ಮುಖ್ಯ ಸುದ್ದಿ
ಅಂತರದಂಗದ ಸೌಂದರ್ಯದಿಂದ ಜೀವನ ಸುಂದರ: ಶ್ರೀ ಬಸವಪ್ರಭು ಸ್ವಾಮೀಜಿ
ಚಿತ್ರದುರ್ಗ ನ್ಯೂಸ್.ಕಾಂ: ಸೀಬಾರ ಸಮೀಪದ ಗೂಳಯ್ಯನಹಟ್ಟಿ ಮೊರಾರ್ಜಿ ವಸತಿ ಶಾಲೆಯಲ್ಲಿ ಮುರುಘಾ ಮಠದಿಂದ ನಿತ್ಯ ಕಲ್ಯಾಣ ಮನೆ ಮನೆಗೆ ಚಿಂತನ ಶ್ರಾವಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜೀವನ ಸುಂದರವಾಗುವುದು ಅಂತರಂಗದಿಂದ ಸೌಂದರ್ಯದಿಂದ ಎಂದರು.
ಅಂತರ್ಮುಖಿಯಾದವರಿಗೆ ನೆಮ್ಮದಿ, ಸಂತೋಷ ಸಿಗುತ್ತದೆ. ಇಂದು ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಆ ಮೌಲ್ಯಗಳನ್ನು ಪುನರ್ ಪ್ರತಿಷ್ಠಾಪಿಸುವ ನಿಟ್ಟಿನಲ್ಲಿ ಎಲ್ಲರೂ ಸಮಾಜಕ್ಕೆ ಕೊಡುಗೆ ನೀಡಬೇಕಾಗಿದೆ. ನಾವು ನಿರಂತರವಾಗಿ ಒಳಿತನ್ನು ಮಾಡಬೇಕು. ಈ ಕಾರಣಕ್ಕೆ ಸಮಾಜಕ್ಕೆ ಪ್ರಜ್ಞಾವಂತರು ಬೇಕಿದ್ದಾರೆ. ಇದನ್ನೇ ಬಸವತತ್ವ ಹೇಳಿರುವುದು. ನಮ್ಮೊಳಗೆ ದೇವರನ್ನು ಕಾಣುವುದೇ ಬಸವತತ್ವ ಎಂದು ಹೇಳಿದರು.
ಇದನ್ನೂ ಓದಿ: ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ | ಎಷ್ಟು ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು, ಅತಿಥಿಗಳು ಏನು ಹೇಳಿದ್ರು..
ಸಿದ್ದವ್ವನಹಳ್ಳಿ ವೀರೇಶ್ ಮಾತನಾಡಿ, ಮನುಷ್ಯ ಬಾಹ್ಯ ಆಡಂಬರದೊಳಗೆ ಬದುಕುತ್ತಿದ್ದಾನೆ. ಜನರಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿವೆ. ವಚನಕಾರರಿಗೆ ಅಂತರಂಗದ ದೃಷ್ಟಿ ಹೆಚ್ಚಾಗಿತ್ತು. ನಾವು ನಮ್ಮನ್ನು ಬಿಟ್ಟು ಇತರರ ಬಗ್ಗೆ ಜಾಸ್ತಿ ಮಾತನಾಡುತ್ತೇವೆ. ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು. ವಚನಕಾರರು ಒಳಗಿನ ಸಂಸ್ಕಾರದ ಕಣ್ಣನ್ನು ಕೊಟ್ಟರು ಎಂದರು.
ಪಾವಗಡದ ಶ್ರೀ ರಾಮಮೂರ್ತಿ ಸ್ವಾಮೀಜಿ, ಪ್ರಾಂಶುಪಾಲ ಮಂಜುನಾಥ ರೆಡ್ಡಿ ಮಾತನಾಡಿದರು. ಗುತ್ತಿನಾಡು ಪ್ರಕಾಶ್, ಮುಖ್ಯಶಿಕ್ಷಕ ಮಲ್ಲಿಕಾರ್ಜುನ್ ಇದ್ದರು. ಶಿಕ್ಷಕರಿಯಾದ ಲಕ್ಷ್ಮಿ ಸ್ವಾಗತಿಸಿದರು. ಜಗದೀಶ್ವರಿ ಹಿರೇಮಠ ನಿರೂಪಿಸಿದರು.
(ಚಿತ್ರದುರ್ಗದ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ Facebook page follow ಮಾಡಿ https://www.facebook.com/chitradurganews?mibextid=ZbWKwL)