ಮುಖ್ಯ ಸುದ್ದಿ
ವಿವಿ ಸಾಗರಕ್ಕೆ ಮತ್ತೆ ಆರಂಭವಾಯ್ತು ಒಳಹರಿವು | ಇಂದಿನ ನೀರಿನ ಮಟ್ಟ ಎಷ್ಟು ?
CHITRADURGA NEWS | 15 DECEMBER 2024
ಚಿತ್ರದುರ್ಗ: ಅಜ್ಜಂಪುರ ಬಳಿ ಸೇತುವೆ ಮುರಿದು ಬಿದ್ದ ಪರಿಣಾಮ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಹರಿಯುತ್ತಿದ್ದ ನೀರು ನಿಂತು ಹೋಗಿತ್ತು.
ಆದರೆ, 15 ದಿನಗಳಲ್ಲಿ ಪರ್ಯಾಯವಾಗಿ ಮತ್ತೊಂದು ಸೇತುವೆ ನಿರ್ಮಾಣವಾಗಿದೆ. ಈಗ ಮತ್ತೆ ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಯಲು ಪ್ರಾರಂಭವಾಗಿದೆ.
ಇದನ್ನೂ ಓದಿ: ನಿಮ್ಮ ಮೊಬೈಲ್‍ನಲ್ಲಿ ಈ ಆ್ಯಪ್ ಇಟ್ಟುಕೊಳ್ಳಿ | ಕಾಲ ಕಾಲಕ್ಕೆ ನಿಮ್ಮ ಆರೋಗ್ಯಕ್ಕೆ ಸಲಹೆ ಪಡೆಯಿರಿ | ಡಾ.ಚಂದ್ರಕಾಂತ್ ನಾಗಸಮುದ್ರ
ಡಿಸೆಂಬರ್ 14 ರಂದು ಜಲಾಶಯಕ್ಕೆ 462 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿತ್ತು. ಇಂದು ಮತ್ತೆ ಜಲಾಶಯಕ್ಕೆ ಅಷ್ಟೇ ಪ್ರಮಾಣದ 462 ಕ್ಯೂಸೆಕ್ ನೀರು ಹರಿದು ಬಂದಿದೆ. ಇದರಿಂದಾಗಿ ಜಲಾಶಯ ನೀರಿನ ಮಟ್ಟ ಹೆಚ್ಚಾಗಿದೆ.
135 ಅಡಿ ಎತ್ತರದ ವಿವಿ ಸಾಗರ ಜಲಾಶಯದಲ್ಲಿ ಸದ್ಯ 128.85 ಅಡಿವರೆಗೆ ನೀರು ಬಂದಿದೆ. 30 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲಿ ಈಗ 29.44 ಟಿಎಂಸಿ ಅಡಿ ನೀರು ಬಂದಿದೆ.
ಇದನ್ನೂ ಓದಿ: ಒಂಟಿ ಮಹಿಳೆ ಮೇಲೆ ಅಟ್ಯಾಕ್ | ಚಿನ್ನದ ಸರ ಕಿತ್ತುಕೊಂಡು ಪರಾರಿ | ಮಹಿಳೆಯ ತಲೆಗೆ ರಾಡ್‍ನಿಂದ ಹಲ್ಲೆ
ಸರ್ಕಾರದಿಂದ ಡಿಸೆಂಬರ್ ತಿಂಗಳು ಪೂರ್ತಿ ಜಲಾಶಯಕ್ಕೆ ನೀರು ಹರಿಸುವ ಆದೇಶ ಇರುವುದರಿಂದ ಇನ್ನೂ 15 ದಿನ ನೀರು ಬಂದೇ ಬರುತ್ತದೆ.
ಒಳಹರಿವು ಹೀಗೆ ಮುಂದುವರೆದರೆ ಹೊಸ ವರ್ಷಕ್ಕೆ ಜಲಾಶಯ ಕೋಡಿ ಬೀಳಬಹುದು.