Connect with us

ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರಿಗೆ ಪ್ರೊ.ಶಿ.ಚೆ.ನಂದೀಮಠ ಪ್ರಶಸ್ತಿ

ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರಿಗೆ ಪ್ರೊ.ಶಿ.ಚೆ.ನಂದೀಮಠ ಪ್ರಶಸ್ತಿ

ಮುಖ್ಯ ಸುದ್ದಿ

ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರಿಗೆ ಪ್ರೊ.ಶಿ.ಚೆ.ನಂದೀಮಠ ಪ್ರಶಸ್ತಿ

CHITRADURGA NEWS | 05 MAY 2024

ಚಿತ್ರದುರ್ಗ: ಇತ್ತೀಚೆಗೆ ಧಾರವಾಡದಲ್ಲಿ ಜರುಗಿದ ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತಿನ ಪ್ರಥಮ ಮಹಾಧಿವೇಶನದಲ್ಲಿ, ಚಿತ್ರದುರ್ಗದ ಶಾಸನ-ಸಂಶೋಧಕ ಡಾ. ಬಿ.ರಾಜಶೇಖರಪ್ಪ ಅವರಿಗೆ ಪ್ರೊ.ಶಿ.ಚೆ.ನಂದೀಮಠ ಶಾಸನ ಸಾಹಿತ್ಯ ಶ್ರೀ ಪ್ರಶಸ್ತಿ  ಪ್ರಧಾನ ಮಾಡಲಾಯಿತು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಬೆನ್ನಲ್ಲೇ ಮತ್ತೊಂದು ಚುನಾವಣೆ | ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ವೇಳಾಪಟ್ಟಿ ಪ್ರಕಟ

ಪ್ರಾಧ್ಯಾಪಕ ಡಾ.ಬಾಳೇಶ ಚಿನಗುಡಿ ಅವರು ಸ್ಥಾಪಿಸಿರುವ ಈ ಪ್ರಶಸ್ತಿ 5 ಸಾವಿರ ನಗದು, ಅಭಿನಂದನ ಪತ್ರ, ಸ್ಮರಣಿಕೆಗಳೊಂದಿಗೆ ಸನ್ಮಾನ ಪೂರ್ವಕವಾಗಿ ನೀಡಲಾಯಿತು.

ಪರಿಷತ್ತಿನ ಅಧ್ಯಕ್ಷರೂ ಶಾಸನ – ಸಂಶೋಧಕರೂ ಆದ ಹನುಮಾಕ್ಷಿ ಗೋಗಿ, ಪರಿಷತ್ತಿನ ಉಪಾಧ್ಯಕ್ಷರೂ, ಇತಿಹಾಸ ಸಂಶೋಧಕರೂ ಆದ ಡಾ. ಶರಣಗೌಡ ಪಾಟೀಲರೂ ಮತ್ತು ಜನತಾ ಶಿಕ್ಷಣ ಸಮಿತಿಯ ಡಾ.ಅಜಿತ್‍ಪ್ರಸಾದ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಪ್ರಥಮ ಮಹಾಧೀವೇಶನದ ಸರ್ವಾಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: ದುರ್ಗದ ಅಧಿದೇವತೆಗಳ ಅದ್ದೂರಿ ಮೆರವಣಿಗೆ | ಏಕನಾಥೇಶ್ವರಿ, ಬರಗೇರಮ್ಮ ದೇವಿಯರ ಕಣ್ತುಂಬಿಕೊಂಡ ಭಕ್ತರು

ಕರ್ನಾಟಕ ಶಾಸನ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ಮತ್ತು ಜನತಾ ಶಿಕ್ಷಣ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಈ ಮಹಾಧಿವೇಶನ 2024ರ ಎಪ್ರಿಲ್ 29 ಮತ್ತು 30 ರಂದು ಜರುಗಿತು. ಶಾಸನಗಳನ್ನು ಕುರಿತು ಆಹ್ವಾನಿತರಿಂದ ದತ್ತಿ ಉಪನ್ಯಾಸಗಳಲ್ಲದೆ, ಕೆಲವರು ಆಸಕ್ತರು ಮತ್ತು ವಿದ್ಯಾರ್ಥಿಗಳು ಕೂಡಾ ಕೆಲವು ಸಂಪ್ರಬಂಧಗಳನ್ನು ಮಂಡಿಸಿದರು.

ಪ್ರಶಸ್ತಿಯ ಹೆಸರಿನ ಪ್ರೊ. ಶಿ.ಚೆ. ನಂದೀಮಠ ಅವರು ಸಂಸ್ಕøತ ವಿದ್ವಾಂಸರಿದ್ದರಲ್ಲದೆ, ಇಂಗ್ಲೆಂಡಿನಲ್ಲಿ ವೀರಶೈವ – ಲಿಂಗಾಯತ ಧರ್ಮದ ಬಗ್ಗೆ ಸಂಶೋಧನ ಮಹಾ ಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪಡೆದಿದ್ದವರು. ಡಾ.ಡಿ.ಸಿ. ಪಾವಟೆಯವರ ಸಮಕಾಲೀನರಾಗಿದ್ದರಲ್ಲದೆ ಕರ್ನಾಟಕ ವಿಶ್ವ ವಿದ್ಯಾಲಯದ ಸ್ಥಾಪನೆಗೆ ತಳಹದಿ ಹಾಕಿದ ಮಹನೀಯರಲ್ಲೊಬ್ಬರು. ಇಂಥವರ ಹೆಸರಲ್ಲಿ ಸ್ಥಾಪಿತವಾಗಿರುವ ಈ ಪ್ರಶಸ್ತಿ (ಇದೇ ಮೊದಲನೇ ಬಾರಿಯ ಪ್ರಶಸ್ತಿ) ಡಾ.ಬಿ. ರಾಜಶೇಖರಪ್ಪ ಅವರಿಗೆ ಸಲ್ಲುತ್ತಿರುವುದು, ಚಿತ್ರದುರ್ಗದವರಿಗೆ ಹೆಮ್ಮೆ ಪಡುವ ಸಂಗತಿಯಾಗಿದೆ.

ಇದನ್ನೂ ಓದಿ: ವಿಜೃಂಭಣೆಯ ಹಿರೇಗುಂಟನೂರು ದ್ಯಾಮಲಾಂಭ ದೇವಿ ರಥೋತ್ಸವ | ಸಹಸ್ರಾರು ಭಕ್ತರ ನಡುವೆ ಸಾಗಿದ ದೇವಿಯ ತೇರು

ಈ ಸಂದರ್ಭದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ, ಪರಿಷತ್ತಿನ ಡಾ.ಮಹಾದೇವಿ ಹಿರೇಮಠ, ಡಾ.ಬಿ.ವಿ.ಶಿರೂರ, ಪ್ರೊ.ಎಸ್.ಬಿ.ಹಿರೇಮಠ, ಡಾ.ಲಕ್ಷ್ಮಣ್ ತೆಲಗಾವಿ ಮುಂತಾದವರು ಹಾಜರಿದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version