ಕ್ರೈಂ ಸುದ್ದಿ
ಕೊಲೆಯನ್ನು ಆಕ್ಸಿಡೆಂಟೆ ಎಂದು ಬಿಂಬಿಸಲು ಯತ್ನಿಸಿ ಸಿಕ್ಕಿಬಿದ್ದ ಆರೋಪಿಗಳು
ಚಿತ್ರದುರ್ಗ ನ್ಯೂಸ್.ಕಾಂ: ಪರಿಚಿತನನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಅಪಘಾತವೆಂದು ಬಿಂಬಿಸುವ ಉದ್ದೇಶದಿಂದ ಶವವನ್ನು ಹೆದ್ದಾರಿ ಬದಿ ಎಸೆದು ಹೋಗಿದ್ದ ಮೂರು ಜನರ ತಂಡವನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಐಮಂಗಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಯಾದಗಿರಿ ಮೂಲದ ರಾಜು, ಮಾಳಿಂಗರಾಯ ಹಾಗೂ ಶರಣರು ಬಂಧಿತ ಆರೋಪಿಗಳು. ಚಾಮರಾಜನಗರದ ರಾಜೇಂದ್ರ(40) ಎಂಬಾತನನ್ನು ಕೊಲೆ ಮಾಡಿ ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಚನ್ನಮ್ಮನ್ನಹಳ್ಳಿ ಬಳಿ ಹೆದ್ದಾರಿಯಲ್ಲಿ 2023 ಜುಲೈ 22 ರಂದು ಬಿಸಾಡಿ ಹೋಗಿದ್ದರು.
ಹಿರಿಯೂರು ಪೊಲೀಸ್ ವೃತ್ತ ನಿರೀಕ್ಷಕ ಕಾಂತರಾಜ್ ನೇತೃತ್ವದ ತಂಡ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅಪಘಾತ ಅಲ್ಲ ಎನ್ನುವುದನ್ನು ಮನಗಂಡು, ತನಿಖೆ ಆರಂಭಿಸಿತ್ತು. ಕೊಲೆ ನಡೆದ 40 ದಿನಗಳ ಬಳಿಕ ಮೂರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಹೊರವಲಯದ ಮಲ್ಲಾಪುರ ಬಳಿ ಭೀಕರ ಅಪಘಾತ | ನಾಲ್ವರು ಸ್ಥಳದಲ್ಲೇ ಸಾವು
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಪರಸ್ಪರ ಪರಿಚಿತರು.
ಆರೋಪಿ ರಾಜು ಹಾಗೂ ಕೊಲೆಯಾದ ನಾಗೇಂದ್ರ ನಡುವೆ ಹಣಕಾಸಿನ ವ್ಯವಹಾರವಿತ್ತು. ಇದೇ ಕಾರಣಕ್ಕೆ ಗಲಾಟೆಯೂ ನಡೆದಿತ್ತು. ರಾಜು ಪತ್ನಿ ಜೊತೆಗೆ ನಾಗೇಂದ್ರ ಅಕ್ರಮ ಸಂಬಂಧ ಹೊಂದಿದ್ದ ಎಂಬ ಅನುಮಾನವೂ ಇದರಲ್ಲಿ ಸೇರಿದ್ದರಿಂದ ವ್ಯವಹಾರದ ಬಗ್ಗೆ ಮಾತನಾಡುವುದಾಗಿ ಕರೆಯಿಸಿಕೊಂಡು ಕೊಲೆ ಮಾಡಿದ್ದರು.
ಈ ಕೊಲೆಯನ್ನು ಅಪಘಾತವೆಂದು ಬಿಂಬಿಸಲು ಪ್ಲಾನ್ ಮಾಡಿದ್ದ ಆರೋಪಿಗಳು ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 15 ರಲ್ಲಿ ಚನ್ನಮ್ಮನಹಳ್ಳಿ ಸಮೀಪ ತಂದು ಎಸೆದು ಹೋಗಿದ್ದರು. ಶವವನ್ನು ಗಮನಿಸಿದಾಗ ಇದು ಅಪಘಾತವಲ್ಲ ಎಂಬ ಅನುಮಾನದಡಿ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಅಸಲಿ ಸತ್ಯ ಗೊತ್ತಾಗಿ ಆರೋಪಿಗಳುಅಂದರ್ ಆಗಿದ್ದಾರೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/J6cH6HirXqYERmT1X09kSk)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)