ಹಿರಿಯೂರು
Govinda Karajola; ಹಿರಿಯೂರು ಬಿಇಓ ಕಚೇರಿ ಉದ್ಘಾಟನೆ ವೇಳೆ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ | ಸಂಸದ ಗೋವಿಂದ ಕಾರಜೋಳ ಕಡೆಗಣನೆಗೆ ಆಕ್ರೋಶ
CHITRADURGA NEWS | 06 JUNE 2024
ಚಿತ್ರದುರ್ಗ: ನೂತನ ಸಂಸದರು, ಮಾಜು ಉಪಮುಖ್ಯಂತ್ರಿಗಳೂ ಆಗಿರುವ ಗೋವಿಂದ ಕಾರಜೋಳ (Govinda karajola) ಅವರನ್ನು ಶಿಷ್ಟಾಚಾರದಂತೆ ಹಿರಿಯೂರು ಬಿಇಓ ಕಚೇರಿ ಉದ್ಘಾಟನೆಗೆ ಆಹ್ವಾನಿಸಿದೆ ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶನಿವಾರ ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಂಸದರು ಅಧಿವೇಶನದಲ್ಲಿರುವ ದಿನವನ್ನು ನೋಡಿ ಕಾರ್ಯಕ್ರಮ ನಿಗಧಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಇದನ್ನೂ ಓದಿ: Accident; ಶಿವಮೊಗ್ಗ ಬಳಿ ಭೀಕರ ಅಪಘಾತ | ಚಿತ್ರದುರ್ಗ ಮೂಲದ ಮೂವರ ದುರ್ಮರಣ
ನಾಮಕಾವಸ್ತೆಗೆ ಕಾರ್ಯಕ್ರಮದ ಕಾರ್ಯಕ್ರಮದ ಹಿಂದಿನ ದಿನ ಸಂಸದರಾದ ಗೋವಿಂದ ಕಾರಜೋಳ ಅವರಿಗೆ ಫೋನ್ ಮಾಡಿ ಕರೆಯಲಾಗಿದೆ. ಆದರೆ, ಒಂದೆರಡು ಮೊದಲೇ ಅವರ ದಿನಾಂಕ ಕೇಳಿಕೊಂಡು ಕಾರ್ಯಕ್ರಮ ನಿಗಧಿ ಮಾಡಬೇಕಾಗಿತ್ತು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ್, ತಾಪಂ ಸದಸ್ಯ ಶಂಕರಮೂರ್ತಿ, ಮುಖಂಡರಾದ ಜೆ.ಬಿ,ರಾಜಣ್ಣ, ಜೆಡಿಎಸ್ ಕಾರ್ಯಧ್ಯಕ್ಷ ಜಲ್ದಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿದಾನಂದ, ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ತಿರುಮಲೇಶ್, ನಗರ ಘಟಕದ ಅಧ್ಯಕ್ಷ ಚಂದ್ರಹಾಸ, ಯುವ ಮೋರ್ಚಾ ಅಧ್ಯಕ್ಷ ಹರೀಶ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ನಾಗೇಂದ್ರಪ್ಪ, ಒಬಿಸಿ ಪ್ರಧಾನ ಕಾರ್ಯದರ್ಶಿ ಜನಾರ್ಧನ್, ತಾಲೂಕು ಮಾಜಿ ಪ್ರಧಾನ ಕಾರ್ಯದರ್ಶಿ ಎನ್.ಚಿತ್ತಯ್ಯ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪಾರ್ಥಯಾದವ್, ಎಸ್‍ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್, ಜೆಡಿಎಸ್ ಯುವ ಮುಖಂಡ ರಾಜೇಂದ್ರಗೌಡ, ಮುಖಂಡರಾದ ಜೆ.ಜೆ.ಹಳ್ಳಿ ಮಹೇಶ್, ಹೊಸಹಟ್ಟಿ ತಿಮ್ಮಣ್ಣ, ಎನ್.ತಿಪ್ಪೇಸ್ವಾಮಿ, ನಿಜಲಿಂಗಪ್ಪ ಮತ್ತಿತರರು ಭಾಗವಹಿಸಿದ್ದರು.