ಮುಖ್ಯ ಸುದ್ದಿ
ಚಿತ್ರದುರ್ಗ ನ್ಯೂಸ್ ಓದುಗರಿಗೆ ನಮಸ್ತೆ | ಲೋಕಸಭೆ ಚುನಾವಣೆಯ ಇಂಚಿಂಚೂ ಮಾಹಿತಿಗೆ ಇಂದು ನಮ್ಮೊಂದಿಗಿರಿ..


CHITRADURGA NEWS | 04 JUNE 2024
ಚಿತ್ರದುರ್ಗ: ಆತ್ಮೀಯ ಚಿತ್ರದುರ್ಗ ನ್ಯೂಸ್ ಓದುಗರಿಗೆ ನಮಸ್ತೆ. ಇಲ್ಲಿಗೆ 9 ತಿಂಗಳ ಹಿಂದೆ ಆರಂಭವಾದ ಚಿತ್ರದುರ್ಗ ನ್ಯೂಸ್ ಎಂಬ ಈ ಪುಟ್ಟ ಡಿಜಿಟಲ್ ಮಾಧ್ಯಮವನ್ನು ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆ, ಹೊರ ರಾಜ್ಯ, ಹೊರ ದೇಶಗಳಲ್ಲೂ ಸಾವಿರಾರು ಓದುಗರು ಮೆಚ್ಚಿಕೊಂಡು ಕೈ ಹಿಡಿದು ನಡೆಸುತ್ತಿರುವ ಪರಿಗೆ ಮನಸೋತಿದ್ದೇವೆ.
ನಿಮ್ಮ ಈ ಪ್ರೀತಿ, ಬೆಂಬಲ, ಪ್ರೋತ್ಸಾಹವೇ ನಮ್ಮನ್ನು ಮತ್ತಷ್ಟು ಕೆಲಸ ಮಾಡಲು ಅಣಿಗೊಳಿಸುತ್ತಿದೆ.
ಅತ್ಯಂತ ವಿಶ್ವಾಸಾರ್ಹ ಹಾಗೂ ಆರೋಗ್ಯಪೂರ್ಣ, ಸಮಾಜದ ಹಿತಕ್ಕಾಗಿ, ಕೆಲವೊಮ್ಮೆ ಕೆಟ್ಟ ಸುದ್ದಿಗಳಾದರೂ ಜಾಗೃತಿಗಾಗಿ ಬೇರೆ ಆಯಾಮದಲ್ಲಿ ಕಟ್ಟಿಕೊಡುವ ಮೂಲಕ ನಿಮ್ಮೆಲ್ಲರ ನಂಬಿಕೆ ಉಳಿಸಿಕೊಂಡು ಮುನ್ನಡೆಯುತ್ತಿರುವುದಕ್ಕೆ ನೀವು ತೋರಿಸುತ್ತಿರುವ ಮೆಚ್ಚುಗೆಯೇ ಸಾಕ್ಷಿ.

ಚಿತ್ರದುರ್ಗ ನ್ಯೂಸ್ ಡಿಜಿಟಲ್ ಸುದ್ದಿ ಮಾಧ್ಯಮ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಎದುರಿಸುತ್ತಿದ್ದೇವೆ. ಈಗಾಗಲೇ ನಿಸ್ಪಕ್ಷಪಾತವಾಗಿ ಚುನಾವಣಾ ಸುದ್ದಿಗಳನ್ನು ಕಟ್ಟಿಕೊಟ್ಟಿದ್ದು, ಈ ಚುನಾವಣೆ ಪೂರ್ಣಗೊಳ್ಳಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ.
ಅದೂ, ಇಂದು ನಡೆಯುತ್ತಿರುವ ಮತ ಎಣಿಕೆ. ಮತ ಎಣಿಕೆ ಮುಗಿದು ಫಲಿತಾಂಶ ಹೊರ ಬಿದ್ದರೆ 2024ನೇ ಲೋಕಸಭಾ ಚುನಾವಣೆ ಸಂಪನ್ನವಾಗಲಿದೆ.
ಈಗಾಗಲೇ ವಿಶಿಷ್ಟವಾಗಿ ಚುನಾವಣಾ ಸುದ್ದಿಗಳನ್ನು ಕಟ್ಟಿಕೊಟ್ಟಿರುವ ಚಿತ್ರದುರ್ಗ ನ್ಯೂಸ್, ಇಂದು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಪರಿಣಾಮಕಾರಿಯಾಗಿ ನಿಮ್ಮ ಮುಂದಿಡುವ ಸವಾಲು ತೆಗೆದುಕೊಂಡಿದೆ.
ಇತರೆ ಮಾಧ್ಯಮಗಳಲ್ಲಿ ನಾಡಿನ ಬೇರೆ ಬೇರೆ ಜಿಲ್ಲೆ, ರಾಜ್ಯದ ಸುದ್ದಿಗಳಿಗೆ ಆಧ್ಯತೆ ಸಿಕ್ಕಿದರೆ ಚಿತ್ರದುರ್ಗ ನ್ಯೂಸ್ ಇದೇ ಮೊಟ್ಟ ಮೊದಲನೆ ಬಾರಿಗೆ ಚಿತ್ರದುರ್ಗ ಲೋಕಸಭಾ ಚುನಾವಣೆಯ ಇಂಚಿಂಚು ಮಾಹಿತಿಯನ್ನೂ ಇಡೀ ದಿನ ಕಟ್ಟಿಕೊಡುವ ಯೋಜನೆ ರೂಪಿಸಿದೆ.

