ಮುಖ್ಯ ಸುದ್ದಿ
ತಿಪ್ಪಾರೆಡ್ಡಿ ಅಂದ್ರೆ ನೀವೇನಾ..!? | ಪ್ರತಿಭಟನೆ ಮಾಡಿದ್ದಕ್ಕೆ ಬಂತು ಬೆದರಿಕೆ ಕರೆ
CHITRADURGA NEWS | 13 JUNE 2024
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಖಂಡಿಸಿ, ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲು ಒತ್ತಾಯಿಸಿ ಜೂ.12 ರಂದು ಚಿತ್ರದುರ್ಗದಲ್ಲಿ ವಿವಿಧ ಸಮಾಜ, ಸಂಘ ಸಂಸ್ಥೆಗಳು ಸೇರಿ ಬೃಹತ್ ಪ್ರತಿಭಟನೆ ನಡೆಸಿದವು.
ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಎಂಎಲ್ಸಿ ಕೆ.ಎಸ್.ನವೀನ್ ಸೇರಿದಂತೆ ರೈತಪರ, ಕನ್ನಡಪರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಚಿತ್ರದುರ್ಗದ ನೂರಾರು ನಾಗರೀಕರು ಭಾಗವಹಿಸಿದ್ದರು.
ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲೂ ಲಭ್ಯ
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲರೂ ನಟ ದರ್ಶನ್ ವಿರುದ್ಧ ಧಿಕ್ಕಾರ ಕೂಗಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕೂಡಾ ದರ್ಶನ್ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಪ್ರತಿಭಟನೆಯಲ್ಲಿ ಭಾಗವಹಿಸಿ ಭಾಷಣ ಮಾಡಿ, ಮನೆಗೆ ತೆರಳುವ ವೇಳೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಬೆದರಿಕೆ ಕರೆಯೊಂದು ಬಂದಿರುವ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರೇಣುಕಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಿ | ಸಂಸದ ಗೋವಿಂದ ಕಾರಜೋಳ ಒತ್ತಾಯ
ಅನಾಮಿಕ ವ್ಯಕ್ತಿಯೊಬ್ಬರು ತಿಪ್ಪಾರೆಡ್ಡಿ ಅವರಿಗೆ ಪೋನ್ ಮಾಡಿ, ತಿಪ್ಪಾರೆಡ್ಡಿ ಅಂದ್ರೆ ನೀವೇನಾ ಎಂದು ಗಡುಸಾದ ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ. ಹೌದು ಹೇಳಿ ಅಂದಾಗ, ಪ್ರತಿಭಟನೆ ಯಾಕೆ ಮಾಡುತ್ತಿದ್ದೀರಾ ಎಂದಿದ್ದಾರೆ.
ಅದಕ್ಕೆ ಜಿ.ಎಚ್.ತಿಪ್ಪಾರೆಡ್ಡಿ ಅವರು, ಪ್ರತಿಭಟನೆ ಮಾಡುತ್ತಿರುವ ವಿಚಾರ ಇಡೀ ದೇಶಕ್ಕೆ ಗೊತ್ತಿದೆ. ನೀನ್ಯಾರು ಹೇಳು ಅಂದಿದ್ದಾರೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ | ಜೂನ್ 15 ರಂದು ಉದ್ಯೋಗ ಮೇಳ
ಆದರೆ, ಕರೆ ಮಾಡಿದ ವ್ಯಕ್ತಿ ಹೆಸರು ಹೇಳಿಲ್ಲ. ಮುಂದುವರೆದು, ನಿಮ್ಮ ಬಳಿ ಏನು ಸಾಕ್ಷಿ ಇದೆ ಎಂದು ಮರು ಪ್ರಶ್ನೆ ಹಾಕಿದ್ದಾನೆ. ಇನ್ನು ಮಾತು ಮುಂದುವರೆಸುವುದು ಬೇಡ ಎಂದು ತೀರ್ಮಾನಿಸಿದ ಜಿ.ಎಚ್.ತಿಪ್ಪಾರೆಡ್ಡಿ ಕರೆ ಕಟ್ ಮಾಡಿ, ಗನ್ ಮ್ಯಾನ್‍ಗೆ ಪೋನ್ ಕೊಟ್ಟು ಬ್ಲಾಕ್ ಲಿಸ್ಟ್‍ಗೆ ಹಾಕಿಸಿದ್ದಾರೆ.
ಇದನ್ನೂ ಓದಿ: ರೇಣುಕಸ್ವಾಮಿ ಕೊಲೆ ಖಂಡಿಸಿ (X) ಟ್ವಿಟರ್ ಅಭಿಯಾನ |# Justice For Renukaswamy
ಈ ಬಗ್ಗೆ ಇಂದು ಸುದ್ದಿಗಾರರ ಪ್ರಶ್ನೆಗೆಳಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕರು, ಇಷ್ಟೆಲ್ಲಾ ದೊಡ್ಡ ಘಟನೆ ಆದ ನಂತರವೂ ಈ ರೀತಿ ಪೋನ್ ಮಾಡುತ್ತಾರೆಂದರೆ ಹೇಗೆ, ಈ ಬಗ್ಗೆ ನಾನು ಬಹಳ ತಲೆ ಕೆಡಿಸಿಕೊಳ್ಳುವುದಿಲ್ಲ. ಪೊಲೀಸರು ನಂಬರ್ ಕೇಳಿದ್ದಾರೆ. ನಾನೇನು ದೂರು ಕೊಡುವುದಿಲ್ಲ ಎಂದು ತಿಳಿಸಿದರು.
ಹಿಂದೆಯೂ ನಡೆದಿತ್ತು ಹನಿಟ್ರ್ಯಾಪ್ ಯತ್ನ:
ಎರಡು ವರ್ಷಗಳ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಹನಿ ಟ್ರ್ಯಾಪ್ ಮಾಡುವ ಯತ್ನ ನಡೆದಿತ್ತು. ವೀಡಿಯೋ ಕಾಲ್ ಮೂಲಕ ಯುವತಿಯೊಬ್ಬಳು ಮಾತನಾಡಿದ್ದನ್ನು ಸ್ಮರಿಸಿದ ಶಾಸಕರು, ಆಗ ದೂರು ನೀಡಿದ್ದೆ. ಒರಿಸ್ಸಾ ಮೂಲದಿಂದ ಕರೆ ಬಂದಿತ್ತು, ಮತ್ತೆ ಗಮನಹರಿಸಿಲ್ಲ ಎಂದರು.