ಕ್ರೈಂ ಸುದ್ದಿ
ತಡರಾತ್ರಿ ಆಸ್ಪತ್ರೆಯ ಬೆಡ್‍ನಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬೆಳಗ್ಗೆ ಕೋಟೆ ಎದುರು ಪತ್ತೆ | ಕೋಟೆ ಠಾಣೆ ಪೊಲೀಸರಿಂದ ಪರಿಶೀಲನೆ
Published on
ಚಿತ್ರದುರ್ಗ ನ್ಯೂಸ್.ಕಾಂ: ಆಸ್ಪತ್ರೆಯ ಬೆಡ್‍ನಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ನಗರದ ಕೋಟೆ ಮುಂಭಾಗದಲ್ಲಿ ಪತ್ತೆಯಾಗಿರುವ ಘಟನೆ ಗುರುವಾರ ವರದಿಯಾಗಿದೆ.
ಹಿರಿಯೂರು ತಾಲೂಕಿನ ಬ್ಯಾರಮಡು ಗ್ರಾಮದ ನಿವಾಸಿ ಸುಧಾಕರ್(40) ಮೃತ ವ್ಯಕ್ತಿ.
ಇದನ್ನು ಓದಿ: KSRTC ಬಸ್-ಬೈಕ್ ನಡುವೆ ಭೀಕರ ಅಪಘಾತ
ಲಿವರ್(ಇನ್ಫೆಕ್ಷನ್) ಸಮಸ್ಯೆಯಿಂದ ಬಳಲುತ್ತಿದ್ದ ಸುಧಾಕರ್ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಗಿದ್ದ. ಆದರೆ, ರಾತ್ರಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಬೆಳಗ್ಗೆ ಗಮನಿಸಿದಾಗ ರೋಗಿ ಇದ್ದ ಬೆಡ್ ಖಾಲಿಯಿತ್ತು.
ಗುರುವಾರ ಮುಂಜಾನೆ ಕೋಟೆ ಮುಂಭಾಗದಲ್ಲಿ ಅನುಮಾನಸ್ಪದವಾಗಿ ಸುಧಾಕರ್ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಆರ್‍ಪಿಸಿ 174ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Continue Reading
You may also like...
Related Topics:Chitradurga, Chitradurga Updates, Corpse, crime, District Hospital, Fort, Hiriyur, Kannada Latest News, Liver Problem, Patient, Police, Suspicious, ಅನುಮಾನಸ್ಪದ, ಅಪರಾಧ, ಕನ್ನಡ ಲೇಟೆಸ್ ನ್ಯೂಸ್, ಕೋಟೆ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಜಿಲ್ಲಾ ಆಸ್ಪತ್ರೆ, ಪೊಲೀಸ್, ರೋಗಿ, ಲಿವರ್ ಸಮಸ್ಯೆ, ಶವ, ಹಿರಿಯೂರು
Click to comment