ಮುಖ್ಯ ಸುದ್ದಿ
CNG GAS ತುಂಬುವಾಗ ಟ್ಯಾಂಕರ್ ಸ್ಪೋಟ | ಓರ್ವ ಸಾವು
CHITRADURGA NEWS | 10 APRIL 2025
ಚಿತ್ರದುರ್ಗ: CNG ಗ್ಯಾಸ್ ಫಿಲ್ಲಿಂಗ್ ಮಾಡುವಾಗ ಟ್ಯಾಂಕರ್ ಸ್ಪೋಟವಾಗಿ ಗ್ಯಾಸ್ ಟ್ಯಾಂಕರ್ ಚಾಲಕ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಏ.15 ಮತ್ತು 16 ರಂದು ಜಿಲ್ಲೆಯ ಸರ್ಕಾರಿ ನೌಕರರಿಗೆ ಎರಡು ದಿನ ಸಾಂದರ್ಭಿಕ ರಜೆ
ಚಿತ್ರದುರ್ಗ ನಗರದ ಹೊರ ವಲಯದ ಜಿ.ಆರ್.ಹಳ್ಳಿ ಬಳಿಯಿರುವ ಮಹಾನಗರ್ ಸಿಎನ್ಜಿ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್ ಬಳಿ ಘಟನೆ ನಡೆದಿದೆ.
ಘಟನೆಯಲ್ಲಿ ಶಿವಮೊಗ್ಗ ಮೂಲದ ಲಕ್ಷ್ಮಣ (38) ಸ್ಥಳದಲ್ಲೇ ಮೃತಪಟ್ಟಿದ್ದು, ಗ್ಯಾಸ್ ಬಂಕ್ ಮೇಲ್ಬಿಚಾರಕ ರಘು, ಗ್ಯಾಸ್ ಪಿಲ್ಲರ್ ಗಂಗಾಧರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ಯಾಸ್ ಟ್ಯಾಂಕರ್ ಗೆ ಓವರ್ ಲೋಡ್ ಮಾಡಿದ್ದರಿಂದ ಅವಘಡ ನಡೆದಿದೆ ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ಸೋರಿಕೆ ನಿಯಂತ್ರಿಸಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಇಂದಿನ ಮಾರುಕಟ್ಟೆಯಲ್ಲಿ ಅಡಿಕೆಗೆ ಎಷ್ಟು ರೇಟ್
ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಮುದ್ದುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.