ಮುಖ್ಯ ಸುದ್ದಿ
kannada: ನಾಲ್ವರು ಪತ್ರಕರ್ತರಿಗೆ ರಾಜ್ಯೋತ್ಸವ ಪ್ರಶಸ್ತಿ
CHITRADURGA NEWS | 31 OCTOBER 2024
ಚಿತ್ರದುರ್ಗ: ಜಿಲ್ಲಾ ಮಟ್ಟದ ಕನ್ನಡ (kannada) ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ನಾಲ್ವರು ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.
ನವೆಂಬರ್ 1 ರಂದು ಬೆಳಗ್ಗೆ 9 ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ | 28 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಉದಯವಾಣಿ ಜಿಲ್ಲಾ ವರದಿಗಾರ ತಿಪ್ಪೇಸ್ವಾಮಿ ನಾಕೀಕೆರೆ, ಬಿ.ಟಿವಿ ನ್ಯೂಸ್ ವರದಿಗಾರ ಸಿ.ರಾಜಶೇಖರ್, ಸುವರ್ಣ ನ್ಯೂಸ್ ವರದಿಗಾರ ಕಿರಣ್ ಕುಮಾರ್ ಎಲ್ ತೊಡರನಾಳು ಹಾಗೂ ಚಂದ್ರವಳ್ಳಿ ಪತ್ರಿಕೆಯ ಸಂಪಾದಕರು, ಹಿರಿಯ ಪತ್ರಕರ್ತರಾದ ಹರಿಯಬ್ಬೆ ಹೆಂಜಾರಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ತಿಪ್ಪೇಸ್ವಾಮಿ ನಾಕೀಕೆರೆ:
ಉಜಿರೆಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದ ನಂತರ ಹೈಕೋರ್ಟ್ ಬೀಟ್ ವರದಿಗಾರರಾಗಿ ಹೊಸದಿಗಂತ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದ ತಿಪ್ಪೇಸ್ವಾಮಿ ನಾಕೀಕೆರೆ, ಆನಂತರ ಚಿತ್ರದುರ್ಗಕ್ಕೆ ಆಗಮಿಸಿ ವಿಜಯವಾಣಿ ಜಿಲ್ಲಾ ವರದಿಗಾರರಾಗಿ 5 ವರ್ಷ, ದಿಗ್ವಿಜಯ ನ್ಯೂಸ್ ವರದಿಗಾರರಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಒದಗಿಸಿ, ಶುಲ್ಕ ನಿಗದಿಪಡಿಸಿ | ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚನೆ
ಕಳೆದ 5 ವರ್ಷಗಳಿಂದ ಉದಯವಾಣಿ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕೋದ್ಯಮದ ಜೊತೆಗೆ ಕೃಷಿ, ಸಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಿ.ರಾಜಶೇಖರ್ ಬೇಡರೆಡ್ಡಿಹಳ್ಳಿ:
ಚಳ್ಳಕೆರೆ ತಾಲೂಕು ಬೇಡರೆಡ್ಡಿಹಳ್ಳಿ ಗ್ರಾಮದ ಕೃಷಿ ಕುಟುಂಬದ ಯುವ ಪತ್ರಕರ್ತ ಸಿ.ರಾಜಶೇಖರ್ ಎಂಎ, ಬಿ.ಇಡಿ, ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಪಡೆದು ಪತ್ರಿಕೋದ್ಯಮಕ್ಕೆ ಪದಾರ್ಪಣೆ ಮಾಡಿದವರು.
ಇದನ್ನೂ ಓದಿ: ಅತ್ತೆ ಮಾವನ ಕೊಲೆ ಮಾಡಿದ್ದ ಅಳಿಯನ ಬಂಧನ | ತೆಲಂಗಾಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ತಲಾಶ್..!
ಪ್ರಜಾಪ್ರಗತಿ ಬಿಡಿ ಸುದ್ದಿ ವರದಿಗಾರ, ರಾಜ್ ನ್ಯೂಸ್ ವರದಿಗಾರನಾಗಿಯೂ ಸೇವೆ ಸಲ್ಲಿಸಿದ್ದು, ಪ್ರಸ್ತುತ ಬಿ.ಟಿವಿ ವರದಿಗಾರರಾಗಿ ಛಾಪು ಮೂಡಿಸುತ್ತಿದ್ದಾರೆ.
ಕಿರಣ್‍ಕುಮಾರ್ ತೊಡರನಾಳ್:
ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಹೊಳಲ್ಕೆರೆ ತಾಲೂಕು ತೊಡರನಾಳು ಗ್ರಾಮದ ಕಿರಣ್ ಕೃಷಿ ಕುಟುಂಬದಿಂದ ಬಂದವರು. ಬಿ.ಇಡಿ, ಪತ್ರಿಕೋದ್ಯಮ ಪದವೀಧರ.
ಇದನ್ನೂ ಓದಿ: 127 ಅಡಿ ದಾಟಿದ ವಿವಿ ಸಾಗರ ನೀರಿನ ಮಟ್ಟ | ಕೋಡಿಗೆ 3 ಅಡಿ ಬಾಕಿ
ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ, ಪ್ರಜಾ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದು, ಚಿತ್ರದುರ್ಗ ಜಿಲ್ಲೆಗೆ ಆಗಮಿಸಿ, ಇಲ್ಲಿ ಸುವರ್ಣ ನ್ಯೂಸ್ ವರದಿಗಾರರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹರಿಯಬ್ಬೆ ಹೆಂಜಾರಪ್ಪ:
ಹಿರಿಯೂರು ತಾಲೂಕು ಹರಿಯಬ್ಬೆ ಗ್ರಾಮದ ಹೆಂಜಾರಪ್ಪ ಕೃಷಿ ಕುಟುಂಬದ ಹಿನ್ನೆಲೆಯಲ್ಲಿ ಬಂದು, ಪತ್ರಿಕೋದ್ಯಮದಲ್ಲಿ ಹಲವು ದಶಕಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.
ಎಂಎ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ವೀರಾಗ್ರಣಿ ಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟು, ಹಿರಿಯೂರು ತಾಲೂಕು ಕನ್ನಡಪ್ರಭ ವರದಿಗಾರ, ಉದಯವಾಣಿ ಚಿತ್ರದುರ್ಗ ಜಿಲ್ಲಾ ವರದಿಗಾರಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | ರಾಶಿ ಬೆಲೆಯಲ್ಲಿ ಭರ್ಜರಿ ಏರಿಕೆ
ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರೂ ಆಗಿದ್ದು, ಪ್ರಸ್ತುತ ಚಂದ್ರವಳ್ಳಿ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆ ಕುರಿತ ಶತಕ ಮೀರಿದ ಸರಣಿ ವರದಿಗಳ ಮೂಲಕ ವಿಶೇಷ ಗಮನ ಸೆಳೆದಿದ್ದರು.