ಮುಖ್ಯ ಸುದ್ದಿ
ಗ್ಯಾರೆಂಟಿ ಯೋಜನೆಗಳಿಗೆ SCP – TSP ಹಣ ಬಳಕೆ ಬೇಡ
CHITRADURGA NEWS | 31 JULY 2024
ಚಿತ್ರದುರ್ಗ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ SCP, TSP ಹಣ ಬಳಸದಂತೆ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯಿಂದ ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕ್ಲಿಕ್ ಮಾಡಿ ಓದಿ: IAS, KAS ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ | ಅರ್ಜಿ ಆಹ್ವಾನ
1980ರಲ್ಲಿ ವಿಶೇಷ ಘಟಕ ಯೋಜನೆ (ಎಸ್‌ಸಿಪಿ), ಬುಡಕಟ್ಟ ಉಪ ಯೋಜನೆ (ಟಿಎಸ್ ಪಿ) ಜಾರಿಗೋಳಿಸಿದ್ದು, ಪರಿಶಿಷ್ಟ ಜಾತಿ, ಪಂಗಡದವರು ಸಾಮಾನ್ಯ ಜಾತಿಯವರಂತೆ ನಿಗಧಿತ ಸಮಯದೊಳಗೆ ಅಭಿವೃದ್ಧಿ ಆಗಬೇಕೆಂದು ರೂಪಿಸಿದ ಯೋಜನೆಯಾಗಿದೆ, ಈ ಯೋಜನೆ ಜಾರಿಯಾಗಿ ಸುಮಾರು 44 ವರ್ಷ ಕಳೆದರೂ ಪರಿಶಿಷ್ಟ ಜಾತಿ, ಪಂಗಡಗಳು ಸಾಮಾನ್ಯ ಜಾತಿಯವರಂತೆ ಯಾವುದೇ ವಿಷಯದಲ್ಲಿ ಅಭಿವೃದ್ಧಿಯಾಗಿಲ್ಲ, ಆದರೆ ಪ್ರತಿ ವರ್ಷ ಹಣ ಮಾತ್ರ ದುರ್ಬಳಕೆ ಆಗುತ್ತಿದೆ ಎಂದು ಆಗ್ರಹಿಸಿದರು.
ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿಗಳನ್ನು ಘೋಷಣೆ ಮಾಡಿದ್ದು, ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ಬಳಸುತ್ತಿದೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ಬಳಸದಂತೆ ಮನವಿ ಮಾಡಿದರು.
ಕ್ಲಿಕ್ ಮಾಡಿ ಓದಿ: Jobs; ಯೋಜನಾ ಸಂಯೋಜಕರ ಹುದ್ದೆಗೆ ಅರ್ಜಿ ಅಹ್ವಾನ
ಈ ವೇಳೆ ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ಕಾರ್ಯದರ್ಶಿ ಡಿ. ಸುಧಾ, ಪದಾಧಿಕಾರಿಗಳಾದ ಪಿ.ಉಮಾ, ಭಾಗ್ಯಮ್ಮ, ಅನ್ನಪೂರ್ಣ, ರುದ್ರಮ್ಮ, ಕವನ ಸೇರಿದಂತೆ ಇತರರು ಇದ್ದರು.