ಚಿತ್ರದುರ್ಗ ನ್ಯೂಸ್.ಕಾಂ
ಹೈನುಗಾರಿಕೆಯನ್ನು ಲಾಭದಾಯಕವಾಗಿ ಮಾಡುವ ಆಸಕ್ತಿ ನಿಮ್ಮಲ್ಲಿದೆಯೇ ? ಮಾಹಿತಿ ಕೊರತೆ ಕಾರಣಕ್ಕೆ ಸುಮ್ಮನಿದ್ದೀರಾ ?…ಈಗ ಎಲ್ಲದಕ್ಕೂ ಪರಿಹಾರ ನಿಮ್ಮ ಸನಿಹಕ್ಕೆ ಬಂದಿದೆ. ಅದು ಬಸ್ ಪ್ರಯಾಣ ವೆಚ್ಚದ ಜತೆಗೆ ಊಟ ಸಹ ನೀಡುತ್ತಾರೆ. ಇನ್ನೇಕೆ ತಡ ಯೋಚನೆ ಮಾಡದೆ ಹೆಸರು ನೋಂದಾಯಿಸಿ. ಎಲ್ಲಿಗೆ ಹೆಸರು ನೋಂದಾಯಿಸ ಬೇಕು ಎಂಬ ಪ್ರಶ್ನೆ ಮೂಡುವುದು ಸಹಜ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಮುಂದಿನಂತೆ. ಸಮಾಧಾನವಾಗಿ ಓದಿ ಶೀಘ್ರ ಹೆಸರು ನೋಂದಾಯಿಸಿಕೊಂಡು ಹೈನುಗಾರಿಕೆ ಮಾಹಿತಿ ಪಡೆದು ಯಶಸ್ಸು ಸಾಧಿಸಿ.
ಇದನ್ನೂ ಓದಿ: ವಿದ್ಯುತ್ ವ್ಯತ್ಯಯ; ಮುಂಜಾನೆಯಿಂದಲೇ ಸಮಸ್ಯೆ

ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ‘ಲಾಭದಾಯಕ ಹೈನುಗಾರಿಕೆ’ ಕುರಿತು ಒಂದು ದಿನದ ತರಬೇತಿಯನ್ನು ಡಿ.28 ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತ ರೈತರು ಭಾಗವಹಿಸಬಹುದಾಗಿದೆ.
ತರಬೇತಿ ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ.ದೊಡ್ಡಮಲ್ಲಯ್ಯ, ಹಿರಿಯೂರು ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ಅವರು, ರಾಸುಗಳಲ್ಲಿ ಹೈನುಗಾರಿಕೆಗೆ ಉತ್ತಮ ತಳಿಗಳ ಆಯ್ಕೆ, ಕೊಟ್ಟಿಗೆ ಮತ್ತು ಮೇವಿನ ನಿರ್ವಹಣೆ ಹಾಗೂ ರಾಸುಗಳ ಆರೋಗ್ಯ ನಿರ್ವಹಣೆ ಬಗ್ಗೆ ವಿಶೇಷ ಉಪನ್ಯಾಸ ನೀಡುವರು.
ಇದನ್ನೂ ಓದಿ: ಐದು ಗ್ಯಾರೆಂಟಿ ನಿಲ್ಲಿಸಿ, ಕಾಮಗಾರಿ ಬಿಲ್ ಪಾವತಿಸಿ; ಕಟ್ಟಡ ನಿರ್ಮಾಣ ಕಾರ್ಮಿಕರ ಆಗ್ರಹ
ಆಸಕ್ತ 50 ಜನ ರೈತ ಭಾಂದವರು ತರಬೇತಿಯಲ್ಲಿ ಭಾಗವಹಿಸಿಸಲು ಅವಕಾಶವಿದೆ. ಆರ್.ರಜನೀಕಾಂತ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂ (8277931058), ಎಂ.ಉಷಾರಾಣಿ (9980730696), ಟಿ.ಪಿ. ರಂಜಿತಾ, ಕೃಷಿ ಅಧಿಕಾರಿ (8277930959) ಮತ್ತು ಎಂ.ಜೆ.ಪವಿತ್ರಾ (9535412286) ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಇದನ್ನೂ ಓದಿ: ಬಂದೇ ಬಿಡ್ತು ಸರ್ಕಾರದ ಮತ್ತೊಂದು ಗ್ಯಾರೆಂಟಿ; ಯುವನಿಧಿಗೆ ಅರ್ಜಿ ಆಹ್ವಾನ
ತರಬೇತಿಗೆ ಆಗಮಿಸುವವರಿಗೆ ಬಸ್ ದರದ ಪ್ರಯಾಣ ವೆಚ್ಚ ನೀಡಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ತಿಳಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
