By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಆಹ್ವಾನ ಪತ್ರಿಕೆಯಲ್ಲಿ ಶ್ರೀ ಜಯದೇವ ಮುರುಘರಾಜೇಂದ್ರ ಕ್ರಿಡಾಂಗಣವೆಂದೇ ನಮೂದಿಸಿ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಆಹ್ವಾನ ಪತ್ರಿಕೆಯಲ್ಲಿ ಶ್ರೀ ಜಯದೇವ ಮುರುಘರಾಜೇಂದ್ರ ಕ್ರಿಡಾಂಗಣವೆಂದೇ ನಮೂದಿಸಿ

ಮುಖ್ಯ ಸುದ್ದಿ

ಆಹ್ವಾನ ಪತ್ರಿಕೆಯಲ್ಲಿ ಶ್ರೀ ಜಯದೇವ ಮುರುಘರಾಜೇಂದ್ರ ಕ್ರಿಡಾಂಗಣವೆಂದೇ ನಮೂದಿಸಿ

chitradurganews.com
Last updated: 24 January 2025 13:53
chitradurganews.com
5 months ago
Share
Jayadeva swamiji stadium naming
ಶ್ರೀ ಜಯದೇವ ಮುರುಘರಾಜೇಂದ್ರ ಕ್ರಿಡಾಂಗಣವೆಂದೇ ನಮೂದಿಸಿ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 24 JANUARY 2025

ಚಿತ್ರದುರ್ಗ: ಗಣರಾಜ್ಯೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಎಂದು ನಮೂದಿಸಿದ್ದು, ಇದು ಸರಿಯಲ್ಲ, ಕ್ರೀಡಾಂಗಣದ ನಿಜವಾದ ಹೆಸರು ಶ್ರೀ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣವಾಗಿದ್ದು, ಇದನ್ನೇ ಮುದ್ರಣ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈಗಾಗಲೇ ಆಹ್ವಾನ ಪತ್ರಿಕೆ ಮುದ್ರಣವಾಗಿದ್ದು, ಅದನ್ನು ಹಿಂಪಡೆದು ಕ್ರಿಡಾಂಗಣಕ್ಕೆ ನಾಮಕರಣ ಮಾಡಿರುವ ಹೆಸರನ್ನೇ ಮುದ್ರಿಸಬೇಕು ಎಂದು ಶ್ರೀ ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಣಿವೆ ಮಾರಮ್ಮನ ಪೋಟೋ ಕ್ಲಿಕ್ಕಿಸಿಕೊಂಡ ಡಿಕೆಶಿ

ನಗರದ ಚಳ್ಳಕೆರೆ ಟೋಲ್‍ಗೇಟ್ ಬಳಿಯಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಕ್ರೀಡಾಂಗಣಕ್ಕೆ ಅಂದಿನ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಅವರು, 1962 ರಲ್ಲಿ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿ ಕ್ರೀಡಾಂಗಣ ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಿದ್ದಾರೆ.

ಅಂದಿನಿಂದ ಈ ಕ್ರೀಡಾಂಗಣದ ಹೆಸರನ್ನು ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಕ್ರೀಡಾಂಗಣವೆಂದು ಕರೆಯಲಾಗುತ್ತಿದೆ. ಅಲ್ಲಿ ನಡೆಯುವ ಕಾರ್ಯಕ್ರಮಗಳ ಆಹ್ವಾನಪತ್ರಿಕೆಯಲ್ಲೂ ಸಹ ಇದೇ ಹೆಸರು ನಮೂದಿಸಲಾಗಿದೆ.

ಇದನ್ನೂ ಓದಿ: ಪ್ರವಾಸೋದ್ಯಮ ಇಲಾಖೆ | ಹೋಟೆಲ್, ರೆಸ್ಟೋರೆಂಟ್, ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಆದರೆ, ಜನವರಿ 26 ರಂದು ನಡೆಯುವ ಗಣರಾಜ್ಯೋತ್ಸವದ ಆಹ್ವಾನಪತ್ರಿಕೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಎಂದು ನಮೂದಿಸಿ ಸ್ವಾಮೀಜಿಗಳ ಹೆಸರನ್ನು ಬಿಟ್ಟಿರುವುದು ಖಂಡನೀಯ ಮತ್ತು ಇದು ತ್ರಿವಿದ ದಾಸೋಹಿಗಳಾದ ಪರಮಪೂಜ್ಯ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮಿಜೀಗಳ ಭಕ್ತರಿಗೆ ನೋವುಂಟು ಮಾಡಿದೆ.

ತಕ್ಷಣ ಈಗ ಮುದ್ರಿಸಿರುವ ಆಹ್ವಾನಪತ್ರಿಕೆಯನ್ನು ಹಿಂಪಡೆದು ಶ್ರೀಗಳ ಹೆಸರನ್ನು ಮುದ್ರಿಸಬೇಕು ಎಂದು ಸಮಿತಿಯ ಅಧ್ಯಕ್ಷ ಎನ್.ಜೀತೇಂದ್ರ, ಎ.ಬಿ.ಮಂಜುನಾಥ್, ರುದ್ರೇಶ್, ಅಭಿಲಾಶ್, ಯರಿಸ್ವಾಮಿ, ಛಲವಾದಿ ತಿಪ್ಪೇಸ್ವಾಮಿ ಮತ್ತಿತರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Chitradurga LatestChitradurga newsGovernment Science CollegeKannada NewsRepublic DayS. NijalingappaSri Jayadeva Murugharajendra Swamijiಎಸ್.ನಿಜಲಿಂಗಪ್ಪಕನ್ನಡ ಸುದ್ದಿಗಣರಾಜ್ಯೋತ್ಸವಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಲೇಟೆಸ್ಟ್ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಸರ್ಕಾರಿ ವಿಜ್ಞಾನ ಕಾಲೇಜು
Share This Article
Facebook Email Print
Previous Article ಅರ್ಜಿ ಅಹ್ವಾನ ಜಿಮ್ ಫಿಟ್ನೆಸ್, ನಿರೂಪಣಾ, ವಾರ್ತಾ ವಾಚಕ ತರಬೇತಿ ಶಿಬಿರ | ಅರ್ಜಿ ಆಹ್ವಾನ
Next Article ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | ಜೂನ್ 29 | ಆಕಸ್ಮಿಕ ಧನ ವ್ಯಯದ ಸೂಚನೆ, ಆಸ್ತಿ ವಿಷಯಗಳಲ್ಲಿ ವಿವಾದಗಳು
Dina Bhavishya
ಸೋಲು ಗೆಲುವಿಗಿಂತ ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ | ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್‍ ಗೌಡ
ಮುಖ್ಯ ಸುದ್ದಿ
Sadguru Pradeep participate hosadurga bandh
ಹೊಸದುರ್ಗ ಬಂದ್‌ | ಇಂದು ಅಂತ್ಯವಲ್ಲ, ಆರಂಭ | ಸದ್ಗುರು ಪ್ರದೀಪ್‌
ಹೊಸದುರ್ಗ
ಹೊಸದುರ್ಗ ಸ್ಥಿತಿ ಸಮುದ್ರದ ನೆಂಟಸ್ಥನ, ಉಪ್ಪಿಗೆ ಬರ | ಕೆ.ಎಸ್.ನವೀನ್
ಹೊಸದುರ್ಗ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up