Connect with us

Sarana Sanskriti Utsav; ಶರಣ ಸಂಸ್ಕ್ರತಿ ಉತ್ಸವಕ್ಕೆ ಆಗಸ್ಟ್ 24 ರಂದು ಪೂರ್ವಭಾವಿ ಸಭೆ

ಮುರುಘಾ ಮಠ

ಮುಖ್ಯ ಸುದ್ದಿ

Sarana Sanskriti Utsav; ಶರಣ ಸಂಸ್ಕ್ರತಿ ಉತ್ಸವಕ್ಕೆ ಆಗಸ್ಟ್ 24 ರಂದು ಪೂರ್ವಭಾವಿ ಸಭೆ

CHITRADURGA NEWS | 21 AUGUST 2024

ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಪ್ರತಿ ವರ್ಷ ನಡೆಯುವ ಶರಣ ಸಂಸ್ಕೃತಿ ಉತ್ಸವ(Sarana Sanskriti Utsav) ಈ ಬಾರಿಯೂ ಬರುವ ಅಕ್ಟೋಬರ್ 5 ರಿಂದ ಆರಂಭವಾಗಲಿದೆ, ಇದರ ಪೂರ್ವಭಾವಿ ಸಭೆಯನ್ನು ಆಗಸ್ಟ್ 24 ರಂದು ಶನಿವಾರ ಸಂಜೆ 5 ಗಂಟೆಗೆ ಚಿತ್ರದುರ್ಗ ಶ್ರೀ ಮುರುಘಾಮಠದ ಅನುಭವ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಮ್. ವಿದ್ಯಾಪೀಠ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಲಿಕ್ ಮಾಡಿ ಓದಿ: Students missing: ಆತಂಕ ಮೂಡಿಸಿದ 6 ವಿದ್ಯಾರ್ಥಿಗಳ ನಾಪತ್ತೆ ಪ್ರಕರಣ | ವಸತಿ ಶಾಲೆಯಿಂದ ಬೆಳಗ್ಗೆ ತೆರಳಿದ್ದ ಮಕ್ಕಳು | ಬೆಂಗಳೂರಿನಲ್ಲಿ ಪತ್ತೆ

ಈ ಬಾರಿ ವಿಶೇಷವಾಗಿ ಶ್ರೀ ಮಠದ ಶೂನ್ಯಪೀಠದ 24ನೇ ಅಧ್ಯಕ್ಷರು, ತ್ರಿವಿಧ ದಾಸೋಹ ತತ್ವದ ರೂವಾರಿಯೂ ಆಗಿರುವ ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ನೆರವೇರಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಬೃಹನ್ಮಠದ ಶಾಖಾ ಖಾಸಾ ಮಠಗಳ ಮಠಾಧೀಶರು, ವಿವಿಧ ಸಮಾಜಗಳ ಮಠಾಧೀಶರು, ಬಸವ ಕೇಂದ್ರಗಳ ಪದಾಧಿಕಾರಿಗಳು, ಶ್ರೀಮಠದ ಭಕ್ತಾದಿಗಳು, ಅಭಿಮಾನಿಗಳು, ವಿದ್ಯಾಪೀಠದ ಮುಖ್ಯಸ್ಥರುಗಳು ಹಾಗೂ ಸಿಬ್ಬಂದಿ ವರ್ಗ ಆಗಮಿಸಿ ಸೂಕ್ತ ಸಲಹೆ ಸಹಕಾರ ನೀಡಬೇಕಾಗಿ ಪ್ರಕಟಣೆಯಲ್ಲಿ ಕೊರಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version