ಮುಖ್ಯ ಸುದ್ದಿ
Shivayogi Kalasad; ಮುರುಘಾಶ್ರೀ ಬೆಳ್ಳಿ ವಿಗ್ರಹ ಕಳ್ಳತನ ಪ್ರಕರಣ | ಕಾಣದ ಕೈಗಳ ಪತ್ತೆಗೆ ಸಂಪೂರ್ಣ ಸಹಕಾರ | ಆಡಳಿತಾಧಿಕಾರಿ ಶಿವಯೋಗಿ ಕಳಸದ್
CHITRADURGA NEWS | 17 JULY 2024
ಚಿತ್ರದುರ್ಗ: ಐತಿಹಾಸಿಕ ಮುರುಘಾ ಮಠದ ರಾಜಾಂಗಣದಿಂದ ಕಾಣೆಯಾಗಿದ್ದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ವಿಗ್ರಹ ದೂರು ಕೊಟ್ಟ ನಂತರ ಮಠದ ಆವರಣಕ್ಕೆ ಬಂದು ಬಿದ್ದಿದೆ.
ಈ ಪ್ರಕರಣ ಮಠದ ಸಮಸ್ತ ಭಕ್ತರಿಗೂ ನಿಗೂಢ ಅನ್ನಿಸುತ್ತಿದ್ದು, ಮಠದಲ್ಲಿ ಏನು ನಡೆಯುತ್ತಿದೆ ಎನ್ನುವ ಗೊಂದಲಕ್ಕೀಡಾಗಿದ್ದಾರೆ.
ಇದನ್ನೂ ಓದಿ: ಮುರುಘಾ ಮಠದಲ್ಲಿ ಕಳ್ಳರ ಕೈಚಳಕ | ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಪುತ್ಥಳಿ ಕಳವು
ಸಿ.ಸಿ. ಕ್ಯಾಮರಾ ಆಫ್ ಮಾಡಿ ವಿಗ್ರಹ ಕಳ್ಳತನ ಮಾಡಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಗ್ರಹ ಕಳ್ಳತನ ಮಾಡಿದವರನ್ನು ಪತ್ತೆ ಮಾಡಬೇಕು ಎನ್ನುವುದು ಭಕ್ತರ ಆಗ್ರಹವಾಗಿದೆ.
ವಿಗ್ರಹ ಕಳ್ಳತನ ಕುರಿತು ಆಡಳಿತಾಧಿಕಾರಿ ಶಿವಯೋಗಿ ಕಳಸದ್ ಮಾತು:
ಈ ನಡುವೆ, ವಿಗ್ರಹ ಕಳ್ಳತನ ಪ್ರಕರಣ ಕುರಿತು ಇದೇ ಮೊದಲ ಬಾರಿಗೆ ಮುರುಘಾ ಮಠ ಹಾಗೂ ಎಸ್‍ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಶಿವಯೋಗಿ ಸಿ.ಕಳಸದ್ (Shivayogi Kalasad) ಸುದ್ದಿಗಾರರ ಜೊತೆಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಕಳ್ಳತನವಾಗಿದ್ದ ಮುರುಘಾ ಶರಣರ ಬೆಳ್ಳಿ ವಿಗ್ರಹ ದಿಢೀರ್ ಪ್ರತ್ಯಕ್ಷ | ಮುರುಘಾ ಮಠಕ್ಕೆ ಶ್ವಾನ ದಳ ದೌಡು
ಮಠದಲ್ಲಿ ಕಾಣೆಯಾಗಿ ಆನಂತರ ಪತ್ತೆಯಾಗಿರುವ ಮುರುಘಾ ಶ್ರೀಗಳ ಬೆಳ್ಳಿ ವಿಗ್ರಹದ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಮಾಡಲು ನಾವು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಠದಲ್ಲಿ ಮತ್ತೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮೊಂದಿಗೆ ಕೈ ಜೋಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಮುರುಘಾ ಶ್ರೀಗಳ ಬೆಳ್ಳಿ ಪುತ್ಥಳಿ ಕಳ್ಳತನ | ದಾಖಲಾಯ್ತು ದೂರು | ದೂರು ಕೊಟ್ಟಿದ್ಯಾರು ?
