Connect with us

Mahabharata: ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಗ್ರಂಥ ಓದುವ ಹವ್ಯಾಸ ರೂಢಿಸಿಕೊಳ್ಳಿ | ತರಳಬಾಳು ಶ್ರೀ 

ತರಳಬಾಳು ನುಡಿಹಬ್ಬ

ಮುಖ್ಯ ಸುದ್ದಿ

Mahabharata: ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಗ್ರಂಥ ಓದುವ ಹವ್ಯಾಸ ರೂಢಿಸಿಕೊಳ್ಳಿ | ತರಳಬಾಳು ಶ್ರೀ 

CHITRADURGA NEWS | 11 NOVEMBER 2024

ಚಿತ್ರದುರ್ಗ: ಭಾರತ ಸಾಂಸ್ಕೃತಿಕವಾಗಿ ಹಿರಿಮೆ ಪಡೆದಿದ್ದು, ಎಲ್ಲಾ ವಿದ್ಯಾರ್ಥಿಗಳು ರಾಮಾಯಣ(Ramayana), ಮಹಾಭಾರತ(Mahabharata) ಗ್ರಂಥಗಳನ್ನು ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಸಿರಿಗೆರೆಯ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.

ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ನವೆಂಬರ್ 11 | ಆರ್ಥಿಕ ಸಮಸ್ಯೆ, ಅನಿರೀಕ್ಷಿತ ಪ್ರಯಾಣ, ಆರೋಗ್ಯದಲ್ಲಿ ಎಚ್ಚರ

ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜರುಗಿದ ತರಳಬಾಳು ನುಡಿಹಬ್ಬ 2024ರ ಮೂರನೇ ದಿನದ ಮಹಿಳೆ ಮತ್ತು ಯುವಜನತೆ ಗೋಷ್ಠಿಯಲ್ಲಿ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ದೇಶಾದ್ಯಾಂತ ಇಂದು ಅನೇಕ ಕ್ರೌರ್ಯ, ಅಮಾನುಷ ಕೃತ್ಯಗಳು, ದುಶ್ಚಟಗಳು ಹೆಚ್ಚಾಗಿದ್ದು, ಮನುಷ್ಯ ಮನುಷ್ಯನನ್ನೆ ತಿನ್ನುವ ಕಾಲ ಬಂದಿದೆ. ಆದ್ದರಿಂದ ಎಲ್ಲರೂ ಸಕಲ ಜೀವರಾಶಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರ ಚಿಂತನೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ಎಂದು ಹೇಳಿದರು.

ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪುರಸ್ಕೃತ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಕರೆಯುವ ಪದ್ಧತಿಗೆ ತೀಲಾಂಜಲಿ ಹಾಕಿ, ಅದಕ್ಕಾಗಿ ಯೋಗ್ಯ ಸಮಿತಿಯನ್ನು ರಚಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅರ್ಹ, ಯೋಗ್ಯರನ್ನು ಆಯ್ಕೆ ಮಾಡುವ ಹೊಸ ವ್ಯವಸ್ಯೆಗಳು ಜಾರಿಯಾಗಬೇಕು ಎಂದರು.

ಕ್ಲಿಕ್ ಮಾಡಿ ಓದಿ: BUS: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ಹೊಸನಗರ ಮೂಲೆಗದ್ದೆಯ ಸದಾನಂದ ಶಿವಯೋಗಾಶ್ರಮದ ಶ್ರೀಮ.ನಿ.ಪ್ರ ಅಭಿನವ ಚನ್ನಬಸವಸ್ವಾಮಿಗಳು ಮಾತನಾಡಿ, ಭಾರತದಲ್ಲಿ ಸಾಧು ಸಂತರಿಂದ ಭಾರತಕ್ಕೆ ಬೆಲೆ ಬಂದಿದೆ. ಸಂಸ್ಕಾರಯುತ ಶಿಕ್ಷಣ ಇಂದು ಎಲ್ಲಾಕಡೆ ಕಡಿಮೆಯಾಗಿದೆ. ಆದರೆ ಇಂದು ಮಠಗಳಿಂದ ಶಿಕ್ಷಣ ಪಡೆದವರಲ್ಲಿ ಸಂಸ್ಕಾರಯುತ ಶಿಕ್ಷಣ, ಶಿಸ್ತು, ರೂಢಿಯಲ್ಲಿದೆ. ಭಾರತದಲ್ಲಿ ವಚನಗಳನ್ನು ತಂತ್ರಾಂಶದಲ್ಲಿ ರೂಪಿಸಿರುವ ಏಕೈಕ ಗುರುಗಳು ಸಿರಿಗೆರೆಯ ಶ್ರೀಗಳು ಮೊದಲಿಗರು.

