Connect with us

    ಕೆಲ ತಿಂಗಳಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ ಪ್ರಧಾನಿ ಮೋದಿ; ಮಾಜಿ ಸಚಿವ ಗೋವಿಂದ ಎಂ.ಕಾರಜೋಳ

    ಮುಖ್ಯ ಸುದ್ದಿ

    ಕೆಲ ತಿಂಗಳಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ ಪ್ರಧಾನಿ ಮೋದಿ; ಮಾಜಿ ಸಚಿವ ಗೋವಿಂದ ಎಂ.ಕಾರಜೋಳ

    ಚಿತ್ರದುರ್ಗ ನ್ಯೂಸ್‌.ಕಾಂ

    ಹೈದರಾಬಾದ್‌ನಲ್ಲಿ ನಡೆದ ಮಾದಿಗ ಸಮಾಜದ ಬೃಹತ್‌ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಮಾತು ಕೊಟ್ಟಿದ್ದಾರೆ. ಕೆಲ ತಿಂಗಳಲ್ಲೇ ಸಿಹಿ ಸುದ್ದಿ ಸಿಗುವ ಭರವಸೆಯಿದೆ ಎಂದು ಮಾಜಿ ಸಚಿವ ಗೋವಿಂದ ಎಂ.ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಮಾಜಿ ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿಯಲ್ಲಿ ಗಲಾಟೆ; ಸ್ಥಳಕ್ಕೆ ದೌಡಾಯಿಸಿದ ಪೊಲೀಸರು

    ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯದ ಎಲ್ಲೆಡೆ ಮಾದಿಗ ಮುನ್ನೆಡೆ ‘ಮಾದಿಗರ ಆತ್ಮ ಗೌರವ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ‘ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಒಳಮೀಸಲಾತಿ ಜಾರಿಗಾಗಿ ಶ್ರಮಿಸಿದ್ದಾರೆ. ಆದರೆ, ಕಾಂಗ್ರೆಸ್‌ ನವರು ಈ ವಿಚಾರವಾಗಿ ನಿರಂತರವಾಗಿ ತಪ್ಪು ತಿಳುವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

    ‘ಲಂಬಾಣಿ, ಭೋವಿ ಸಮಾಜವನ್ನು ಎಸ್ಸಿ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಗಲಾಟೆ ಮಾಡಿಸಿದರು. ಇದರಿಂದ ಯಡಿಯೂರಪ್ಪ ಅವರ ಮನೆಗೂ ಕಲ್ಲು ತೂರಿದ್ದನ್ನು ನಾವೇಲ್ಲ ನೋಡಿದ್ದೇವೆ. ಎಸ್ಸಿ ಪಟ್ಟಿಯಿಂದ ಸಹೋದರ ಸಮಾಜಗಳನ್ನು ಕೈ ಬಿಡುವ ಪ್ರಶ್ನೆಯೇ ಇರಲಿಲ್ಲ. ಮೀಸಲಾತಿ ಹಂಚಿಕೆ ಮಾತ್ರ ಜನಸಂಖ್ಯೆ ಆಧಾರದಲ್ಲಿ ನಡೆಸಲು ಮುಂದಾಗಿದ್ದೆವು’ ಎಂದು ತಿಳಿಸಿದರು.

    ‘2004ರಲ್ಲಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ನ್ಯಾ.ಸದಾಶಿವ ಆಯೋಗವನ್ನು ರಚಿಸಿದರೂ 4 ವರ್ಷಗಳ ಕಾಲ ಅವರಿಗೆ ಅನುದಾನ, ಕಚೇರಿ, ಸಿಬ್ಬಂದಿಗಳನ್ನು ಕೊಟ್ಟಿರಲಿಲ್ಲ. 2008ರಲ್ಲಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಅವರು ₹11 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು’ ಎಂದರು.

