ಮುಖ್ಯ ಸುದ್ದಿ
ಗಣೇಶ ಪ್ರತಿಷ್ಠಾಪನೆಗೆ ಮುನ್ನಾ ತಿಳಿದುಕೊಳ್ಳಬೇಕಾದ ಹತ್ತು ನಿಯಮಗಳು
Published on
ಚಿತ್ರದುರ್ಗ ನ್ಯೂಸ್.ಕಾಂ: ನಿಮ್ಮ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಿದ್ದೀರಾ, ನಿಮ್ಮ ಬೀದಿ ಅಥವಾ ಊರುಗಳಲ್ಲಿ ಗಣೇಶನನ್ನು ಕೂರಿಸಲು ಸಿದ್ಧತೆ ಮಾಡಿಕೊಂಡಿದ್ದೀರಾ ಹಾಗಾದರೆ ಜಿಲ್ಲಾಡಳಿತ ರೂಪಿಸಿರುವ ಈ ನಿಯಮಗಳನ್ನು ಓದಿಕೊಳ್ಳಿ. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೌರಿ-ಗಣೇಶ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಮಾತನಾಡಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ಓಂಕಾರ | ಗೋ ಪೂಜೆ, ಧ್ವಜ ಪೂಜೆ
- ಭಕ್ತಿ ಭಾವದ ಹಬ್ಬ ಗಣೇಶ ಚತುರ್ಥಿಯಲ್ಲಿ ಪರಿಸರಕ್ಕೆ ಹಾನಿಕಾರಕವಾಗಿರುವ ಪಿಒಪಿ ಮತ್ತು ಲೋಹ ಮಿಶ್ರಿತ ಬಣ್ಣದಿಂದ ತಯಾರಿಸಿದ ವಿಗ್ರಹಗಳ ಬಳಕೆಯನ್ನು ನಿಷೇಧಿಸಿದೆ. ಇದಕ್ಕಾಗಿ ಅಧಿಕಾರಿಗಳ ತಂಡ ರಚಿಸಿದ್ದು, ಜಿಲ್ಲೆಯಾದ್ಯಂತ ಸಂಚರಿಸಿ, ಪಿಒಪಿ ಗಣೇಶ ವಿಗ್ರಹಗಳ ಮಾರಾಟ ಅಥವಾ ಬಳಕೆ ಕಂಡುಬಂದಲ್ಲಿ ಕೂಡಲೆ ವಶಪಡಿಸಿಕೊಳ್ಳಬೇಕು.
- ಸಾರ್ವಜನಿಕ ಗಣಪತಿಗಳನ್ನು ವಿಲೇವಾರಿ ಮಾಡಲು ನಿರ್ದಿಷ್ಟ ಜಲಮೂಲಗಳನ್ನು ನಿಗದಿಪಡಿಸಬೇಕು, ಗಣೇಶಮೂರ್ತಿ ವಿಸರ್ಜನೆ ಮಾಡುವ ಸ್ಥಳಗಳ ಕುರಿತು ಸ್ಥಳೀಯವಾಗಿ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕು.
- ಗಣೇಶ ವಿಗ್ರಹಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟು ಅನುಮತಿ ಪಡೆದ ನಂತರವೇ ಸ್ಥಾಪಿಸಬೇಕು.
- ವಿಗ್ರಹಗಳ ಪ್ರತಿಷ್ಠಾಪನೆ ಅಥವಾ ವಿಸರ್ಜನೆ ಸಂದರ್ಭಕ್ಕೆ ಧ್ವನಿವರ್ಧಕಗಳಿಗೆ ಅನುಮತಿ ಪಡೆಯಬೇಕು. ನಿಯಮಾನುಸಾರ ಡೆಸಿಬಲ್ ಹೊಂದಿವೆಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಬೇಕು.
- ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿದ್ದು, ಹಗಲು ವೇಳೆ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನಿಗದಿತ ಡೆಸಿಬಲ್ ಪ್ರಮಾಣದಲ್ಲಿ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶವಿದೆ.
