ಮುಖ್ಯ ಸುದ್ದಿ
ಶ್ರೀ ಅಯ್ಯಪ್ಪಸ್ವಾಮಿ 24ನೇ ವರ್ಷದ ಲಕ್ಷದೀಪೋತ್ಸವ | ಮಧ್ಯ ಕರ್ನಾಟಕದ ಶಬರಿಮಲೆ ಚಿತ್ರದುರ್ಗದಲ್ಲಿ ಸಂಭ್ರಮ
CHITRADURGA NEWS | 13 JANUARY 2024
ಚಿತ್ರದುರ್ಗ: ಮಧ್ಯ ಕರ್ನಾಟಕದ ಶಬರಿಮಲೆ ಎಂದೇ ಹೆಸರಾಗುತ್ತಿರುವ ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ 24ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಿವೆ.
ಜನವರಿ 15 ಸೋಮವಾರ ಸಂಜೆ 5 ಗಂಟೆಗೆ 24ನೇ ವರ್ಷದ ಲಕ್ಷ ದೀಪೋತ್ಸವ ಜರುಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಹಾಗೂ ಸ್ಥಳೀಯ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸುವರು. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶರಣ್ಕುಮಾರ್, ವಿಶೇಷ ಅತಿಥಿಗಳಾಗಿ ಮುಖಂಡರಾದ ಎ.ಆರ್. ತಿಪ್ಪೇಸ್ವಾಮಿ, ಲಕ್ಷ್ಮೀಕಾಂತ ರೆಡ್ಡಿ, ಮಹಾಂತೇಶ್, ಜಯರಾಮ ರೆಡ್ಡಿ, ದ್ಯಾಮಣ್ಣ, ಜಿ.ಎಂ.ಸುರೇಶ್, ಅರುಣ್ ಕುಮಾರ್, ಉಜ್ಜಿನಿ ಸ್ವಾಮಿ, ಲಿಂಗಂ ಶ್ರೀನಿವಾಸ್ ಬಾಬು ಮತ್ತಿತರರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಹೊಸದುರ್ಗಕ್ಕೆ ‘ಕ್ಲೀನ್ಸಿಟಿ’ ಗೌರವ
ವೇದಿಕೆ ಕಾರ್ಯಕ್ರಮದ ನಂತರ ಖ್ಯಾತ ಹಿನ್ನೆಲೆ ಗಾಯಕಿ ಶ್ರುತಿ, ಸರಿಗಮಪ ಸೀಸನ್ 20 ಖ್ಯಾತಿಯ ಯಶವಂತ್ ಇವರ ತಂಡದಿಂದ ಭಕ್ತಿ ಕುಸುಮಾಂಜಲಿ ಕಾರ್ಯಕ್ರಮ ನೆರವೇರಲಿದೆ.
ಕಲಾವತಿ ತಿಪ್ಪೇಸ್ವಾಮಿ ಮತ್ತು ಮಕ್ಕಳು ಈ ವರ್ಷದ ಅಯ್ಯಪ್ಪ ದೇವರಿಗೆ ಬಂಗಾರದ ಆಭರಣ ದಾನಿಗಳಾಗಿದ್ದಾರೆ.
ಜನವರಿ 14 ಭಾನುವಾರ ಸಂಜೆ ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಅಯ್ಯಪ್ಪ ಸ್ವಾಮಿಯ ಆಭರಣ ಮೆರವಣಿಗೆ ನಡೆಯಲಿದೆ.
ಸಂಜೆ 5:30ಕ್ಕೆ ಮೆರವಿಗೆ ಪ್ರಾರಂಭವಾಗಲಿದ್ದು, ವಾಸವಿ ಮಹಲ್ ದೇವಸ್ಥಾನ ಮುಂಭಾಗದಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ತಲುಪುವುದು. ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇರುಮುಡಿಯನ್ನು ಹೊತ್ತು ಮೆರವಣಿಗೆಯಲ್ಲಿ ಸನ್ನಿದಾನ ಮಂತ್ರಿ 18 ಮೆಟ್ಟಿಲುಗಳನ್ನು ಹತ್ತಬಹುದು ಎಂದು ದೇವಸ್ಥಾನದ ವ್ಯವಸ್ಥಾಪಕರು ಮನವಿ ಮಾಡಿದ್ದಾರೆ.