    ಇದನ್ನೂ ಓದಿ: ಪ್ರವಾಸಿ ಮಂದಿರದಲ್ಲಿ ಇಸ್ಪೀಟ್ ಆಡುತ್ತಿದ್ದ 14 ಮಂದಿ ಬಂಧನ

    ‘ಹಣ ಬಿಡುಗಡೆಯಾದ ಬಳಿಕ ನಾಲ್ಕು ವರ್ಷ ರಾಜ್ಯಾದ್ಯಂತ ಪ್ರವಾಸ ಮಾಡಿ ಸದಾಶಿವ ಆಯೋಗದ ವರದಿ ಸಿದ್ಧಪಡಿಸಲಾಗಿದೆ. ಆದರೆ 2013 ರಿಂದ 2018ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ’ ಎಂದು ದೂರಿದರು.

    ಇದನ್ನೂ ಓದಿ: ಜಂಗಮ ಸಮಾಜ ಆಲದ ಮರ ಇದ್ದಂತೆ ; ಕರಿವೃಷಭದೇಶೀಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಸಲಹೆ

    ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ, ‘2023 ನವೆಂಬರ್‌ 11ರಂದು ಹೈದರಾಬಾದ್‍ನಲ್ಲಿ ನಡೆದ ಮಾದಿಗ ವಿಶ್ವರೂಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಳಮೀಸಲು ಸೌಲಭ್ಯ ಕಲ್ಪಿಸುವ ಆಶ್ವಾಸನೆ ನೀಡಿದ್ದಾರೆ. ಒಳಮೀಸಲಾತಿ ಜಾರಿಯಾಗಿ ಅಂತ್ಯೋದಯ ಆದಾಗ ಮಾತ್ರ ಪೂರ್ಣ ಪ್ರಮಾಣದ ಸಾಮಾಜಿಕ ನ್ಯಾಯ ದೊರೆಯುತ್ತದೆ’ ಎಂದರು.

    ‘ಪ್ರತ್ಯೇಕ ಮೀಸಲು ಸೌಲಭ್ಯ ಕಲ್ಪಿಸಲು ಅವಕಾಶ ಇದೆ. ಇದೇ ಮಾನದಂಡ ಆಧರಿಸಿ ಒಳಮೀಸಲು ಸೌಲಭ್ಯ ನೀಡಬಹುದಾಗಿದೆ. ತಮಿಳುನಾಡಿನ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ಜನವರಿಯಲ್ಲಿ ಸುಪ್ರೀಂಕೋರ್ಟ್ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠದ ತೀರ್ಪು ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಒಲವು ತೋರಿಸಿದ್ದಾರೆ. ಇದರಿಂದ ಮಾದಿಗ ಸಮುದಾಯದಲ್ಲಿ ಆಶಾಭಾವನೆ ಮೂಡಿದೆ’ ಎಂದು ಹೇಳಿದರು.

    ಮಾಯಕೊಂಡ ಮಾಜಿ ಶಾಸಕ ಪ್ರೊ.ಲಿಂಗಣ್ಣ ಅಧ್ಯಕ್ಷತೆ ವಹಿಸಿದ್ದರು. ಮಾದಿಗ ದಂಡೋರ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಯುವ ಮುಖಂಡ ಜಿ.ಎಚ್‌.ಮೋಹನ್, ದಲಿತ ಮುಖಂಡರಾದ ಸಾಬು ದೊಡ್ಮನಿ, ಬಿ.ಆರ್‌.ಮುನಿರಾಜು, ಗುರುನಾಥ್ ದಾನಪ್ಪ, ಪುರುಷೋತ್ತಮ, ಮಹಾಂತೇಶ್, ಹುಲ್ಲೂರು ಕುಮಾರಸ್ವಾಮಿ, ಪರಶುರಾಮ್, ರಾಜಣ್ಣ ಇದ್ದರು.

    ಬಿಜೆಪಿ, ಆರ್‌ಎಸ್‌ಎಸ್‌ ಎಂದೂ ಕೂಡಾ ಬಡವರನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿಲ್ಲ. ಸಂಘ ಪರಿವಾರ ಸಾಮಾಜಿಕ ನ್ಯಾಯಕ್ಕೆ ಎಂದೆಂದೂ ಬದ್ಧವಾಗಿದೆ.
    ಗೋವಿಂದ ಎಂ.ಕಾರಜೋಳ, ಮಾಜಿ ಸಚಿವ

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top