Connect with us

ರಾತ್ರಿ ಸಿಂಗಲ್ ಫೇಸ್ ಕರೆಂಟ್ | ಕೃಷಿ ಪಂಪ್ ಸೆಟ್ ಬಳಸದಂತೆ ಬೆಸ್ಕಾಂ ಮನವಿ 

ಬೆಸ್ಕಾ

ಮುಖ್ಯ ಸುದ್ದಿ

ರಾತ್ರಿ ಸಿಂಗಲ್ ಫೇಸ್ ಕರೆಂಟ್ | ಕೃಷಿ ಪಂಪ್ ಸೆಟ್ ಬಳಸದಂತೆ ಬೆಸ್ಕಾಂ ಮನವಿ 

CHITRADURGA NEWS | 17 FEBRUARY 2025

ಚಿತ್ರದುರ್ಗ: ರೈತರ ಪಂಪ್ ಸೆಟ್ ಗಳಿಗೆ ಹಗಲಿನ ವೇಳೆ 4 ಗಂಟೆಗಳ ಕಾಲ ಹಾಗೂ ರಾತ್ರಿ ವೇಳೆ 3 ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಮನೆಗಳಿಗೆ ನಿರಂತರ ಜ್ಯೋತಿ ಫೀಡರ್ ಮೂಲಕ ದಿನದ 24 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ.

Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ ರೇಟ್ ಎಷ್ಟಿದೆ?

ಇದನ್ನು ಹೊರತುಪಡಿಸಿ ನೀರಾವರಿ ಫೀಡರ್ ಗಳ ಮೂಲಕ ತೋಟದ ಮನೆಗಳಿಗೆ ಗೃಹೊಪಯೋಗಿ ಬಳಕೆಗೆ ಮಾತ್ರ ಹಾಗೂ ಅಲ್ಲಿ ವಾಸಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿ ಯನ್ನು ಗಮನದಲ್ಲಿರಿಸಿಕೊಂಡು ಸಿಂಗಲ್ ಫೇಸ್ ವಿದ್ಯುತ್ ಅನ್ನು ಸಂಜೆ 6 ರಿಂದ ಬೆಳಗ್ಗೆ 6ರವರೆಗೆ (ಮೂರು ಗಂಟೆಗಳ ಮೂರು ಫೇಸ್ ವಿದ್ಯುತ್ ಹೊರತಾಗಿ ) ಫೀಡರ್ ಗಳಿಗೆ ಓಪನ್ ಡೆಲ್ಟಾ ಮೂಲಕ ನೀಡಲಾಗುವುದು.

ಆದರೆ ರಾತ್ರಿ ವೇಳೆ ಕೆಲವರು ಸಿಂಗಲ್ ಫೇಸ್ ಕೃಷಿ ಪಂಪ್ ಸೆಟ್ ಗಳನ್ನು ನೀರಾವರಿ ಫೀಡರ್ ಗಳ ಮೂಲಕ ಬಳಸುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.

Also Read: ಬೈಕ್, ಬೊಲೆರೋ ನಡುವೆ ಭೀಕರ ಅಪಘಾತ | ಇಬ್ಬರು ಸ್ಥಳದಲ್ಲೇ ಮೃತ

ಆದ್ದರಿಂದ ಈ ಸಮಯದಲ್ಲಿ (ಸಂಜೆ 6 ರಿಂದ ಬೆಳಗ್ಗೆ 6ರವರೆಗೆ) ಸಿಂಗಲ್ ಫೇಸ್ ಕೃಷಿ ಪಂಪ್ ಸೆಟ್ ಗಳನ್ನು ಬಳಸದಂತೆ ರೈತರಿಗೆ ಬೆಸ್ಕಾಂ ಮನವಿ ಮಾಡಿದೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version