ಕ್ರೈಂ ಸುದ್ದಿ
ಹೆದ್ದಾರಿಯಲ್ಲಿ ನಿಂತಿದ್ದ ಲಾರಿ | ನಸುಕಿನಲ್ಲಿ ಹಿಂಬದಿಯಿಂದ ಡಿಕ್ಕಿಯಾದ ಕಾರು
CHITRADURGA NEWS | 30 APRIL 2024
ಚಳ್ಳಕೆರೆ: ಕಲಬುರಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರೊಂದು ಬಿ.ಜಿ.ಕೆರೆ ಬಳಿ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂರು ಜನರಿಗೆ ಗಾಯಗಳಾಗಿವೆ. ಕಲಬುರ್ಗಿ ಜಿಲ್ಲೆಯ ಹೌರಾದ್ ನಿವಾಸ್ ನಾಗಮ್ಮ, ಅರುಣ್ ಕುಮಾರ್ ಹಾಗೂ ಬಂಡೆಪ್ಪ ಬಸವಣ್ಣೆಪ್ಪ ಬಿರಾದಾರ್ ಗಾಯಗೊಂಡವರು.
ಇದನ್ನೂ ಓದಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕುಸಿತ | ಒಂದೇ ದಿನಕ್ಕೆ 1299 ರೂ. ಬೆಲೆ ಇಳಿಕೆ
ಏಪ್ರಿಲ್ 30 ಮಂಗಳವಾರ ಬೆಳಗ್ಗೆ 4.30ರ ಸುಮಾರಿನಲ್ಲಿ ಕಲಬುರ್ಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾರು ಬಿ.ಜಿ.ಕೆರೆ ಮಾರಮ್ಮನ ದೇವಸ್ಥಾನದ ಬಳಿ ಬಳ್ಳಾರಿ ಕಡೆಯಿಂದ ಚಳ್ಳಕೆರೆ ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 150(ಎ)ರಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿರುವಾಗ ಕಾರು ಚಾಲಕ ಬಂಡೆಪ್ಪ ಬಸವಣ್ಣೆಪ್ಪ ಬಿರಾದಾರ್ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದು ಹೆದ್ದಾರಿಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ರಸ್ತೆ ಸುರಕ್ಷತಾ ನಿಯಮ ಪಾಲಿಸದೇ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಸಿದ್ದಾರೆ.
ಇದನ್ನೂ ಓದಿ: ಮುರುಘಾ ಮಠದಲ್ಲಿ ಪೂರ್ವಭಾವಿ ಸಭೆ | ಅರ್ಥಪೂರ್ಣ ಬಸವ ಜಯಂತಿಗೆ ತೀರ್ಮಾನ
ಅಪಘಾತದ ಪರಿಣಾಮ ಕಾರಿನಲ್ಲಿದ್ದ ಮೂರು ಜನರಿಗೆ ಮುಖ, ಹಣೆ, ಕೈ ಕಾಲುಗಳಿಗೆ ಪಟ್ಟಾಗಿದೆ. ರಸ್ತೆಯಲ್ಲಿ ನಿಂತಿದ್ದ ಲಾರಿ ಹಿರಿಯೂರು ತಾಲೂಕು ಬಬ್ಬೂರಿಗೆ ಸೇರಿದ್ದು ಎನ್ನಲಾಗಿದೆ.
ಗಾಯಾಳುಗಳನ್ನು ಅಂಬ್ಯುಲೆನ್ಸ್ ವಾಹನದಲ್ಲಿ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.