ಮುಖ್ಯ ಸುದ್ದಿ
ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜ ಗವಾಯಿ ಅವರ ಸಾಧನೆ ಅಪಾರ | ಮಾದಾರ ಚನ್ನಯ್ಯ ಸ್ವಾಮೀಜಿ
CHITRADURGA NEWS | 01 JULY 2024
ಚಿತ್ರದುರ್ಗ: ದೇಶದಲ್ಲಿ ಜನಿಸಿದ ಅನೇಕ ಮಹನೀಯರು ಆಯಾ ಭಾಗದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದಾರೆ. ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ್ ಗವಾಯಿಗಳು ಸಂಗೀತ ಕ್ಷೇತ್ರದಲ್ಲಿ ಆಪಾರ ಸಾಧನೆ ಮಾಡಿದ್ದಾರೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಜಿಲ್ಲೆಯ 158 ಸಹಕಾರ ಸಂಘಗಳಿಗೆ ಕಂಪ್ಯೂಟರ್ ಅಳವಡಿಕೆ | ಇಲ್ಯಾಸ್ ಉಲ್ಲಾ ಷರೀಪ್
ನಗರದ ಹೊಳಲ್ಕೆರೆ ರಸ್ತೆಯ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಗಾನಯೋಗಿ ಸಂಗೀತ ಬಳಗದಿಂದ ಆಯೋಜಿಸಿದ್ದ ಲಿಂ.ಪ.ಪ ಚಾಕ್ಷರ ಗವಾಯಿಗಳ 80ನೇ ಹಾಗೂ ಲಿಂ.ಡಾ.ಪ.ಪುಟ್ಟರಾಜ ಕವಿ ಗವಾಯಿಗಳ 14ನೇ ಪುಣ್ಯ ಸ್ಮರಣೋತ್ಸವ ಮತ್ತು ಸೇವಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ನಾಡಿನ ಕಿರ್ತೀ ಪತಾಕಿಯನ್ನು ಸಂಗೀತ ಲೋಕದಲ್ಲಿ ಹಿಮಾಲಯದೆತ್ತರಕ್ಕೆ ಕೊಂಡ್ಯೂದಿದ್ದಾರೆ. ಒಳ್ಳೆಯ ಗುರುವಿಗೆ ಓಳ್ಳೆಯ ಶಿಷ್ಯ ಲಭ್ಯವಾದರೆ ಯಾವ ಮಟ್ಟಕ್ಕೆ ಆತ ದಾರ್ಶನಿಕನಾಗುತ್ತಾನೆ ಎಂಬುದಕ್ಕೆ ಈ ಇಬ್ಬರು ಗವಾಯಿಗಳು ಸಾಕ್ಷಿಯಾಗಿದ್ದಾರೆ ಎಂದರು.
ಪುಟ್ಟರಾಜ ಗವಾಯಿಗಳ ಶಿಷ್ಯ ವೃಂದ ನಮ್ಮ ಚಿತ್ರದುರ್ಗದಲ್ಲಿ ಇರುವುದರಿಂದ ಅವರ ಸ್ಮರಣೆಯ ಕಾರ್ಯಕ್ರಮ ನಡೆಯುತ್ತಿದೆ. ಹಾನಗಲ್ ಕುಮಾರಸ್ವಾಮಿ ಅವರಿಗೆ ಪಂಚಾಕ್ಷರಿ ಗವಾಯಿಗಳು ಶಿಷ್ಯರಾಗಿ ಸಿಕ್ಕರೆ ಇದೇ ಪಂಚಾಕ್ಷರಿ ಗತವಾಯಿಗಳಿಗೆ ಪುಟ್ಟರಾಜ ಗವಾಯಿಗಳು ಶಿಷ್ಯರಾಗಿ ಸಿಕ್ಕಿದ್ದಾರೆ. ಇಬ್ಬರು ಕೂಡ ಹಾನಗಲು ಕುಮಾರಸ್ವಾಮಿ ಅವರು ಹಾಕಿ ಕೊಟ್ಟ ಮಾರ್ಗದರ್ಶನದ ಮೂಲಕ ನಡೆದಿರುವ ಪರಿಣಾಮ ಇಂದು ವೀರೇಶ್ವರ ಪುಣ್ಯಾಶ್ರಮದಲ್ಲಿ ಜಾತ್ಯಾತೀತವಾಗಿ ಬೆಳೆದಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜಾವೀರ ಮದಕರಿ ನಾಯಕ ಪಟ್ಟಾಭಿಷೇಕ | ಚಿತ್ರದುರ್ಗದಂತಹ ಕೋಟೆ ಏಷ್ಯಾ ಖಂಡದಲ್ಲೇ ಇಲ್ಲ | ಡಾ.ಎಸ್.ಎನ್.ಮಹಾಂತೇಶ್
ಭಾರತ ಸರ್ಕಾರ ಪಂಚಾಕ್ಷರ ಗವಾಯಿಗಳನ್ನು ಗುರುತಿಸಲಿಲ್ಲ. ಆದರೆ, ಇವರ ಶಿಷ್ಯರಾದ ಪುಟ್ಟರಾಜ ಗವಾಯಿಗಳಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಸಂಗೀತ ಕ್ಷೇತ್ರಕ್ಕೆ ನೀಡಿದ ಬಹು ದೊಡ್ಡ ಕಾಣಿಕೆ.
ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ಎಂ.ತೋಟಪ್ಪ ಉತ್ತಂಗಿ ವಹಿಸಿದ್ದರು. ಕಲುರ್ಗಿಯ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿಯವರು ಉಪಸ್ಥಿತರಿದ್ದರು.
ಶಾರದಮ್ಮ ರುದ್ರಪ್ಪ, ಡಿ.ಎಸ್.ಸುರೇಶ್ ಬಾಬು, ನಿವೃತ್ತ ಪ್ರಚಾರ್ಯ ಸಿ.ಎಂ. ಚಂದ್ರಪ್ಪ, ಶ್ರೀ ಗಾನಯೋಗಿ ಸಂಗೀತ ಬಳಗದ ಗೌರವಾಧ್ಯಕ್ಷರಾದ ಎಸ್.ವಿ.ಗುರುಮೂರ್ತಿ, ಉಪಾಧ್ಯಕ್ಷ ಎಲ್.ಎಸ್.ಚಿನ್ಮಯಾನಂದ, ಕಾರ್ಯದರ್ಶಿ ನಂದೀಶ್, ಉಪ ಸಮಿತಿಯ ಅಧ್ಯಕ್ಷೆ ಸುಮಾ ರಾಜಶೇಖರ್ ಮತ್ತಿತರರಿದ್ದರು.
ಕಾರ್ಯಕ್ರಮದಲ್ಲಿ ಸೇವಾ ಸಾಧಕರಾದ ಶುಶ್ರೂಷಕ ಎಂ.ಮಲ್ಲಣ್ಣ, ತಬಲ ವಾದಕ ಸಿದ್ದೇಶ್‌ಕುಮಾರ್ ಹಾಗೂ ಕೀ ಬೋರ್ಡ ವಾದಕ ಸಾಯಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಬದುಕು ಬೋರಾದಾಗ ರಿಫ್ರೆಶ್ ಆಗಲು ಜೋಗಿಮಟ್ಟಿಗೆ ಬನ್ನಿ | ಇಲ್ಲಿನ ಹಸಿರು, ಗಾಳಿ, ನೋಟ ನಿಮ್ಮನ್ನು ರೀಚಾರ್ಜ್ ಮಾಡುತ್ತೆ
ಕಾರ್ಯಕ್ರಮಕ್ಕೂ ಮೊದಲು ನಗರದ ನೀಲಕಂಠೇಶ್ವರ ದೇವಾಲಯದಿಂದ ಉಭಯ ಶ್ರೀಗಳ ಭಾವಚಿತ್ರವನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು.