Connect with us

ಮೇ.5 ರಿಂದ ಪರಿಶಿಷ್ಟ ಜಾತಿ ಸಮೀಕ್ಷೆ | ಸಮಸ್ಯೆ ಪರಿಹಾರಕ್ಕೆ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪನೆ

ಮುಖ್ಯ ಸುದ್ದಿ

ಮೇ.5 ರಿಂದ ಪರಿಶಿಷ್ಟ ಜಾತಿ ಸಮೀಕ್ಷೆ | ಸಮಸ್ಯೆ ಪರಿಹಾರಕ್ಕೆ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪನೆ

CHITRADURGA NEWS | 04 MAY 2025

ಚಿತ್ರದುರ್ಗ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬ0ಧ ಮೇ. 05 ರಿಂದ ಜಿಲ್ಲೆಯಾದ್ಯಂತ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಕಾರ್ಯ ಆರಂಭವಾಗಲಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ನಿಯಂತ್ರಣಾ ಕೊಠಡಿ (ಕಂಟ್ರೋಲ್ ರೂಂ) ಗಳನ್ನು ಸ್ಥಾಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಜಗದೀಶ್ ಹೆಬ್ಬಳ್ಳಿ ತಿಳಿಸಿದ್ದಾರೆ.

Also Read: ಬೇಸಿಗೆಯಲ್ಲಿ ನೈಟ್ ಕ್ರೀಮ್ ಬದಲಿಗೆ ಇದನ್ನು ಮುಖಕ್ಕೆ ಹಚ್ಚಿ ತ್ವಚೆಯ ಕಾಂತಿ ಹೆಚ್ಚಿಸಿ

ಪ.ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾ. ಹೆಚ್.ಎನ್. ನಾಗಮೋಹ ದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿದ್ದು, ಒಳ ಮೀಸಲಾತಿ ವರ್ಗೀಕರಣ ಸಂಬ0ಧದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಸಂಗ್ರಹಣೆಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ.

ಇದಕ್ಕಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ಸಮನ್ವಯ ಸಮಿತಿ ರಚಿಸಲಾಗಿದೆ. ಗಣತಿದಾರರು ಇದೇ ಮೇ. 05 ರಿಂದ 17 ರವರೆಗೆ ಮನೆ ಮನೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ಕೈಗೊಳ್ಳಲಿರುವುದರಿಂದ ಸಮೀಕ್ಷೆಗೆ ಸಂಬ0ಧಪಟ್ಟ ಸಮಸ್ಯೆಗಳನ್ನು ಪರಿಹರಿಸಲು ಚಿತ್ರದುರ್ಗ ಜಿಲ್ಲಾ ಕಚೇರಿ ಹಾಗೂ 06 ತಾಲ್ಲೂಕುಗಳಲ್ಲಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ, ಇದಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ಕಂಟ್ರೋಲ್ ರೂಂ. ನೋಡಲ್ ಅಧಿಕಾರಿಗಳ ವಿವರ, ಮೊಬೈಲ್ ಸಂಖ್ಯೆ ವಿವರ ಕ್ರಮವಾಗಿ ಇಂತಿದೆ.

Also Read: ಈಜಿದ ನಂತರ ನಿಮ್ಮ ಕಣ್ಣುಗಳು ಉರಿಯುತ್ತಿದ್ದರೆ ಈ ಸಲಹೆ ಪಾಲಿಸಿರಿ

ಜಿಲ್ಲಾ ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕರ ಕಚೇರಿ, ಚಿತ್ರದುರ್ಗ, ಲಕ್ಷ್ಮೀ ಪಿ.ಟಿ.-9480843029. ತಾಲ್ಲೂಕು ಮಟ್ಟದಲ್ಲಿ ಚಿತ್ರದುರ್ಗ, ದೀಪಾ ಎಂ.-9480843107. ಚಳ್ಳಕೆರೆ, ವೇದಾವತಿ- 9480843106. ಹೊಳಲ್ಕೆರೆ, ಮೋಹನ್ ಶಾಗೋಟಿ-9480843109. ಹಿರಿಯೂರು, ಹನುಮಂತಪ್ಪ ಚಿಕ್ಕೇರಿ- 9480843108. ಹೊಸದುರ್ಗ, ಓಂಕಾರಪ್ಪ- 9480843110 ಹಾಗೂ ಮೊಳಕಾಲ್ಮೂರು, ನವೀನ್ ಕಟ್ಟಿ- 9480843111.

 ಕಂಟ್ರೋಲ್ ರೂಂ. ಬೆಳಿಗ್ಗೆ 06 ಗಂಟೆಯಿಂದ ಸಂಜೆ 06 ಗಂಟೆಯವರೆಗೂ ಕಾರ್ಯ ನಿರ್ವಹಿಸಲಿದ್ದು, ಸಮೀಕ್ಷಾ ಕಾರ್ಯಕ್ಕೆ ಸಂಬ0ಧಿಸಿದ ಸಮಸ್ಯೆ ಗಳ ಕುರಿತು ಕಂಟ್ರೋಲ್ ರೂಂ. ನಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version