chitradurga news logo
ಲೋಕಸಭೆ ಚುನಾವಣೆ ಮತ ಎಣಿಕೆ ಕೇಂದ್ರದ ಇಂಚಿಂಚೂ ಮಾಹಿತಿ, ಪ್ರತಿ ಸುತ್ತಿನ ಎಣಿಕೆಯನ್ನು ಅತ್ಯಂತ ವಿಶ್ವಾಸಾರ್ಹ ಹಾಗೂ ತ್ವರಿತವಾಗಿ ನಿಮ್ಮ ಮುಂದಿಡಲು ನಮ್ಮ ತಂಡ ಕೆಲಸ ಮಾಡಲಿದೆ.
ಈ ನಿಟ್ಟಿನಲ್ಲಿ ಇಂದು ಚಿತ್ರದುರ್ಗ ಕ್ಷೇತ್ರದ ಪ್ರತಿ ವಿಷಯವನ್ನೂ ವಿವರವಾಗಿ ನೀವು ಕುಳಿತಲ್ಲಿಯೇ ತಿಳಿದುಕೊಳ್ಳಲು ಚಿತ್ರದುರ್ಗ ನ್ಯೂಸ್ FOLLOW ಮಾಡಿ. ನಮ್ಮ ವಾಟ್ಸಪ್ ಗ್ರೂಪ್ ಸೇರುವ ಮೂಲಕವೂ ನೀವು ಸುದ್ದಿಗಳನ್ನು ಪಡೆದುಕೊಳ್ಳಬಹುದು.
ಅಥವಾ, www.chitradurganews.com ಓಪನ್ ಮಾಡಿದ ತಕ್ಷಣ ಬರುವ ನೋಟಿಫಿಕೇಶನ್ ENABLA ಮಾಡಿಕೊಂಡರೆ ಇನ್ನು ಮುಂದೆ ನಾವು ಹಾಕುವ ಪ್ರತಿ ಸುದ್ದಿಯೂ ನಿಮ್ಮ ಮೊಬೈಲಿನಲ್ಲಿ ಬಂದು ಕುಳಿತುಕೊಳ್ಳುತ್ತದೆ.
ಇದರೊಟ್ಟಿಗೆ ಚಿತ್ರದುರ್ಗ ನ್ಯೂಸ್ FACEBOOK PAGE, INSTAGRAM, YOUTUBE SUBSCRIBE ಮಾಡಿಕೊಳ್ಳುವ ಮೂಲಕ ವೀಡಿಯೋ ರೂಪದಲ್ಲೂ ಸುದ್ದಿಗಳನ್ನು ನೋಡಬಹುದು.
ಈ ವಿಚಾರವನ್ನು ನೀವಷ್ಟೇ ಓದಿ ಸುಮ್ಮನಾಗುವುದಕ್ಕಿಂತ ನಿಮ್ಮ ಬಂಧು, ಬಳಗ, ನೆಂಟರು, ಸ್ನೇಹಿತರು, ಊರಿನವರಿಗೆ FORWARD ಮಾಡುವ ಮೂಲಕ ಅವರನ್ನೂ ಚಿತ್ರದುರ್ಗ ನ್ಯೂಸ್ ಬಳಗಕ್ಕೆ ಕರೆತನ್ನಿ.
ಧನ್ಯವಾದಗಳೊಂದಿಗೆ
ಚಿತ್ರದುರ್ಗ ನ್ಯೂಸ್ ತಂಡ.
