ಮುಖ್ಯ ಸುದ್ದಿ
Renukaswamy murder case: ನಟ ದರ್ಶನ್ ಮನೆಗೆ ಬರೋ ವಿಚಾರ | ರೇಣುಕಾಸ್ವಾಮಿ ತಂದೆ ಫಸ್ಟ್ ರಿಯಾಕ್ಷನ್

CHITRADURGA NEWS | 25 JULY 2024
ಚಿತ್ರದುರ್ಗ: ‘ನಟ ದರ್ಶನ್ ನಮ್ಮ ಮನೆಗೆ ಬರುವ ವಿಚಾರ ಗೊತ್ತಿಲ್ಲ, ಅಂತೆ ಕಂಥೆ ಎಲ್ಲಾ ಬೇಡ. ಒಂದು ವೇಳೆ ಬಂದರೂ ಕೂಡ ನಾವು ದ್ವೇಷ ಮಾಡೋದಿಲ್ಲ. ಬನ್ನಿ ಊಟ ಮಾಡಿ, ಕೂತುಕೊಳ್ಳಿ ಎನ್ನುತ್ತೇವೆ’…ಇದು ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿ (Renukaswamy murder case) ಅವರ ತಂದೆ ಶಿವನಗೌಡ್ರು ಮಾತು.
ಚಿತ್ರದುರ್ಗದ ನಿವಾಸದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ನಾವು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಎಲ್ಲರ ಬಗ್ಗೆ ಒಳ್ಳೆಯ ಭಾವನೆ ಇದೆ. ಕಾನೂನು ಪ್ರಕಾರ ಏನೂ ನಡೆಯುತ್ತದೆಯೋ ಅದು ನಡೆಯಲಿ’ ಎಂದರು.

ಚಿತ್ರದುರ್ಗ ನಗರದ ವಿಆರ್‌ಎಸ್ ಬಡಾವಣೆಯ ರೇಣುಕಾಸ್ವಾಮಿ ನಿವಾಸ
‘ನಾವು ಜಂಗಮರು ಯಾರನ್ನೂ ನಾವು ದ್ವೇಷ ಅಸೂಯೆ ಪಡುವವರಲ್ಲ. ದರ್ಶನ್ ನಮ್ಮ ಮನೆಗೆ ಬರುವುದಾದರೆ ಬರಲಿ, ಯಾರನ್ನು ಬೇಡ ಅನ್ನುವುದಿಲ್ಲ. ನಾವು ಯಾರ ಜೊತೆಯೂ ಶತೃತ್ವ ಬಯಸುವುದಿಲ್ಲ. ಒಳ್ಳೆಯ ರೀತಿಯಲ್ಲಿ ಗೌರವಿಸುತ್ತೇವೆ. ಎಲ್ಲರಿಗೂ ಗೌರವ ಕೊಡುತ್ತೇವೆ, ಪ್ರೀತಿ ವಿಶ್ವಾಸದಿಂದ ಇರುತ್ತೇವೆ’ ಎಂದು ತಿಳಿಸಿದರು.
ಇದನ್ನೂ ಓದಿ: ಫಲಕಾರಿಯಾಗದ ಚಿಕಿತ್ಸೆ | ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ನಿಧನ

ಮಗನನ್ಶು ಕಳೆದುಕೊಂಡ ನೋವಿನಲ್ಲಿ ಕಾಶಿನಾಥ ಶಿವಣ್ಣಗೌಡರ್ ಹಾಗೂ ರತ್ನಪ್ರಭಾ ದಂಪತಿ
‘ಆರ್ಥಿಕ ಸಹಾಯದ ಅಂತೆ ಕಂತೆ ವಿಚಾರ ಸದ್ಯಕ್ಕೆ ಬೇಡ. ಅವತ್ತಿನ ಪರಿಸ್ಥಿತಿ ನೋಡೋಣಾ. ದರ್ಶನ್ ಪತ್ನಿ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ವಿಚಾರ ನಮಗ್ಯಾಕೆ. ಸರ್ಕಾರ ಪ್ರಕರಣ ನಡೆಸುತ್ತಿದೆ. ಮಂತ್ರಿಗಳು ಅವರ ಕರ್ತವ್ಯ ಅವರು ಮಾಡುತ್ತಾರೆ’ ಎಂದರು.
ಇದನ್ನೂ ಓದಿ: ಮಾಜಿ ಶಾಸಕ ಎಸ್.ಕೆ.ಬಸವರಾಜನ್ ವಿರುದ್ಧದ ಪ್ರಕರಣ ರದ್ದು
ಕೊಲೆ ಆರೋಪದಲ್ಲಿ 21 ವರ್ಷ ಶಿಕ್ಷೆ ಪೂರ್ಣಗೊಳಿಸಿ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ತುರವನೂರಿನ ಸಿದ್ದಾರೂಢ ಜೈಲಿನಿಂದ ಹೊರ ಬರುವ ಒಂದು ದಿನ ಮುನ್ನ ದರ್ಶನ್ ಭೇಟಿ ಯಾಗಿದ್ದಾರೆ. ಈ ವೇಳೆ ‘ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಕ್ಷಮೆ ಕೋರುತ್ತೇನೆ’ ಎಂದು ದರ್ಶನ್ ಹೇಳಿದ್ದರು ಎಂದು ಸಿದ್ದರೂಢ ಮಾಧ್ಯಮಗಳಿಗೆ ತಿಳಿಸಿದ್ದರು.
