ಮುಖ್ಯ ಸುದ್ದಿ
Rain: ಕೋಟೆನಾಡಿನಲ್ಲಿ ಚುರುಕಾಯ್ತು ಮಳೆ | ಶೀತಗಾಳಿಗೆ ಜನ ಹೈರಾಣು
CHITRADURGA NEWS | 20 JULY 2024
ಚಿತ್ರದುರ್ಗ: ಜಿಲ್ಲೆಯಾದ್ಯಂತ ಮಳೆ (Rain) ಪುನಃ ಚುರುಕಾಗಿದೆ. ಶನಿವಾರ ಮಧ್ಯಾಹ್ನದ ಬಳಿಕ ಜೋರಾಗಿ ಸುರಿಯುತ್ತಿದೆ. ರಾತ್ರಿಯೂ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಬಿಸಿಲು ಕಾಣದಂತಾಗಿದ್ದು, ಜನರು ಶೀತಗಾಳಿಗೆ ಹೈರಾಣಾಗಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಮಾಡದಕೆರೆಯಲ್ಲಿ ಶುಕ್ರವಾರ 26 ಮಿ.ಮೀ ಮಳೆಯಾಗಿದೆ. ಉಳಿದಂತೆ ಹೊಸದುರ್ಗದಲ್ಲಿ 16.6ಮಿ.ಮೀ, ಬಾಗೂರು 20.6, ಮತ್ತೋಡು 12.2, ಶ್ರೀರಾಂಪುರ 16.2 ಮಿ.ಮೀ, ಹೊಳಲ್ಕೆರೆಯಲ್ಲಿ 11.4, ರಾಮಗಿರಿ 9.4, ಚಿಕ್ಕಜಾಜೂರು 16.2 , ಬಿ. ದುರ್ಗ 24.2, ಎಚ್.ಡಿ.ಪುರ 13.4, ತಾಳ್ಯ 6 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 1 ಮಿ.ಮೀ, ರಾಯಪುರ 0.6 ಮಿ.ಮೀ ಹಾಗೂ ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 3.6 ಮಿ.ಮೀ, ಪರಶುರಾಂಪುರ 10.8 ಮಿ.ಮೀ, ನಾಯಕನಹಟ್ಟಿ 3.4ಮಿ.ಮೀ, ತಳಕು 2.2 ಮಿ.ಮೀ, ಡಿ.ಮರಿಕುಂಟೆ 4.6 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ಡೆತ್‌ನೋಟ್ ಓದುತ್ತಿದ್ದಂತೆ ಸಿಎಂ ಮೌನ | ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ
ಚಿತ್ರದುರ್ಗ-1ರಲ್ಲಿ 12 ಮಿ.ಮೀ, ಚಿತ್ರದುರ್ಗ-2ರಲ್ಲಿ 7.3 ಮಿ.ಮೀ, ತುರುವನೂರು 5.4 ಮಿ.ಮೀ, ಐನಹಳ್ಳಿ 9.8 ಮಿ.ಮೀ, ಹಿರೇಗುಂಟನೂರು 3.7 ಮಿ.ಮೀ, ಸಿರಿಗೆರೆ 19.4 ಮಿ.ಮೀ, ಭರಮಸಾಗರ 19 ಮಿ.ಮೀ, ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 5.4 ಮಿ.ಮೀ, ಇಕ್ಕನೂರು 9.6 ಮಿ.ಮೀ, ಈಶ್ವರಗೆರೆ 13.2 ಮಿ.ಮೀ, ಬಬ್ಬೂರು 8 ಮಿ.ಮೀ, ಸುಗೂರು 3.4 ಮಿ.ಮೀ, ಮಳೆಯಾಗಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ | ಪ್ರಮುಖ ಆರೋಪಿ ರಘು ತಾಯಿ ನಿಧನ
ಶುಕ್ರವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ 11 ಮನೆಗಳು ಭಾಗಶಃ ಹಾನಿ ಹಾಗೂ 1 ಮನೆ ಪೂರ್ಣ ಹಾನಿಯಾಗಿದ್ದು, 1 ಜೀವ ಹಾನಿಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಭಾಗಶಃ 1 ಮನೆ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಭಾಗಶಃ 6 ಮನೆ ಮತ್ತು 1 ಮನೆ ಸಂಪೂರ್ಣ ಹಾನಿ, ಗೋಡೆ ಬಿದ್ದು ಒಂದು ಜೀವ ಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ ಭಾಗಶಃ 4 ಮನೆಗಳು ಹಾನಿಯಾಗಿದೆ.