ಮುಖ್ಯ ಸುದ್ದಿ
Rain report; ಮತ್ತೋಡುನಲ್ಲಿ 49.6 ಮಿ.ಮೀ ಮಳೆ | ಜಿಲ್ಲೆಯಲ್ಲಿ 21 ಮನೆ ಹಾನಿ

CHITRADURGA NEWS | 16 AUGUST 2024
ಚಿತ್ರದುರ್ಗ: ಗುರುವಾರ ಸುರಿದ ಮಳೆ(Rain)ಗೆ ಹೊಸದುರ್ಗ ತಾಲ್ಲೂಕಿನಲ್ಲಿ ಮತ್ತೋಡು 49.6 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಅಧಿಕ ಮಳೆಯಾಗಿದೆ.
ಕ್ಲಿಕ್ ಮಾಡಿ ಓದಿ: Hindu Mahaganapati; ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ | ಧ್ವಜ ಪೂಜೆ ಮೂಲಕ ವಿದ್ಯುಕ್ತ ಚಾಲನೆ
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 4.4 ಮಿ.ಮೀ, ಮಾಡದಕೆರೆ 7 ಮಿ.ಮೀ, ಶ್ರೀರಾಂಪುರ 46.2 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 9.8 ಮಿ.ಮೀ, ಭರಮಸಾಗರ 7 ಮಿ.ಮೀ, ಹಿರೇಗುಂಟನೂರು 16.6 ಮಿ.ಮೀ, ತುರುವನೂರು 9.8 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 17.9 ಮಿ.ಮೀ, ನಾಯಕನಹಟ್ಟಿ 18.2 ಮಿ.ಮೀ, ಪರಶುರಾಂಪುರ 22.5 ಮಿ.ಮೀ, ತಳಕು 16.7 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 3.8 ಮಿ.ಮೀ, ಐಮಂಗಲ 2.9 ಮಿ.ಮೀ, ಧರ್ಮಪುರ 8.6 ಮಿ.ಮೀ, ಜೆ.ಜೆ.ಹಳ್ಳಿ 2 ಮಿ.ಮೀ ಮಳೆಯಾಗಿದೆ.
ಕ್ಲಿಕ್ ಮಾಡಿ ಓದಿ: ಯಲ್ಲದಕೆರೆ-ಹಿರಿಯೂರು ಮಾರ್ಗಕ್ಕೆ KSRTC ಬಸ್ ಸೌಲಭ್ಯ
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 3.7 ಮಿ.ಮೀ, ಬಿ.ದುರ್ಗ 15.2 ಮಿ.ಮೀ, ರಾಮಗಿರಿ 1.3 ಮಿ.ಮೀ, ತಾಳ್ಯ 6.5 ಮಿ.ಮೀ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರುನಲ್ಲಿ 1 ಮಿ.ಮೀ ಹಾಗೂ ದೇಮಸಮುದ್ರದಲ್ಲಿ 1.6 ಮಿ.ಮೀ ಮಳೆಯಾಗಿದೆ.
21 ಮನೆಗಳು ಭಾಗಶಃ ಹಾನಿ:
ಗುರುವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 21 ಮನೆಗಳು ಭಾಗಶಃ ಹಾನಿಯಾಗಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 15 ಮನೆಗಳು ಭಾಗಶಃ ಹಾನಿ ಹಾಗೂ 1 ಹಸು ಮೃತಪಟ್ಟಿದೆ. ಹೊಳಲ್ಕೆರೆಯಲ್ಲಿ 5 ಮನೆಗಳು ಭಾಗಶಃ ಹಾನಿಯಾಗಿವೆ ಹಾಗೂ ಮೊಳಕಾಲ್ಮುರ ತಾಲ್ಲೂಕಿನಲ್ಲಿ 1 ಮನೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