- ಗಣೇಶ ಮೂರ್ತಿ ಸ್ಥಾಪಿಸಿದ ನಂತರದ ಮೂರು, ಐದು ಹಾಗೂ ಒಂಬತ್ತನೇ ದಿನಗಳಂದು ವಿಸರ್ಜನೆಯಾಗುವ ಗಣೇಶ ಮೂರ್ತಿಗಳ ಬಗ್ಗೆ ಮಾಹಿತಿ ಇರಬೇಕು.
- ಮೆರವಣಿಗೆಗೆ ಸೂಕ್ತ ಮಾರ್ಗಗಳನ್ನು ರೂಪಿಸಬೇಕು. ಮಾರ್ಗಗಳಲ್ಲಿ ಬ್ಯಾರಿಕೇಡಿಂಗ್, ಸಿಸಿ ಟಿ.ವಿ. ಗಳ ಅಳವಡಿಕೆ, ವಿಸರ್ಜನಾ ಸ್ಥಳಗಳಲ್ಲಿ ಸಾಕಷ್ಟು ವಿದ್ಯುತ್ ದೀಪದ ಅಳವಡಿಕೆಯನ್ನು ಮೊದಲೇ ಮಾಡಿಕೊಳ್ಳಬೇಕು.
- ಮುಂಜಾಗ್ರತಾ ಕ್ರಮವಾಗಿ ಮದ್ಯ ಮಾರಾಟಕ್ಕೆ ನಿಷೇಧ ಜಾರಿಗೊಳಿಸಬೇಕು, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರ ವಹಿಸಬೇಕು.
- ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಬಂಟಿಂಗ್, ಧ್ವಜಗಳ ಅಳವಡಿಕೆ ಕೇವಲ ವಿಸರ್ಜನೆ ದಿನಕ್ಕೆ ಮಾತ್ರ ಸೀಮಿತವಾಗಬೇಕು, ಇದಕ್ಕೂ ಮುನ್ನವೇ ಅಳವಡಿಸಲು ಅವಕಾಶವಿಲ್ಲ. ಗಣೇಶ ವಿಸರ್ಜನೆ ದಿನದಂದೇ ಸಂಬಂಧಿಸಿದ ಎಲ್ಲ ಬ್ಯಾನರ್, ಬಂಟಿಂಗ್ಸ್, ಧ್ವಜಗಳನ್ನು ಸಂಬಂಧಪಟ್ಟ ಸಮಿತಿಯವರೇ ತೆರವುಗೊಳಿಸಬೇಕು.
- ಜಿಲ್ಲೆಯಲ್ಲಿ ಮಹನೀಯರ ಪುತ್ಥಳಿ ಇರುವ ಪ್ರಮುಖ ವೃತ್ತಗಳಲ್ಲಿ ಹೂವಿನ ಅಲಂಕಾರಕ್ಕೆ ಮಾತ್ರ ಅವಕಾಶ ನೀಡಬೇಕು, ವೃತ್ತದ ಸ್ಥಳದಲ್ಲಿ ಯಾವುದೇ ಬ್ಯಾನರ್, ಬಂಟಿಂಗ್, ಧ್ವಜಗಳ ಅಳವಡಿಕೆ ಮಾಡುವಂತಿಲ್ಲ.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/J6cH6HirXqYERmT1X09kSk)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)
Continue Reading
You may also like...
Related Topics:Chitradurga, DC Divya Prabhu, Ganesh Chaturthi, Kannada Latest News, SP Dharmendra Kumar Meena, ಎಸ್ಪಿ ಧರ್ಮೇಂದ್ರ ಕುಮಾರ್ ಮೀನಾ, ಕನ್ನಡ ಲೇಟೆಸ್ಟ್ ಸುದ್ದಿ, ಗಣೇಶ-ಚತುರ್ಥಿ, ಗಣೇಶೋತ್ಸವ, ಚಿತ್ರದುರ್ಗ, ಡಿಸಿ ದಿವ್ಯಪ್ರಭು
Click to comment