ಮುಖ್ಯ ಸುದ್ದಿ
ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಕಲಿಸಿ | ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣ
CHITRADURGA NEWS | 02 FEBRUARY 2025
ಚಿತ್ರದುರ್ಗ: ಮಕ್ಕಳಿಗೆ ವಿಧ್ಯೆಯ ಜೊತೆಗೆ ಸಂಸ್ಕಾರ ಕಲಿಸುವುದು ಬಹಳ ಮುಖ್ಯ. ಇದನ್ನು ಶಾಲೆಯಲ್ಲಷ್ಟೇ ಅಲ್ಲದೆ ಮನೆಯಲ್ಲೂ ಕಲಿಸಬೇಕು. ಈ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಜ್ವಲ ವೀರಣ್ಣ ಸಿದ್ದಣ್ಣನವರ್ ಹೇಳಿದರು.
Also Read: Kannada Novel: 18. ಜಂಗಮಯ್ಯರಿಗೆ ಪುತ್ರೋತ್ಸವ
ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಿಂದ ಆಯೋಜಿಸಿದ್ದ ವಾರ್ಷಿಕೋತ್ಸವ ಕಿಡ್ಡೀ ಕಾರ್ನಿವಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲವನ್ನು ಶಾಲೆಯಿಂದ ಅವಲಂಬಿಸುವುದು ತಪ್ಪು. ಮನೆಯಲ್ಲಿ ಪೋಷಕರು ಮಕ್ಕಳನ್ನು ಹೇಗೆ ಬೇಳೆಸುತ್ತಾರೋ ಹಾಗೆ ಸಮಾಜದಲ್ಲಿ ವ್ಯವಹರಿಸುತ್ತಾರೆ. ಹಾಗಾಗಿ ಕುಟುಂಬದ ಸದಸ್ಯರು ಮಗುವಿನ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಜವಾಬ್ದಾರಿಯುತ ಪೋಷಕರು ಮಕ್ಕಳ ಮೊಬೈಲ್ ಗೀಳನ್ನು ಬಿಡಿಸಿ ಹೆಚ್ಚು ಅಂಕಗಳನ್ನು ಗಳಿಸಲು ಉತ್ತೇಜಿಸಿ ಎಂದು ಸಲಹೆ ನೀಡಿದರು.
ಬಿಇಓ ಎಸ್.ನಾಗಭೂಷಣ್ ಮಾತನಾಡಿ, ಮಗುವಿಗೆ ಶಾಲೆಗಳಲ್ಲಿ ಕೇವಲ ಪಠ್ಯಬೋಧನೆ ಮಾಡಿದರಷ್ಟೇ ಸಾಲದು ಚಿಕ್ಕ ವಯಸ್ಸಿನಿಂದಲೇ ಅವರಿಗೆ ಒಳ್ಳೆಯ ಸಂಸ್ಕಾರ ಕೊಡುವಂತಹ ವಾತವರಣ ಕಲ್ಪಿಸಿ ಅದಕ್ಕೆ ಪೂರಕವಾದ ಚಟುವಟಿಕೆಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳವುದು ಅವಶ್ಯವಾಗಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಬಿ.ವಿಜಯಕುಮಾರ್ ಮಾತನಾಡಿ, ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪೋಷಕರ ಪಾತ್ರ ಮತ್ತು ಸಹಕಾರ ಬಹುಮುಖ್ಯ ಎಂದರು. ಮಕ್ಕಳನ್ನು ಐಟಿ ಬಿಟಿಗೆಂದೇ ತಯಾರು ಮಾಡಬೇಡಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರತೆಯನ್ನು ಬೆಳಿಸಿಕೊಳ್ಳುವಂತಹ ಪದವಿಗಳಿಗೆ ಪ್ರೋತ್ಸಾಹ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪ್ರತೀಕ್ಷಾ ಎಸ್.ಪಿ, ರಕ್ಷಾ ಬಿ.ಎಂ ಮತ್ತು ಅಭಯ್ ಅವರಿಗೆ ‘ವಿದ್ಯಾ ವಿಕಾಸ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಂಸ್ಥೆಯ ನಿರ್ದೇಶಕಿ ಪಿ.ಸಿ.ಸುನಿತಾ, ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ.ಪೃಥ್ವೀಶ, ಎನ್.ಎಸ್.ಸ್ನೇಹಾ, ಪ್ರಾಚಾರ್ಯ ಪಿ.ಬಸವರಾಜಯ್ಯ, ಮುಖ್ಯ ಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ ಮತ್ತಿತರರಿದ್ದರು.