CHITRADURGA NEWS | 04 FEBRUARY 2024
ಚಿತ್ರದುರ್ಗ: ‘ಗರ್ಭಗುಡಿ ಹಾಗೂ ಸುಕನಾಸಿಗೆ ಅನ್ಯರಿಗೆ ಪ್ರವೇಶ ಇಲ್ಲ. ಜತೆಗೆ ಇಷ್ಟು ವರ್ಷ ಗರ್ಭಗುಡಿ ಪ್ರವೇಶಿಸು ವುದಾಗಿ ಮಠಾಧೀಶರು ಸೇರಿ ಯಾರೊಬ್ಬರೂ ಕೋರಿಕೊಂಡಿಲ್ಲ’ ಎಂದು ಹೊಸದುರ್ಗ ಬಳಿಯ ಬಾಗೂರು ಚನ್ನಕೇಶವ ದೇಗುಲದ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್ ಸ್ಪಷ್ಟಪಡಿಸಿದ್ದಾರೆ.
‘ನಾನು ಹೋಗಿದ್ದಕ್ಕೆ ದೇವಾಲಯ ತೊಳೆದರು’ ಎಂಬ ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ ಬೆನ್ನಲ್ಲೇ ಮಾಧ್ಯಮದವರ ಜತೆ ಮಾತನಾಡಿದ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್, ಜಾತಿಯ ಕಾರಣಕ್ಕೆ ಗರ್ಭಗುಡಿಗೆ ಬಿಡಲಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗೂರು ದೇವಸ್ಥಾನ ತೊಳೆದ ವಿಚಾರ | ಎಲ್ಲಿ ಗೊಂದಲ ಆಗಿದೆ ಎಂಬುದು ಬಹಿರಂಗವಾಗಲಿ | ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

‘ಬಾಗೂರು ಚನ್ನಕೇಶವ ಸ್ವಾಮಿ ದೇವಸ್ಥಾನಕ್ಕೆ ಮಠಾಧೀಶರು ಆರು ವರ್ಷಗಳಿಂದ ಬರುತ್ತಿದ್ದಾರೆ. ಗರ್ಭಗುಡಿ ಹೊರಗೆ ಕೈಮುಗಿದು ತೆರಳುತ್ತಾರೆ. ಒಳಬರುವ ಇಂಗಿತವನ್ನು ವ್ಯಕ್ತಪಡಿಸಿಲ್ಲ. ಜಾತಿಯ ಕಾರಣಕ್ಕೆ ಗರ್ಭಗುಡಿಗೆ ಬಿಡಲಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಇಲ್ಲಿ, ಜಾತಿ ಕಾರಣಕ್ಕೆ ಭೇದಭಾವ ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಅರ್ಚಕರು, ಅವರ ಕುಟುಂಬದವರು, ಬ್ರಾಹ್ಮಣ ರನ್ನು ಹೊರತುಪಡಿಸಿ ದೇಗುಲದ ಗರ್ಭಗುಡಿ ಮತ್ತು ಸುಕನಾಸಿಗೆ ಅನ್ಯರಿಗೆ ಪ್ರವೇಶವಿಲ್ಲ. ವಿಗ್ರಹದ ಪ್ರತಿಷ್ಠಾಪನೆ ಬಳಿಕ ಅನ್ಯರಿಗೆ ಗರ್ಭಗುಡಿ ಪ್ರವೇಶವಿಲ್ಲ. ಉತ್ಸವಮೂರ್ತಿ ಕೂರಿಸುವ ಸುಕನಾಸಿಗೆ ಬ್ರಾಹ್ಮಣರು ಅಥವಾ ಅರ್ಚಕರ ಕುಟುಂಬದ ಸದಸ್ಯರಿಗೆ ಮಾತ್ರ ಅವಕಾಶವಿದೆ. ಸ್ತ್ರೀಯರಿಗೆ ಸುಕನಾಸಿ ಬಳಿ ಪ್ರವೇಶವಿದೆಯೇ ಹೊರತು, ಗರ್ಭಗುಡಿಗೆ ಅಲ್ಲ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮುಂದೆಂದೂ ಬಾಗೂರಿನ ಚೆನ್ನಕೇಶವ ಸ್ವಾಮಿ ದೇವಾಲಯಕ್ಕೆ ಹೋಗಲ್ಲ | ಹೊಸದುರ್ಗ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ
‘ದೇವರಿಗೆ ಅಭಿಷೇಕ, ಅಲಂಕಾರ, ಪೂಜೆ ಹಾಗೂ ಮಹಾಮಂಗಳಾರತಿ ಮುಗಿದ ಬಳಿಕ ಯಾವುದೇ ಕಾರಣಕ್ಕೂ ದೇಗುಲ ಸ್ವಚ್ಛತೆ ಮಾಡುವುದಿಲ್ಲ. ಗ್ರಾಮದಲ್ಲಿ ಯಾರದ್ದಾದರೂ ಸಾವು ಸಂಭವಿಸಿದಾಗಷ್ಟೇ ಗರ್ಭಗುಡಿ ಆವರಣದಲ್ಲಿ ಪ್ರೋಕ್ಷಣೆ ಮಾಡಿ, ಶುದ್ಧೀ ಕರಿಸಲಾಗುತ್ತದೆ. ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಎಷ್ಟು ವರ್ಷಗಳ ಹಿಂದಿನ ಘಟನೆ ಬಗ್ಗೆ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
