ಮುಖ್ಯ ಸುದ್ದಿ
ಜಿಲ್ಲಾ ಮಟ್ಟದ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ 28 ಸಾಧಕರ ಆಯ್ಕೆ | ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾಡಳಿತದಿಂದ ಸನ್ಮಾನ
ಚಿತ್ರದುರ್ಗ ನ್ಯೂಸ್.ಕಾಂ: ಕನ್ನಡ ರಾಜ್ಯೋತ್ಸವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ 28 ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತರು, ನಳಂದ ಪತ್ರಿಕೆ ಸಂಪಾದಕ ರವಿ ಮಲ್ಲಾಪುರ, ಹಿರಿಯ ಪತ್ರಕರ್ತ ಎಚ್.ಲಕ್ಷ್ಮಣ್, ಚಳ್ಳಕೆರೆ ಮೂಲದ ರಿಪಬ್ಲಿಕ್ ಕನ್ನಡ ವರದಿಗಾರ ವಿ.ವೀರೇಶ್(ಅಪ್ಪು), ಟಿವಿ9 ವಾಹಿನಿಯ ಹಿರಿಯ ಕ್ಯಾಮರಾಮೆನ್ ಬುರುಜನಹಟ್ಟಿಯ ಎಸ್.ಪಿ.ಮಂಜುನಾಥ್ ಹಾಗೂ ಕನ್ನಡಪ್ರಭ ಸೇರಿದಂತೆ ವಿವಿಧ ಪತ್ರಿಕೆಗಳ ಛಾಯಾಗ್ರಾಹಕ ಎಸ್.ಜೆ.ದ್ವಾರಕನಾಥ್ ಅವರು ಆಯ್ಕೆಯಾಗಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ ಹಿರಿಯೂರು ತಾಲೂಕಿನ ಆದಿವಾಲ ಗ್ರಾಮದ ವರ್ಷಾ, ಚಿತ್ರದುರ್ಗದ ಶ್ರೇಯಾ,
ಯೋಗ ಕ್ಷೇತ್ರದಿಂದ ರವಿ ಕೆ. ಅಂಬೇಕರ್, ಕೃಷಿ ಕ್ಷೇತ್ರದಿಂದ ಚಳ್ಳಕೆರೆಯ ಪ್ರಯೋಗಶೀಕ ಕೃಷಿಕ ಆರ್.ಎ. ದಯಾನಂದಮೂರ್ತಿ, ಹಿರಿಯೂರಿನ ಪ್ರಗತಿಪರ ರೈತ ಹಾಗೂ ಹೋರಾಟಗಾರ ಕೆ.ಸಿ.ಹೊರಕೇರಪ್ಪ, ಹಿರಿಯೂರಿನ ಮೋಹನ ಮುರಳಿ,
ಇದನ್ನೂ ಓದಿ: ಶಿಕ್ಷಣ ರಂಗಕರ್ಮಿ, ಚಳ್ಳಕೆರೆ ಪಿ.ತಿಪ್ಪೇಸ್ವಾಮಿಗೆ ರಾಜ್ಯೋತ್ಸವ ಪ್ರಶಸ್ತಿ
ಚಿತ್ರಕಲೆ ವಿಭಾಗದಲ್ಲಿ ಖ್ಯಾತ ಕಲಾವಿದ ಟಿ.ಎಂ.ವೀರೇಶ್, ಹಿರಿಯ ಭೂ ವಿಜ್ಞಾನಿ ಜಿ.ಪರಶುರಾಮ, ಸಂಶೋಧನಾ ಕ್ಷೇತ್ರದಲ್ಲಿ ಡಾ.ಆರ್.ಎಸ್.ದೀಪಕ್,
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಪಿ.ವಿ.ಶ್ರೀಧರಮೂರ್ತಿ, ನವಜಾತ ಶಿಶು ಮತ್ತು ಮಕ್ಕಳ ತಜ್ಞ ಡಾ.ಬಿ.ಚಂದ್ರನಾಯ್ಕ್, ಶಿಕ್ಷಣ ಕ್ಷೇತ್ರದಲ್ಲಿ ಹೊಸದುರ್ಗದ ಹನುಮಂತಪ್ಪ, ಮೊಳಕಾಲ್ಮೂರಿನ ಜಿ.ಎಸ್.ವಸಂತ,
ಸಮಾಜ ಸೇವೆಯಲ್ಲಿ ಕೆಳಗೋಟೆಯ ಡಾ. ಸೌಮ್ಯಾ ಮಂಜುನಾಥ್, ವೀಣಾ ಗೌರಣ್ಣ, ಸಾಹಿತ್ಯ ಕ್ಷೇತ್ರದಲ್ಲಿ ಚಿತ್ರದುರ್ಗದ ಪ್ರೊ.ಜಿ.ಪರಮೇಶ್ವರಪ್ಪ, ಹೊಸದುರ್ಗದ ಬಾಗೂರು ಆರ್.ನಾಗರಾಜಪ್ಪ, ರಂಗಭೂಮಿ ಕ್ಷೇತ್ರದಲ್ಲಿ ಎಸ್.ಡಿ. ರಾಮಸ್ವಾಮಿ, ಡಿ.ಶ್ರೀಕುಮಾರ್,
ಸಂಗೀತ ವಿಭಾಗದಲ್ಲಿ ಶೈಲಜಾ ಸುದರ್ಶನ್, ಚಿಕ್ಕೋಬನಹಳ್ಳಿ ಡಿ.ಓ.ಮುರಾರ್ಜಿ, ಜಾನಪದ ವಿಭಾಗದಲ್ಲಿ ಜಿ.ರಾಜಣ್ಣ, ಮೊಳಕಾಲ್ಮೂರಿನ ಚಿಕ್ಕುಂತಿ ಶ್ರೀನಿವಾಸ ಅವರನ್ನು ಆಯ್ಕೆ ಮಾಡಲಾಗಿದೆ.
ಎಲ್ಲ ಸಾಧಕರಿಗೆ ನವೆಂಬರ್ 1 ಬುಧವಾರ ಬೆಳಗ್ಗೆ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.