ಮುಖ್ಯ ಸುದ್ದಿ
ಕಬೀರಾನಂದ ಮಠದಲ್ಲಿ ಶಿವರಾತ್ರಿ ಮಹೋತ್ಸವ | ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

CHITRADURGA NEWS | 04 MARCH 2024
ಚಿತ್ರದುರ್ಗ: ಆರೂಢ ಪರಂಪರೆಯ ಹಿನ್ನೆಲೆ ಹೊಂದಿರುವ ನಗರದ ಶ್ರೀ ಕಬೀರಾನಂದ ಮಠದಲ್ಲಿ ಸೋಮವಾರ ಸಂಜೆ 94ನೇ ವರ್ಷದ ಶಿವನಾಮ ಸಪ್ತಾಹ ಹಾಗೂ ಮಹಾ ಶಿವರಾತ್ರಿ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಆರು ದಿನಗಳ ಕಾಲ ನಡೆಯುವ ಶಿವರಾತ್ರಿ ಮಹೋತ್ಸವಕ್ಕೆ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ದೀಪ ಬೆಳಗಿಸಿ, ಸಭಾಂಗಣದ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಇದನ್ನೂ ಓದಿ: ಶಿವರಾತ್ರಿಗೆ ಅಬ್ಬರಿಸಲಿದ್ದಾನೆ ವರುಣ ದೇವ | ಭರ್ಜರಿ ಮಳೆಯ ಮುನ್ಸೂಚನೆ
ಈ ವೇಳೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಜಡಿಸಿದ್ಧೇಶ್ವರ ಮಠದ ರಮಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಮನುಷ್ಯನ ಅಜ್ಞಾನ ನಿವಾರಿಸುವ ಶಕ್ತಿ ಗುರುವಿಗೆ ಮಾತ್ರ ಇದೆ. ಗುರುವಿಗೆ ದೇವರು ಕೂಡ ಶರಣಾಗಿರುವ ನಿರ್ದೇಶನ ಇವೆ. ಗುರು ಎಲ್ಲರಿಗಿಂತಲೂ ಶ್ರೇಷ್ಠ ಎಂದು ತಿಳಿಸಿದರು.
ಕಬೀರಾನಂದ ಮಠದ ಶ್ರೀ ಸದ್ಗುರು ಶಿವಲಿಂಗಾನಂದ ಸ್ವಾಮೀಜಿ, ಹುಬ್ಬಳ್ಳಿಯ ಶಾಂತಾಶ್ರಮದ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ, ಬಾಗಲಕೋಟೆಯ ಕೌಧೀಶ್ವರ ಮಠದ ಮಾಧವಾನಂದ ಸ್ವಾಮೀಜಿ, ಉತ್ಸವ ಸಮಿತಿ ಅಧ್ಯಕ್ಷ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಉಪಾಧ್ಯಕ್ಷ ಪರಮೇಶ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ವಿನಯ್ ತಿಮ್ಮಾಪುರ, ಮಚೆರ್ಂಟ್ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮೀಕಾಂತರೆಡ್ಡಿ, ಮಾತೃಶ್ರೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್, ವಿಎಚ್‍ಪಿಯ ಓಂಕಾರ್ ಸೇರಿದಂತೆ ಹಲವು ಗಣ್ಯರು, ಮುಖಂಡರು ಭಾಗವಹಿಸಿದ್ದರು.
ಇದನ್ನೂ ಓದಿ: ಭದ್ರೆಗಾಗಿ ಅರೆಮಲೆನಾಡು ಹೊಳಲ್ಕೆರೆ ಪೂರ್ಣ ಬಂದ್
ಕಾರ್ಯಕ್ರಮದಲ್ಲಿ ಅಂಜನಾ ನೃತ್ಯ ಕಲಾಕೇಂದ್ರದ ನಂದಿನಿ ಶಿವಪ್ರಕಾಶ್ ತಂಡದ ಕಲಾವಿದರು ಭರತ ನಾಟ್ಯ ನೃತ್ಯ ವೈವಿಧ್ಯ ಪ್ರದರ್ಶಿಸಿದರು.