ಜೀವನದಲ್ಲಿ ಗುರುಗಳ ಸೇವೆ ಮಾಡುವುದು ಪುಣ್ಯದ ಕೆಲಸ. ಎಲ್ಲರ ಕನಸು ನನಸುಮಾಡುವ ಇಡೀ ಸಮಾಜ ಜಗತ್ತು, ನೋಡುವ ಹಾಗೆ ಸಾಧನೆ ಮಾಡುವ ಶಕ್ತಿ ನಮ್ಮೊಳಗಿದೆ. ವಸ್ತುಗಳ ಬದಲು ವ್ಯಕ್ತಿಗಳನ್ನು ಪ್ರೀತಿ ಮಾಡಿದಾಗ ನಮ್ಮ ಜೀವನಕ್ಕೆ ಬೆಲೆ ಲಭಿಸಲಿದೆ. ನಾಡಿನಲ್ಲಿರುವ ಬಹು ದೊಡ್ಡ ಗುರುಮನೆ ಎಂದರೆ ಅದುವೇ ನಮ್ಮ ಸಿರಿಗೆರೆಯ ತರಳಬಾಳು ಮನೆ. ನಾಡೊಂದು ಸುಖ ಸಮೃದ್ಧಿಯ ವೇದಿಕೆಯಾಲಕಿ ಎಂದರು.

ದಾವಣಗೆರೆಯ ಕನ್ನಡ ಉಪನ್ಯಾಸಕಿ ಡಾ.ಗೀತಾಬಸವರಾಜ್ ಮಾತನಾಡಿ, ಶತಶತಮಾನಗಳಿಂದ ಮಹಿಳೆ ಶ್ರೇಷ್ಠಳು, ವಚನಕಾರರು ಮಹಿಳೆಯರಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಕೌಟುಂಬಿಕ ವಲಯಗಳಲ್ಲಿ ಮಹಳೆಯ ಮಹತ್ವ. ಮಹಿಳೆಯು ಬದುಕಿನ ನೇತಾರಳಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯ ಸಾಧನೆಯ ಹಾದಿ ಮೆಚ್ಚುವಂತಹದ್ದು.

ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಹರಿದು ಬಂತು 1 ಸಾವಿರ ಕ್ಯೂಸೆಕ್ ನೀರು

ಸಾಧನೆಗೆ ಸ್ಪೂರ್ತಿಯೇ ಮಹಿಳೆ. ಪ್ರತಿಯೊಬ್ಬ ಮಹಿಳೆಯಲ್ಲಿ ಚೈತನ್ಯ ಶಕ್ತಿ ಅಡಗಿದೆ. ಅಸಾಹಕತೆಯ ಸ್ಥಿತಿಯ ಮಹಿಳೆಯು ಇಂದು ಎಲ್ಲಾ ನಿಲುವುಗಳನ್ನು ದಾಟಿ ಮೆಟ್ಟಿನಿಂತಿದ್ದಾಳೆ.

ಉಡುಪಿಯ ಹಾಸ್ಯ ಭಾಶಣಕಾರರಾದ ಸಂಧ್ಯಾಶೆಣೈ ಮಾತನಾಡಿ ಮೌಲ್ಯಗಳು ಯುವಕರ ರಕ್ತದಲ್ಲಿ ಕರಗತವಾಗಬೇಕು. ಯಾರನ್ನೇ ಅಪಮಾನ ಮಾಡದೇ ಬದುಕುವುದು ಸಾರ್ಥಕ.

ಯುವಕರು ಹಸತನ ಹೊಸ ವಿಚಾರಗಳಿಗೆ ಬೆಲೆ ನೀಡಿ ಸಂಸ್ಕಾರಯುತ ಜೀವನ ನಡೆಸಬೇಕಿದೆ. ಇಂದು ತಪ್ಪನ್ನು ಸರಿಪಡಿಸುವ ಜನರೇ ಸಿಗುವುದಿಲ್ಲ. ನಮ್ಮ ಆತ್ಮ ಹೇಳಿದಾಗೆ ಕೇಳಿ ಸಾಧಿಸುವ ಛಲ ನಮ್ಮಲ್ಲಿರಬೇಕು. ನಾವುಗಳು ಯಾವುದನ್ನು ರೂಢಿಸಿಕೊಳ್ಳುವತ್ತೇವೆಯೋ ಅದನ್ನು ಪಡೆಯುತ್ತೇವೆ ಎಂದರು.

2024ರ ರಾಜ್ಯೋತ್ಸವ ಪುರಸ್ಕೃತರಾದ ಸಾಹಿತಿಗಳಾದ ಬಿ.ಟಿ.ಲಲಿತನಾಯ್ಕ್, ತಾಳಿಕೋಟೆಯ ಅಶೋಕ್.ಎಸ್.ಹಂಜಲಿ ಮಾತನಾಡಿದರು.

ಕ್ಲಿಕ್ ಮಾಡಿ ಓದಿ: ಕಬೀರಾನಂದ ಮಠದಲ್ಲಿ ಶಿವಲಿಂಗಾನಂದ ಸ್ವಾಮೀಜಿ ಜನ್ಮ ದಿನಾಚರಣೆ | ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮಾದಾರ ಚನ್ನಯ್ಯ ಸ್ವಾಮೀಜಿ ಭಾಗೀ

ಕಾರ್ಯಕ್ರಮದಲ್ಲಿ ಹಾಸನ ಹಾಗೂ ಬಳ್ಳಾರಿಯ ಕಸಾಪ ಅಧ್ಯಕ್ಷರಾದ ಎಚ್.ಎಲ್ ಮಲ್ಲೇಶ ಗೌಡ, ನಿಷ್ಠಿ ರುದ್ರಪ್ಪ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version