Connect with us

    ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವಕ್ಕೆ ಸಾಣೇಹಳ್ಳಿ ಸಜ್ಜು | ವಚನಗೀತೆ, ನಾಟಕದ ಮೂಲಕ ಗುರು ಸ್ಮರಣೆ

    ಮುಖ್ಯ ಸುದ್ದಿ

    ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವಕ್ಕೆ ಸಾಣೇಹಳ್ಳಿ ಸಜ್ಜು | ವಚನಗೀತೆ, ನಾಟಕದ ಮೂಲಕ ಗುರು ಸ್ಮರಣೆ

    CHITRADURGA NEWS | 27 APRIL 2024
    ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಏ.28 ರಂದು ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವ ನಡೆಯಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಶಿವಕುಮಾರ ಸ್ವಾಮೀಜಿ ರಥೋತ್ಸವ ಸಮಿತಿಯವರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಥೋತ್ಸವ ನಡೆಸಲು ಸಿದ್ದತೆ ನಡೆಸಿದ್ದಾರೆ.

    ಅಂದು ಮಧ್ಯಾಹ್ನ 4 ಗಂಟೆಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸಂಜೆ 5.30ಕ್ಕೆ ಆಯೋಜಿಸಿರುವ ಸಾರ್ವಜನಿಕ ಸಭೆಯಲ್ಲಿ ಮಾಜಿ ಶಾಸಕ ಪಿ.ರಮೇಶ್‌ ಗುರುವಂದನಾ ನುಡಿಗಳನ್ನಾಡಲಿದ್ದಾರೆ.

    ಶಿವಸಂಚಾರ ಕಲಾವಿದರು ವಚನಗೀತೆ ಹಾಡುವರು. ಗಾನ ಸಿದ್ಧಗಂಗಾ ಸಂಗೀತ ವಿದ್ಯಾಲಯ ಬೆಂಗಳೂರಿನ ಗೀತಾ ಭತ್ತದ್‌ ಹಾಗೂ ತಂಡದವರಿಂದ ಸಂಗೀತ ಸುಧೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶ್ರೀ ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿದ, ವೈ.ಡಿ.ಬದಾಮಿ ನಿರ್ದೇಶನದ ‘ಮರಣವೇ ಮಹಾನವಮಿ’ ನಾಟಕ ಪ್ರದರ್ಶಿಸಲಿದ್ದಾರೆ.

    ಕ್ಲಿಕ್ ಮಾಡಿ ಓದಿ: ಯರೇಹಳ್ಳಿಯಲ್ಲಿ ಚಲಾವಣೆಯಾಗಿದ್ದು 24 ಮತಗಳು ಮಾತ್ರ..!

    ಸಾಣೇಹಳ್ಳಿ ಪುಟ್ಟ ಗ್ರಾಮವಾದರೂ ಇಲ್ಲಿ ವರ್ಷದುದ್ದಕ್ಕೂ ಸಾಹಿತ್ಯ, ಸಂಗೀತ, ಕಲೆ, ಕೃಷಿ, ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುತ್ತವೆ. ಸಾಣೇಹಳ್ಳಿಗೆ ಒಂದು ಘನತೆ ಬರುವಂತೆ ಮಾಡಿದವರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ. ಅವರು 1977ರಲ್ಲಿ ಸಾಣೇಹಳ್ಳಿ ಮಠಕ್ಕೆ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಪಟ್ಟಾಧ್ಯಕ್ಷರನ್ನಾಗಿ ಮಾಡಿದರು.

    ಕುಗ್ರಾಮವಾಗಿ, ಅನಾಮಧೇಯ ಹಳ್ಳಿಯಾಗಿದ್ದ ಸಾಣೇಹಳ್ಳಿ ಅಂದಿನಿಂದಲೇ ಚೈತನ್ಯ ಪಡೆದುಕೊಂಡು ಸಾಂಸ್ಕೃತಿಕ ಹಳ್ಳಿಯಾಗಿ ಹೆಸರುವಾಸಿಯಾಗಿದೆ. ತಮ್ಮ ಬದುಕಿಗೆ ಬೆಳಕು ನೀಡಿದ ಗುರುವಿನ ಹೆಸರಿನಲ್ಲಿ ರಥೋತ್ಸವ ಮಾಡಬೇಕು ಎನ್ನುವ ಆಶಯವನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗ್ರಾಮಸ್ಥರ ಮುಂದೆ ವ್ಯಕ್ತಪಡಿಸಿದರು. ಆಗ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವಂತಾಯ್ತು. ಅವರ ಆಶಯವನ್ನು ಗ್ರಾಮಸ್ಥರು ನೆರವೇರಿಸಿದರು. ಸುಂದರವಾದ ರಥ ನಿರ್ಮಾಣವಾಯ್ತು. ಅದಕ್ಕೆ ‘ಶ್ರೀ ಶಿವಕುಮಾರ ರಥ’ ಎಂದೇ ನಾಮಕರಣ ಮಾಡಲಾಗಿದೆ.

    ಕ್ಲಿಕ್ ಮಾಡಿ ಓದಿ: ಚುನಾವಣೆ ದಿನ ಅಡಿಕೆ ರೇಟ್ ಎಷ್ಟಿತ್ತು ಗೊತ್ತಾ ?

    ಕಳೆದ ಹತ್ತಾರು ವರ್ಷಗಳಿಂದ ಈ ರಥೋತ್ಸವ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಜನ್ಮತಾಳಿದ ಏಪ್ರಿಲ್‌ 28ರಂದು ನಡೆಯುತ್ತದೆ. ಪ್ರತಿವರ್ಷ ತಾಲ್ಲೂಕಿನ ಬೇರೆ ಬೇರೆ ಗ್ರಾಮಗಳ ಭಕ್ತರು ರಥೋತ್ಸವದ ಜವಾಬ್ದಾರಿ ನಿರ್ವಹಿಸುವರು. ರಥೋತ್ಸದ ಸಂದರ್ಭದಲ್ಲಿ ಪುಸ್ತಕಗಳ ಹರಾಜು ನಡೆಯುವುದು ವಿಶೇಷ. ನಂತರ ಗುರುಗಳಿಗೆ ಪ್ರಿಯವಾದ ವಚನಗೀತೆ, ನಾಟಕದ ಮೂಲಕ ಗುರುಗಳ ಸ್ಮರಣೆ ಅರ್ಥಪೂರ್ಣವಾಗಿ ನಡೆಸಲಾಗುತ್ತದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top