ಈ ಪ್ರಕರಣದ ಕುರಿತು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೂ ಚರ್ಚಿಸಲಾಗಿದೆ. ಇದರ ಹಿಂದಿರುವ ಕಾಣದ ಕೈಗಳು ಯಾವುದು ಎಂಬುದನ್ನು ಪತ್ತೆ ಹಚ್ಚಬೇಕಿದೆ. ಶ್ರೀಮಠದ ಪರವಾಗಿ ಭಕ್ತರು ನಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.
ಮಠದ ಆಸ್ತಿ ರಕ್ಷಣೆಗೆ ಬದ್ಧ:
ಶ್ರೀಮಠದ ಆಸ್ತಿ ಸಂರಕ್ಷಿಸಲು ನಾವು ಬದ್ಧರಾಗಿದ್ದೇವೆ. ಕಳೆದ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಸರ್ಕಾರ ಸಮಿತಿ ರಚಿಸಿ ಆದೇಶಿಸಿತ್ತು. ಅದರ ಪ್ರಕಾರ ಆಡಳಿತ ನೋಡಿಕೊಳ್ಳುತ್ತಿದ್ದು, ಶ್ರೀಮಠದ ಆಸ್ತಿ, ಶಾಖಾಮಠಗಳ ಆಸ್ತಿಗಳ ಕುರಿತು ಚರ್ಚಿಸಲಾಗಿದೆ.
ಹಾಸನ, ಕೊಡಗು, ರಾಣೇಬೆನ್ನೂರು, ಧಾರವಾಡ, ಮಹಾರಾಷ್ಟ್ರದ ಕೊಲ್ಲಾಪುರ ಮಠದ ಬಗ್ಗೆ ಚರ್ಚಿಸಿದ್ದೇವೆ. ಹಲವಾರು ಒಳ್ಳೆಯ ಸಲಹೆಗಳು ಬಂದಿವೆ. ಶ್ರೀಮಠದ ಪರಂಪರೆಯನ್ನು ಮುಂದುವರಿಸಬೇಕಿದೆ. ವಿದ್ಯಾಪೀಠದ ವ್ಯಾಪ್ತಿಯಲ್ಲಿ ಬರುವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.
ಆಡಳಿತ ಮಂಡಳಿಯು ಮಠದ ಅಧಿಕೃತವಾಗಿ ಜವಾಬ್ದಾರಿ ನಿಭಾಯಿಸುತ್ತದೆ. ಇದರ ಹಿಂದೆ ಕಾಣದ ಕೈಗಳು ಏನು ಮಾಡುತ್ತಿವೆ ಎಂಬುದನ್ನು ಕಂಡು ಹಿಡಿಯಬೇಕಿದೆ. ಶ್ರೀಮಠದ ಬಗ್ಗೆ ವೈಯಕ್ತಿಕವಾಗಿ ನನಗೆ ಬಹಳ ಗೌರವವಿದೆ. ಇದರ ಆಶೀರ್ವಾದ ನನ್ನ ಮೇಲಿದೆ. ಪ್ರತಿನಿತ್ಯ ನಾವುಗಳು ಇದರ ಆಗುಹೋಗುಗಳ ಬಗ್ಗೆ ಚರ್ಚಿಸುತ್ತೇವೆ. ಅನೇಕ ಪ್ರಕರಣಗಳು ಕಾನೂನು ಅಡಿಯಲ್ಲಿವೆ. ಭಕ್ತರ ಅಪೇಕ್ಷೆಯಂತೆ ಹೆಚ್ಚು ಸಮಯ ಕಳೆಯಲು ಇಚ್ಚಿಸುತ್ತೇವೆ.
ಇದನ್ನೂ ಓದಿ: ಕುರಿ, ಮೇಕೆ ಸಾಕಾಣಿಕೆಗೆ ಅರ್ಜಿ ಅಹ್ವಾನ
ಕೊಡಗಿನಲ್ಲಿ ಸಾಕಷ್ಟು ಸಮಸ್ಯೆ ಇದೆ. ಅದನ್ನು ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ. ವಿದ್ಯಾಪೀಠ, ಮಠದ ಜವಾಬ್ದಾರಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಹಾಗೂ ವಾರ್ಷಿಕ ಬಜೆಟ್‍ನ್ನು ಮಂಡಿಸುತ್ತೇವೆ ಎಂದರು.
ಈ ವೇಳೆ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಎಸ್.ಎನ್. ಚಂದ್ರಶೇಖರ್, ವಕೀಲರಾದ ಉಮೇಶ್ ಇದ್ದರು.