ಮುಖ್ಯ ಸುದ್ದಿ
ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ | ಮೂರು ದಿನ ಸರಳ ಆಚರಣೆ
CHITRADURGA NEWS | 22 FEBRUARY 2024
ಚಿತ್ರದುರ್ಗ: ಬರದ ಹಿನ್ನೆಲೆಯಲ್ಲಿ ಈ ಬಾರಿ ಸಿರಿಗೆರೆಯಲ್ಲಿ ಮೂರು ದಿನ ತರಳಬಾಳು ಹುಣ್ಣಿಮೆ ಸರಳವಾಗಿ ಆಚರಣೆಯಾಗುತ್ತಿದೆ. ಇಂದು ಬೆಳಿಗ್ಗೆ 9.30ಕ್ಕೆ ಶಿವಧ್ವಜಾರೋಹಣದ ಮೂಲಕ ವಿದ್ಯುಕ್ತ ಚಾಲನೆ ದೊರೆಯಲಿದೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಸುವರ್ಣವಕಾಶ | ನಿಮಗಾಗಿ ಉದ್ಯೋಗದ ಬಾಗಿಲು ತೆರೆದಿವೆ 500 ಕಂಪನಿಗಳು | ಕೂಡಲೇ ನೋಂದಣಿ ಮಾಡಿ
ರೈತ ಸಮುದಾಯಕ್ಕೆ ಮಾಹಿತಿ ನೀಡುವ ಹಲವು ಮಳಿಗೆಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಮಠದ ಪ್ರಕಟಣೆಗಳ ಪ್ರದರ್ಶನ ಮತ್ತು ಮಾರಾಟ ಕೇಂದ್ರ ತೆರೆಯಲಾಗಿದೆ. ಮೂರು ದಿನಗಳ ಕಾಲವೂ ಸಿಹಿ ಊಟದ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಮೈನವಿರೇಳಿಸಿದ ಜೋಡೆತ್ತಿನ ಬಂಡಿ ಓಟ | ಶಿಳ್ಳೆ, ಕೇಕೆ ಹಾಕಿ ಜನರ ಸಂಭ್ರಮ
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕರಾದ ಎಂ. ಚಂದ್ರಪ್ಪ, ಬಿ.ಪಿ. ಹರೀಶ್, ಎಚ್.ಡಿ. ತಮ್ಮಯ್ಯ, ಬಿ. ದೇವೇಂದ್ರಪ್ಪ ಭಾಗವಹಿಸಲಿದ್ದಾರೆ. ಗಂಗಾವತಿ ಪ್ರಾಣೇಶ್, ಅಣ್ಣಾಪುರ ಶಿವಕುಮಾರ್ ಉಪನ್ಯಾಸ ನೀಡಲಿದ್ದಾರೆ.
ದಾವಣಗೆರೆ, ಜಗಳೂರು, ಚನ್ನಗಿರಿ, ಹರಿಹರ, ಹರಪನಹಳ್ಳಿ, ಕೊಟ್ಟೂರು, ರಾಣೆಬೆನ್ನೂರು, ಹಳೆಬೀಡು, ಹೊಳಲ್ಕೆರೆ, ಚಿತ್ರದುರ್ಗ, ತಿಪಟೂರು ಮತ್ತು ಭದ್ರಾವತಿ ತಾಲ್ಲೂಕಿನ ಯುವಕರನ್ನು ಸಂಘಟಿಸಿ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಒಂದು ಸುತ್ತಿನ ಸ್ಪರ್ಧೆಗಳನ್ನು ನಡೆಸಲಾಗಿದೆ. ಅಂತಿಮ ಸುತ್ತಿನ ಸ್ಪರ್ಧೆಗಳು ಫೆ.22 ಮತ್ತು 23 ರಂದು ನಡೆಯಲಿವೆ.
ಫೆ.24 ರಂದು ಸಿಂಹಾಸನಾರೋಹಣ ನಡೆಯಲಿದೆ. ಈ ಬಾರಿ ಪಲ್ಲಕ್ಕಿ ಮೆರವಣಿಗೆಯನ್ನು ಈಗಾಗಲೇ ಶ್ರೀಗಳು ನಿರಾಕರಿಸಿದ್ದಾರೆ. ಬೆಳ್ಳಿಯ ಸಿಂಹಾಸನದ ಮೇಲೆ ಕುಳಿತು ಭಕ್ತರಿಗೆ ಆಶೀರ್ವಚನ ನೀಡುವ ಪರಂಪರೆ ನಡೆಯಲಿದೆ.
ದೇಶಕ್ಕಾಗಿ ಹೋರಾಡಿ ಹುತಾತ್ಮರಾದವರ ಕುಟುಂಬದವರಿಗೆ ಅಂತಿಮ ದಿನದಂದು ತರಳಬಾಳು ಮಠದಿಂದ ₹ 1 ಲಕ್ಷ ಆರ್ಥಿಕ ನೆರವು ನೀಡಿ ಸತ್ಕರಿಸಲಾಗುತ್ತಿದೆ. ಬೆಂಗಳೂರಿನ ಕ್ಯಾಪ್ಟನ್ ಎಂ.ಜಿ. ಪ್ರಾಂಜಲ್, ಗೋಕಾಕಿನ ಮಂಜುನಾಥ ಗೌಡನ್ನವರ, ಕಲಬುರಗಿಯ ಸಿ.ಟಿ. ರಾಜಕುಮಾರ್ ಮಾವಿನ್, ಜಗಳೂರಿನ ವೈ. ಹನುಮಂತಪ್ಪ, ಚಿತ್ರದುರ್ಗದ ಆರ್. ಸುನೀತಾ, ನಿಪ್ಪಾಣಿಯ ಪ್ರಕಾಶ್ ಜಾಧವ ಕುಟುಂಬದವರಿಗೆ ಈ ಬಾರಿ ಆರ್ಥಿಕ ನೆರವು ನೀಡಿ ಗೌರವಿಸಲಾಗುತ್ತಿದೆ.
ಮೂರು ದಿನ ಸಂಜೆ ವಚನಗೀತೆ, ಭರತನಾಟ್ಯ, ವಚನ ನೃತ್ಯ, ನೃತ್ಯ ರೂಪಕ, ಜಾನಪದ ನೃತ್ಯ, ದೊಡ್ಡಾಟ, ಯಕ್ಷಗಾನ, ಮಲ್ಲಿ ಹಗ್ಗ, ಮಲ್ಲಕಂಬ ಪ್ರದರ್ಶನ ನಡೆಯಲಿದೆ.