Connect with us

    ಬರಬೇಡ ಎಂದ ಮಾಧುಸ್ವಾಮಿ | ನಾಳೆ ಟಿಕೆಟ್ ಕೊಟ್ರೆ ನಾನೇ ಬೇಕು ಎಂದ ಸೋಮಣ್ಣ

    ಲೋಕಸಮರ 2024

    ಬರಬೇಡ ಎಂದ ಮಾಧುಸ್ವಾಮಿ | ನಾಳೆ ಟಿಕೆಟ್ ಕೊಟ್ರೆ ನಾನೇ ಬೇಕು ಎಂದ ಸೋಮಣ್ಣ

    CHITRADURGA NEWS | 19 MARCH 2024
    ಚಿತ್ರದುರ್ಗ: ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಹೆಸರು ಘೋಷಣೆಯಾಗುತ್ತಿದ್ದಂತೆ ಶುರುವಾದ ಸ್ಥಳೀಯರ ಅಸಮಾಧಾನ ಇನ್ನೂ ತಣಿದಂತ ಕಾಣುತ್ತಿಲ್ಲ. ಟಿಕೆಟ್‌ ಸಿಗುವ ಭರವಸೆಯಲ್ಲಿದ್ದ ಮಾಜಿ ಸಚಿವ ಮಾಧುಸ್ವಾಮಿಗೆ ವರಿಷ್ಠರು ಮಣೆ ಹಾಕದೆ ವಿ.ಸೋಮಣ್ಣ ಅವರನ್ನು ಕೈ ಹಿಡಿದಿದ್ದು ಎಲ್ಲದಕ್ಕೂ ಕಾರಣವಾಗಿದೆ.

    ಚಿತ್ರದುರ್ಗ ನಗರಕ್ಕೆ ಮಂಗಳವಾರ ಆಗಮಿಸಿದ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಮ್ಮ ಎಂದಿನ ಶೈಲಿಯಲ್ಲೇ ಮಠಗಳಿಗೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಮಾಧುಸ್ವಾಮಿ ಅವರನ್ನು ಒಮ್ಮೆ ಮಾತಾಡಿಸಿದೆ. ಆದರೆ ಬರಬೇಡ ಅಂತಾ ಹೇಳಿದರು. ನಾಳೆ ಮಾಧುಸ್ವಾಮಿ ಅವರಿಗೆ ಪಕ್ಷ ಟಿಕೆಟ್‌ ಕೊಟ್ಟರೂ ಸೋಮಣ್ಣ ಬೇಕು. ಏಕೆಂದರೆ ಈ ಹಿಂದೆ ಬಸವರಾಜ್ ಅವರಿಗೆ ಟಿಕೆಟ್‌ ನೀಡಿದಾಗ ನಾವು ಕೆಲಸ ಮಾಡಿದ್ದೇವೆ’ ಎಂದು ಹೇಳುವ ಮೂಲಕ ಮಾಧುಸ್ವಾಮಿಗೆ ರಾಜಕೀಯ ಸಂದೇಶ ರವಾನಿಸಿದರು.

    ಕ್ಲಿಕ್ ಮಾಡಿ ಓದಿ: https://chitradurganews.com/code-of-conduct-vigilance-for-hatti-tippesan-fair/

    ‘ಜಿಲ್ಲೆಯ ಎಲ್ಲ ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿದ್ದೇನೆ. ನಮಗೂ ಮಾದಾರ‌ ಚನ್ನಯ್ಯ ಗುರುಪೀಠಕ್ಕೂ ಅವಿನಾಭವ ಸಂಬಂಧವಿದೆ. ಈ ದೇಶದ ಭವಿಷ್ಯಕ್ಕಾಗಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದರೆ. ಹತ್ತಾರು ವರ್ಷ ನಾನು ಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಮೋದಿ ಕಳೆದ ಹತ್ತು ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.‌ಮೂರನೇ ಸಲ ಪ್ರಧಾನಿ ಆಗುತ್ತಾರೆ ಎನ್ನುವ ಅಚಲ ನಂಬಿಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕ್ಲಿಕ್ ಮಾಡಿ ಓದಿ: https://chitradurganews.com/plying-squad-to-prevent-illegal-excise-duty

    ತುಮಕೂರು ಕ್ಷೇತ್ರಕ್ಕೆ ನಾನು‌ ಸಾಕಷ್ಟು ಕೆಲಸ ಮಾಡಿದ್ದೇನೆ. ಸಮೀಕ್ಷೆ ಹಾಗೂ ನಮ್ಮ ಕೆಲಸ ನೋಡಿ ಪಕ್ಷದ ವರಿಷ್ಠರು ಟಿಕೆಟ್‌ ನೀಡಿದ್ದಾರೆ. ಈ ಚುನಾವಣೆಯಲ್ಲಿ‌ ನಾವೇಲ್ಲ ಗೌಣ.‌ ದೇಶಕ್ಕೆ ನರೇಂದ್ರ ಮೋದಿ ಅವರ ಅಗತ್ಯ ಅರ್ಥ ಮಾಡಿಕೊಂಡು ಜನರೇ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡುತ್ತಾರೆ’ ಎಂದು ತಿಳಿಸಿದರು.

    ಕ್ಲಿಕ್ ಮಾಡಿ ಓದಿ: https://chitradurganews.com/farmers-hard-work-made-the-canal-clean/

    ‘ಮಾಜಿ ಸಚಿವ ಈಶ್ವರಪ್ಪ ಅವರು ಪಕ್ಷದಲ್ಲಿ ಹಿರಿಯರು, ನಾನು ಅವರ ಅಭಿಮಾನಿ. ಎರಡು ಮೂರು ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ. ಅವರಿಗೆ ಆಗಿರುವ ನೋವನ್ನು ವರಿಷ್ಠರು ಶಮನ ಮಾಡುತ್ತಾರೆ’ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಸಂಪತ್, ಜಿ.ಟಿ.ಸುರೇಶ್‌ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಲೋಕಸಮರ 2024

    To Top