭದ ನೂತನ ಭಾವಚಿತ್ರವನ್ನು ಬಿಡುಗಡೆ ಮಾಡಿದರು.
    ಸುದ್ದಿಗೋಷ್ಠಿಯಲ್ಲಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಗೋಪಾಲಸ್ವಾಮಿ ನಾಯಕ. ಕಾಟೀಹಳ್ಳಿ ಕರಿಯಪ್ಪ, ಸೋಮೇಂದ್ರ, ಕೇಶವಮೂರ್ತಿ ಇದ್ದರು.

     

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top