Connect with us

    ನಾಳೆ ಶ್ರೀ ನೀಲಕಂಠೇಶ್ವರ ಸ್ವಾಮಿ ಕಾರ್ತಿಕ ಮಹೋತ್ಸವ

    Neelakanteshwara Bhasmalankara

    ಮುಖ್ಯ ಸುದ್ದಿ

    ನಾಳೆ ಶ್ರೀ ನೀಲಕಂಠೇಶ್ವರ ಸ್ವಾಮಿ ಕಾರ್ತಿಕ ಮಹೋತ್ಸವ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 15 DECEMBER

    ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 16 ಸೋಮವಾರ ಶ್ರೀ ನೀಲಕಂಠೇಶ್ವರ ದೇವರ ಕಾರ್ತಿಕ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

    ಸೋಮವಾರ ಸಂಜೆ 7 ಗಂಟೆಗೆ ದೀಪಾರಾಧನೆ ನಂತರ ಶ್ರೀ ನೀಲಕಂಠೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ಗಾಂಧಿ ವೃತ್ತದ ವರೆಗೆ ನಡೆಯಲಿದೆ.

    ಇದನ್ನೂ ಓದಿ: ವಿವಿ ಸಾಗರಕ್ಕೆ ಮತ್ತೆ ಆರಂಭವಾಯ್ತು ಒಳಹರಿವು | ಇಂದಿನ ನೀರಿನ ಮಟ್ಟ ಎಷ್ಟು ?

    ನಂತರ ಅಷ್ಟೋತ್ತರ ಬಿಲ್ವಾರ್ಜನೆ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ನಂತರ ಪ್ರಸಾದ ವ್ಯವಸ್ಥೆ ಇರುತ್ತದೆ. ಸಮಸ್ತ ಭಕ್ತಾದಿಗಳು ಭಾಗವಹಿಸಲು ವೀರಶೈವ ಸಮಾಜದ ಪ್ರಕಟಣೆ ತಿಳಿಸಿದೆ.

    ನೀಲಕಂಠೇಶ್ವರನಿಗೆ ಭಸ್ಮಾಲಂಕಾರ:

    ಶ್ರೀ ನೀಲಕಂಠೇಶ್ವರ ಸ್ವಾಮಿ ಕಾರ್ತಿಕ ಮಹೋತ್ಸವದ ಅಂಗವಾಗಿ ಇಂದು ಭಾನುವಾರ ಶಿವಲಿಂಗಕ್ಕೆ ಭಸ್ಮಾಲಂಕಾರ ಮಾಡಲಾಗಿತ್ತು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top