ಮುಖ್ಯ ಸುದ್ದಿ
Science material display: ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ | ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ
CHITRADURGA NEWS | 14 NOVEMBER 2024
ಚಿತ್ರದುರ್ಗ: ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ 42 ನೇ ಶೈಕ್ಷಣಿಕ ವರ್ಷದ ಸಾಂಸ್ಕøತಿಕ ಚಟುವಟಿಕೆ, ಕ್ರೀಡಾಕೂಟ, ವಿಜ್ಞಾನ ವಸ್ತು ಪ್ರದರ್ಶನ(Science material display)ವನ್ನು ಏಳು ದಿನಗಳ ಕಾಲ ಆಯೋಜಿಸಲಾಗಿತ್ತು.
ಕ್ಲಿಕ್ ಮಾಡಿ ಓದಿ: ಸಿರಿಧಾನ್ಯಗಳಿಗೆ ಸೂಕ್ತ ವೇದಿಕೆಗೆ ಪ್ರಯತ್ನ | ಜಿ.ಪಂ ಸಿಇಓ ಸೋಮಶೇಖರ್ ಭರವಸೆ
ವಿಜ್ಞಾನ ವಸ್ತುಪ್ರದರ್ಶನವನ್ನು ಬಿ.ಇ.ಡಿ.ಕಾಲೇಜು ಪ್ರಾಂಶುಪಾಲ ಡಾ.ಅನಂತರಾಮು ಉದ್ಘಾಟಿಸಿದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಿ.ಬಿ.ಎಸ್.ಇ. ಪ್ರೌಢಶಾಲಾ ವಿದ್ಯಾರ್ಥಿಗಳು, ರಾಜ್ಯ ಮಟ್ಟದ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿವಿಧ ವಸ್ತುಪ್ರದರ್ಶನಗಳನ್ನು ಸಿದ್ದಪಡಿಸಿ ಯುವ ವಿಜ್ಞಾನಿಗಳಂತೆ ಬಿಂಬಿಸಿಕೊಂಡು ತಮ್ಮಲ್ಲಿನ ಪ್ರತಿಭೆಗಳನ್ನು ಹೊರ ಸೂಸಿ ಬೌದ್ದಿಕ ಮತ್ತು ಕೌಶಲ್ಯಯುಕ್ತ ಜ್ಞಾನವನ್ನು ಅನಾವರಣಗೊಳಿಸಿದರು.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 14 ನವೆಂಬರ್ 2024 | ಈ ದಿನ ನಿಮ್ಮ ರಾಶಿ ಫಲ ಹೇಗಿದೆ…
ಚಿತ್ರದುರ್ಗ ಡಯಟ್ ಉಪನ್ಯಾಸಕಿ ಪದ್ಮ ಕೆ.ಎ. ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಾ.ಮಹೇಶ್, ಬಿ.ಇ.ಡಿ.ಕಾಲೇಜು ಉಪನ್ಯಾಸಕ ಹಾಲೇಶ್ ದತ್ತಾತ್ರೇಯ ಇವರುಗಳು ತೀರ್ಪುಗಾರರಾಗಿ ಭಾಗವಹಿಸಿದ್ದರು.