Connect with us

    ತಾಲೂಕು ಆಫೀಸ್ ಬಳಿ ಶೌಚಾಲಯ ಇದೆ, ನೀರಿಲ್ಲ..!!!

    ಕರುನಾಡ ವಿಜಯಸೇನೆ ಕಾರ್ಯಕರ್ತರು ಚಿತ್ರದುರ್ಗ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

    ಮುಖ್ಯ ಸುದ್ದಿ

    ತಾಲೂಕು ಆಫೀಸ್ ಬಳಿ ಶೌಚಾಲಯ ಇದೆ, ನೀರಿಲ್ಲ..!!!

    ಚಿತ್ರದುರ್ಗ ನ್ಯೂಸ್.ಕಾಂ:

    ಪ್ರತಿ ದಿನ ನೂರಾರು ಸಾರ್ವಜನಿಕರು ಬಂದು ಹೋಗುವ ತಾಲೂಕು ಕಚೇರಿ ಬಳಿ ಶೌಚಾಲಯ ಸಮಸ್ಯೆ ಇರುವುದನ್ನು ಮನಗಂಡು ಕರುನಾಡ ವಿಜಯಸೇನೆ ಕಾರ್ಯಕರ್ತರು ಚಿತ್ರದುರ್ಗ ತಹಶೀಲ್ದಾರ್ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

    ತಹಶೀಲ್ದಾರ್ ಕಚೇರಿ, ಉಪನೊಂದಣಾಧಿಕಾರಿ ಕಚೇರಿ ಒಂದೇ ಆವರಣದಲ್ಲಿರುವುದರಿಂದ ನಿತ್ಯ ಸಾವಿರಕ್ಕೂ ಅಧಿಕ ಮಂದಿ ಇಲ್ಲಿಗೆ ಬಂದೇ ಬರುತ್ತಾರೆ. ಆದರೆ, ಬಂದವರು ಶೌಚ ಅಥವಾ ಮೂತ್ರ ವಿಸರ್ಜನೆಗೆ ಎಲ್ಲಿಗೆ ಹೋಗುತ್ತಾರೆ ಎನ್ನುವ ಸಮಸ್ಯೆ ಇತ್ತು.

    ಇದನ್ನೂ ಓದಿ: ಬೈಕಿಗೆ ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಸವಾರ ಸಾವು

    ಈ ಕಾರಣಕ್ಕೆ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ಶೌಚಾಲಯ ನಿರ್ಮಿಸಿದ್ದರೂ, ನೀರಿಲ್ಲದ ಕಾರಣಕ್ಕೆ ಬಳಕೆಯಾಗಿಲ್ಲ. ಬಳಕೆಯಾಗದ ಶೌಚಾಲಯದಕ್ಕೆ ಕೆಲ ಕಡತಗಳನ್ನು ಇಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕು ಕಚೇರಿಯಿಂದ ಸ್ವಲ್ಪ ದೂರದಲ್ಲಿ ಸಾರ್ವಜನಿಕ ಶೌಚಾಲಯ ಇರುವುದರಿಂದ ಕೆಲವರು ಅಲ್ಲಿಗೆ ಹೋಗುತ್ತಿದ್ದಾರೆ. ಕೆಲವರು ಪ್ರವಾಸಿ ಮಂದಿರದ ಒಳಗೆ ಹೋಗುತ್ತಾರೆ. ಆದರೆ, ತುರ್ತು ಕೆಲಸಕ್ಕೆ ಬಂದವರು, ಮಹಿಳೆಯರು, ಮಕ್ಕಳು, ವೃದ್ಧರು ಇಲ್ಲಿಗೆ ನೊಂದಣಿ ಅಥವಾ ತಹಶೀಲ್ದಾರ್ ಕಚೇರಿಗೆ ಬಂದೇ ಬರುತ್ತಾರೆ. ಇವರಿಗೆಲ್ಲಾ ಎಲ್ಲಿಗೆ ಹೋಗಲು ಹೇಳುತ್ತೀರಿ ಎಂದು ಪ್ರಶ್ನಿಸಿದರು.

    ಮುಂದಿನ ಮೂರು ದಿನಗಳಲ್ಲಿ ಶೌಚಾಲಯ ಸಾರ್ವಜನಿಕರ ಬಳಕೆಗೆ ಸಿಗುವಂತೆ ಮಾಡದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.

    ಈ ವೇಳೆ ತಹಶೀಲ್ದಾರ್ ಡಾ.ನಾಗವೇಣಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

    ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಾ ಗೌರಣ್ಣ, ಜಗದೀಶ್ ಸಿ. ರತ್ನಮ್ಮ, ಗೋಪಿನಾಥ್ ಎಸ್.ಅವಿನಾಶ್, ರಾಜಣ್ಣ, ಪ್ರದೀಪ, ಹರೀಶ್, ಸುರೇಶ ಮತ್ತಿತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top