ಮುಖ್ಯ ಸುದ್ದಿ
ಇಂದು ಮಧ್ಯಾಹ್ನ ಆರೆಸ್ಸೆಸ್ಸ್ ಪಥ ಸಂಚಲನ | ಬರಗೇರಮ್ಮ ದೇವಸ್ಥಾನದಿಂದ ಪ್ರಾರಂಭ
ಚಿತ್ರದುರ್ಗ ನ್ಯೂಸ್.ಕಾಂ: ವಿಜಯದಶಮಿ ಅಂಗವಾಗಿ ನಗರದಲ್ಲಿಂದು ಆರೆಸ್ಸೆಸ್ಸ್ (ರಾಷ್ಟ್ರೀಯ ಸ್ವಯಂ ಸೇವಕ) ಸಂಘ ಸ್ವಯಂಸೇವಕರ ಪಥಸಂಚಲನ ಹಮ್ಮಿಕೊಳ್ಳಲಾಗಿದೆ.
ಆರೆಸ್ಸೆಸ್ಸ್ ಸಂಸ್ಥಾಪನೆಯಾಗಿದ್ದು ವಿಜಯದಶಮಿ ದಿನವೇ ಆಗಿರುವುದರಿಂದ ದೇಶಾದ್ಯಂತ ವಿಜಯ ದಶಮಿ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ಪಥ ಸಂಚಲನ ನಡೆಸುವ ಸಂಪ್ರದಾಯ ನಡೆದು ಬಂದಿದೆ.
ಅದರಂತೆ ಇಂದು ಚಿತ್ರದುರ್ಗದಲ್ಲಿ ಪಥ ಸಂಚಲನ ನಡೆಯಲಿದ್ದು, ಆರೆಸ್ಸೆಸ್ಸ್ ಗಣವೇಶ(ಯೂನಿಫಾರಂ) ಬಿಳಿ ಶರ್ಟ್, ಕಪ್ಪು ಟೋಪಿ, ಪ್ಯಾಂಟ್, ಶೂ ಹಾಗೂ ದಂಡದೊಂದಿಗೆ ಸುಮಾರು 500 ಮಂದಿ ಇಂದಿ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಎಬಿವಿಪಿ
ಪಥಸಂಚಲನಕ್ಕೂ ಮೊದಲು ಬರಗೇರಮ್ಮ ದೇವಸ್ಥಾನದ ಬಳಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸ್ ಕರ್ನಾಟಕ ಪ್ರಚಾರ ಪ್ರಮುಖ್ ಅರುಣ್‍ಕುಮಾರ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಆನಂತರ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ಬರಗೇರಮ್ಮ ದೇವಸ್ಥಾನದಿಂದ ಪಥ ಸಂಚಲನ ಪ್ರಾರಂಭವಾಗಲಿದ್ದು, ಬುರುಜನಹಟ್ಟಿ, ಚಿಕ್ಕಪೇಟೆ, ಆನೆಬಾಗಿಲು ಮೂಲಕ ಗಾಂಧಿ ವೃತ್ತ ತಲುಪಿ ಅಲ್ಲಿಂದ ಹೊಳಲ್ಕೆರೆ ರಸ್ತೆ ಮೂಲಕ ಮತ್ತೆ ಬರಗೇರಮ್ಮ ದೇವಸ್ಥಾನದ ಬಳಿ ಬಂದು ಸಮಾರೋಪಗೊಳ್ಳಲಿದೆ.