ಮುಖ್ಯ ಸುದ್ದಿ
Kannada Bhavana: ಚಿತ್ರದುರ್ಗದಲ್ಲಿ ಕನ್ನಡ ಭವನಕ್ಕೆ ಪ್ಲಾನ್ ತಯಾರಿಸಿ | ಆದ್ಯತೆಯ ಮೇಲೆ ಅನುದಾನ ಒದಗಿಸುವ ಭರವಸೆ
CHITRADURGA NEWS | 01 NOVEMBER 2024
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಕನ್ನಡ ಭವನ(Kannada Bhavana) ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದ್ದಾರೆ.
ಕ್ಲಿಕ್ ಮಾಡಿ ಓದಿ: ಕನ್ನಡಕ್ಕೆ ಚಿತ್ರದುರ್ಗ ಜಿಲ್ಲೆಯ ಕೊಡುಗೆ ಅಪಾರ | ಡಿ.ಸುಧಾಕರ್
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಉದ್ಘಾಟಿಸಿದ ನಂತರ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಜೊತೆ ಮಾತನಾಡುತ್ತಾ ಭರವಸೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕನ್ನಡ ಭವನ ಜಿಲ್ಲೆಯ ಸಾಹಿತ್ಯಾಸಕ್ತರ ದಶಕಗಳ ಕನಸಾಗಿದೆ. ಪರಿಷತ್ತಿಗೆ ಪಿಳ್ಳೇಕೇರನಹಳ್ಳಿಯ ಬಾಪೂಜಿ ಕಾಲೇಜಿನ ಬಳಿ ವಿಶಾಲವಾದ ನಿವೇಶನವಿದೆ. ಆದರೆ ಕಟ್ಟಡಕ್ಕೆ ಅನುದಾನವಿಲ್ಲ. ಹೀಗಾಗಿ ಅಂದಾಜು 3 ಕೋಟಿ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು.
ಕ್ಲಿಕ್ ಮಾಡಿ ಓದಿ: ಕೋಟೆ ನಾಡಿನಲ್ಲಿ ಕನ್ನಡದ ಕಂಪು | ಭುವನೇಶ್ವರಿ ತಾಯಿ ಭಾವಚಿತ್ರದ ಮೆರವಣಿಗೆ
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಆದ್ಯತೆಯ ಮೇಲೆ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಕೇಳಲಾಗುವುದು. ಜೊತೆಗೆ ಡಿಎಂಎಫ್ ಸೇರಿದಂತೆ ನಾನಾ ಇಲಾಖೆಗಳಿಂದ ಅನುದಾನ ಒದಗಿಸಲು ಪ್ರಯತ್ನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಕನ್ನಡ ಭವನಕ್ಕೆ ಪ್ಲಾನ್ ಮತ್ತು ಎಸ್ಟಿಮೇಟ್ ತಯಾರಿಸಲು ಸೂಚಿಸಿದರು.
ಈ ವೇಳೆ ಚಿತ್ರದುರ್ಗ ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಎಲ್.ಪ್ರಶಾಂತ್, ಕಾರ್ಯದರ್ಶಿ ವಿ.ಶ್ರೀನಿವಾಸ ಖಜಾಂಚಿ ಸಿ.ಲೋಕೇಶ ಇದ್ದರು.