ಕ್ರೈಂ ಸುದ್ದಿ
ಯುಗಾದಿ ಹಬ್ಬಕ್ಕೆ ಮನೆಗೆ ಬಂದ ಅಮ್ಮನನ್ನೇ ಕೊಂದ ಮಗ

CHITRADURGA NEWS | 29 MARCH 2025
ಚಿತ್ರದುರ್ಗ: ಕುಡಿದು ಗಲಾಟೆ ಮಾಡುತ್ತಿದ್ದ ಮಗ ಹೆತ್ತ ತಾಯಿಯನ್ನೇ ಬಡಿದು ಕೊಂದಿರುವ ಅಮಾನವೀಯ ಘಟನೆ ನಡೆದಿದೆ.
Also Read: ಹೊಳಲ್ಕೆರೆ ಪೊಲೀಸರ ಕಾರ್ಯಾಚರಣೆ | 6 ಮಂದಿ ಜೂಜುಕೋರರ ಬಂಧನ | ರೂ.2.25 ಲಕ್ಷ ಹಣ ಜಪ್ತಿ
ಕುಡಿದು ಗಲಾಟೆ ಮಾಡುತ್ತಿದ್ದ ಮಗನಿಗೆ ಬುದ್ದಿ ಹೇಳಿದ ತಾಯಿ ಮಗನಿಂದಲೇ ಹೆಣವಾಗಿದ್ದಾಳೆ.
ತೆಂಗಿನ ಎಡೆಮಟ್ಟೆಯಿಂದ ತಾಯಿಯನ್ನು ಹೊಡೆದು ಕೊಂದಿರುವ ಘನೆ ಹಿರಿಯೂರು ತಾಲೂಕು ಹುಲಗಲಕುಂಟೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
65 ವೃಷದ ವೃದ್ಧೆ ಗಂಗಮ್ಮ ಪುತ್ರನಿಂದಲೇ ಹತ್ಯೆಯಾದ ದುರ್ದೈವಿ. 40 ವರ್ಷದ ಚಿತ್ರಲಿಂಗಪ್ಪ ತಾಯಿಯ ಕೊಲೆ ಮಾಡಿದರುವ ಪಾಪಿ.
ಆಸ್ತಿ ವಿಚಾರವಾಗಿ ಅಕ್ಕಂದಿರು ಹಾಗು ತಾಯಿಯ ಜೊತೆ ಜಗಳ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
Also Read: ಬೈಕಿಗೆ ಬಸ್ ಡಿಕ್ಕಿ | ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ | ಜೆಸಿಆರ್ ಬಳಿ ಘಟನೆ
ಗಂಡ ಪುಟ್ಟಯ್ಯನ ಸಾವಿನ ಬಳಿಕ ಮಗನನ್ನು ಬಿಟ್ಟು ಹೆಣ್ಣು ಮಕ್ಕಳ ಜೊತೆಗೆ ವಾಸವಿದ್ದ ತಾಯಿ ಗಂಗಮ್ಮ ಯುಗಾದಿ ಹಬ್ಬಕ್ಕಾಗಿ ಮಗನ ಮನೆಗೆ ಬಂದಿದ್ದಳು.
ಘಟನಾ ಸ್ಥಳಕ್ಕೆ ಹಿರಿಯೂರು ಡಿವೈಎಸ್ಪಿ ಶಿವಕುಮಾರ್, ಸಿಪಿಐ ಆನಂದ್ ಭೇಟಿ ನೀಡಿ ಪರಿಶೀಲಿಸಿದ್ದು, ಹಿರಿಯೂರು ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
