Connect with us

    ಬಜರಂಗದಳ ಕಾರ್ಯಕರ್ತರಿಂದ ಸೇವಾ ಸಪ್ತಾಹ | ಉಚಿತ ಆರೋಗ್ಯ ತಪಾಸಣೆ

    ಉಚಿತ ಆರೋಗ್ಯ ತಪಾಸಣೆ

    ಮುಖ್ಯ ಸುದ್ದಿ

    ಬಜರಂಗದಳ ಕಾರ್ಯಕರ್ತರಿಂದ ಸೇವಾ ಸಪ್ತಾಹ | ಉಚಿತ ಆರೋಗ್ಯ ತಪಾಸಣೆ

    CHITRADURGA NEWS | 30 JUNE 2024

    ಚಿತ್ರದುರ್ಗ: ಬಜರಂಗದಳ ಸೇವಾ ಸಪ್ತಾಹದ ಅಂಗವಾಗಿ ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ವಾಸುದೇವರೆಡ್ಡಿ ಶಾಲಾ ಆವರಣದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

    ಇದನ್ನೂ ಓದಿ: ಗಾಣಿಗ ಸಮುದಾಯದ ವಧು-ವರರ ಸಮಾವೇಶ | ವ್ಯಕ್ತಿಯನ್ನು ವ್ಯಕಿತ್ವದಿಂದ ಗುರುತಿಸಿ | ಡಾ. ಬಸವಕುಮಾರ ಸ್ವಾಮೀಜಿ

    ಡಾ.ಯಶಸ್ ಹೆಚ್. ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಮಾತನಾಡುತ್ತ ಆಧುನಿಕ ಜೀವನ ಶೈಲಿ ಹಾಗೂ ಬದಲಾದ ಆಹಾರ ಪದ್ದತಿಯಿಂದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಕಾಯಿಲೆಗಳಿಂದ ಬಳಲುವುದು ಸಹಜ. ರಕ್ತದೊತ್ತಡ, ಸಕ್ಕರೆ ಕಾಯಿಲೆಯುಳ್ಳವರು ಆಗಿಂದಾಗ್ಗೆ ತಪಾಸಣೆ ಮಾಡಿಸಿಕೊಂಡು ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.

    ಧೂಮಪಾನ, ಮದ್ಯಪಾನ ಇವುಗಳಿಂದ ಪ್ರತಿಯೊಬ್ಬರು ದೂರವಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅಧಿಕ ಕೊಬ್ಬಿನಂಶವುಳ್ಳ ಆಹಾರವನ್ನು ಸೇವಿಸುವುದು ಹೃದಯಾಘಾತವನ್ನು ಆಹ್ವಾನಿಸಿದಂತೆ ಎಂದು ತಿಳಿಸಿದರು.

    ಡಾ.ಹರ್ಷಿತರವರು ಆರೋಗ್ಯ ತಪಾಸಣೆ ನಡೆಸಿದರು.

    ವಿಶ್ವಹಿಂದು ಪರಿಷತ್ ನಗರಾಧ್ಯಕ್ಷ ಅಶೋಕ್, ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್, ಜಿಲ್ಲಾ ಸಂಯೋಜಕ ಸಂದೀಪ್, ನಗರ ಕಾರ್ಯದರ್ಶಿ ರಂಗಸ್ವಾಮಿ, ನಗರ ಸಂಯೋಜಕ ಕಿಶೋರ್, ನಗರ ಸೇವಾ ಪ್ರಮುಖ್ ರಘು, ಜಿಲ್ಲಾ ಕಾರ್ಯಕಾರಿ ಸದಸ್ಯ ವಿಠಲ್, ವಿಜಯ್, ರಘು, ಬಸವರಾಜ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು.

    ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕರ್ನಾಟಕದ ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ ಇದ್ದಂತೆ..

    ಹೊಸದುರ್ಗದಲ್ಲಿ ಬಜರಂಗದಳ ಕಾರ್ಯಕರ್ತರಿಂದ ಉಚಿತ ಅರೋಗ್ಯ ತಪಾಸಣೆ :

    ಹೊಸದುರ್ಗ: ದೇಶಾದ್ಯಂತ ಬಜರಂಗದಳದ ಸೇವಾ ಸಪ್ತಾಹ ನಿಮಿತ್ತ ಈ ಬಾರಿ ಉಚಿತ ಆರೋಗ್ಯ ಶಿಬಿರಗಳನ್ನು ಮಾಡಲಾಗುತ್ತಿದ್ದು, ಹೊಸದುರ್ಗ ಪ್ರಖಂಡದಿಂದ ಮುಖ್ಯ ರಸ್ತೆ ಕೆನರಾ ಬ್ಯಾಂಕ್ ಮುಂಭಾಗ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು.

    ಹೊಸದುರ್ಗದಲ್ಲಿ ಬಜರಂಗದಳ ಕಾರ್ಯಕರ್ತರಿಂದ ಉಚಿತ ಅರೋಗ್ಯ ತಪಾಸಣೆ

    ಹೊಸದುರ್ಗದಲ್ಲಿ ಬಜರಂಗದಳ ಕಾರ್ಯಕರ್ತರಿಂದ ಉಚಿತ ಅರೋಗ್ಯ ತಪಾಸಣೆ

    ಆರೋಗ್ಯ ತಪಾಸಣೆಯಲ್ಲಿ 70ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ಮಾಡಲಾಯಿತು. ತಪಾಸಣೆಯಲ್ಲಿ ಸಾಮಾನ್ಯ ಚಿಕಿತ್ಸೆ, ಹೃದಯ ಸಂಬಂಧಿತ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ ನೀಡಲಾಯಿತು.

    ಡಾ.ಬ್ರಹ್ಮರಾಜ್ ಮತ್ತು ಅವರ ತಂಡ ಅರೋಗ್ಯ ತಪಾಸಣೆ ನಡೆಸಿದರು.

    ಇದನ್ನೂ ಓದಿ: ಕಾಂಗ್ರೆಸ್ ಎಸ್ಟಿ ಸೆಲ್ ಅಧ್ಯಕ್ಷರಾಗಿ ಬಿ.ಮಂಜುನಾಥ್ ನೇಮಕ

    ಈ ವೇಳೆ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿ ಕುಮಾರಣ್ಣ, ಬಜರಂಗದಳ ಸಂಯೋಜಕರಾದ ಸಿದ್ದೇಶ್ ಹಾಗೂ ಸಮಾಜ ಸೇವಕರಾದ ಸದ್ಗುರು ಪ್ರದೀಪ್, ಮುಖಂಡರಾದ ಬಸವರಾಜ್, ತಾಲ್ಲೂಕು ಭಾಜಾಪ ಪ್ರಧಾನ ಕಾರ್ಯದರ್ಶಿ ಜಗದೀಶ್ ರಾಮಯ್ಯ ಸೇರಿದಂತೆ ಇತರರು ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top