ಮುಖ್ಯ ಸುದ್ದಿ
PM: ಚಿತ್ರದುರ್ಗಕ್ಕೆ ಗುಡ್‌ನ್ಯೂಸ್‌ಕೊಟ್ಟ ನರೇಂದ್ರ ಮೋದಿ | ದಶಕಗಳ ಕಾಯುವಿಕೆಗೆ ಸಿಕ್ಕ ಕೆವಿ
CHITRADURGA NEWS | 06 DECEMBER 2024
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜನರ ಸುಧೀರ್ಘ ಕಾಯುವಿಕೆಗೆ ಪ್ರಧಾನಿ(Prime Minister)ನರೇಂದ್ರ ಮೋದಿ ಸಿಹಿ ಸುದ್ದಿ ನೀಡಿದ್ದಾರೆ.
ಕ್ಲಿಕ್ ಮಾಡಿ ಓದಿ: ನಾಳೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?
ರಾಜ್ಯದಲ್ಲಿ ಮೂರು ಹೊಸ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರದ ಸಂಪುಟ ಒಪ್ಪಿಗೆ ನೀಡಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೂ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಮೋದಿ ಸರ್ಕಾರ ಅನುಮತಿ ನೀಡಿದೆ.
ಇದರೊಟ್ಟಿಗೆ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲೂ ಹೊಸ ಕೇಂದ್ರೀಯ ವಿದ್ಯಾಲಯ ಪ್ರಾರಂಭಿಸಲು ಅವಕಾಶ ದೊರೆತಿದೆ.
ಶಿವಮೊಗ್ಗದಲ್ಲಿರುವ ಕೇಂದ್ರೀಯ ವಿದ್ಯಾಲಯದ ವಿಸ್ತರಣೆಗೂ ಅವಕಾಶ ದೊರೆತಿದೆ. ಇದರೊಟ್ಟಿಗೆ ರಾಜ್ಯದಲ್ಲಿ ಮತ್ತೊಂದು ನವೋದಯ ವಿದ್ಯಾಲಯ ಸ್ಥಾಪನೆಗೂ ಕೇಂದ್ರದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಕ್ಲಿಕ್ ಮಾಡಿ ಓದಿ: ಹೊಳಲ್ಕೆರೆ ಬಿಜೆಪಿ ಘಟಕದಿಂದ ಪ್ರೆಸ್‌ಮೀಟ್ | ಮಂಡಲ ಅಧ್ಯಕ್ಷ ಸಿದ್ದೇಶ್ ಏನು ಹೇಳಿದ್ರು?
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಈ ಸಭೆಯಲ್ಲಿ ದೇಶಾದ್ಯಂತ 85 ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಸಂಪುಟ ಒಪ್ಪಿಗೆ ನೀಡಿದೆ.
ಚಿತ್ರದುರ್ಗದಲ್ಲಿ ಈಗಾಗಲೇ ತಾತ್ಕಾಲಿಕವಾಗಿ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ತರಗತಿ ನಡೆಸಲು ಅವಕಾಶ ಲಭ್ಯವಾಗಿತ್ತು. ಕುಂಚಿಗನಾಳು ಬಳಿ ಹೊಸ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಜಾಗವನ್ನೂ ಅಂತಿಮಗೊಳಿಸಲಾಗಿದೆ.
ಕ್ಲಿಕ್ ಮಾಡಿ ಓದಿ: Trip: ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ
ಹೊಸ ಕೆವಿಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಒಂದು ಕೆವಿ ವಿಸ್ತರಣೆಗೆ ಒಟ್ಟು 5,872.08 ಕೋಟಿ ಹಣ ಮೀಸಲಿಡುವುದಾಗಿ ಕೇಂದ್ರ ಸರ್ಕಸರ ತಿಳಿಸಿದೆ.