ಮುಖ್ಯ ಸುದ್ದಿ
ಜಗದೊಡೆಯ ತಿಪ್ಪೇಶನ ಮಹಾರಥೋತ್ಸವ ವೈಭವಕ್ಕೆ ದಿನಗಣನೆ | 24 ರಂದು ಪೂರ್ವಸಿದ್ಧತಾ ಸಭೆ
CHITRADURGA NEWS | 22 FEBRUARY 2024
ಚಿತ್ರದುರ್ಗ: ಕಾಯಕಯೋಗಿ, ಜಲ ಸಂಸ್ಕೃತಿಯ ಹರಿಕಾರ, ಜನಮಾನಸದಲ್ಲಿ ನೆಲೆಸಿದ ದೈವಾಂಶ ಸಂಭೂತ, ಏಳು ಕೆರೆ, ಏಳು ಪುರದ ವಾಸ.. ಲೋಕಕಲ್ಯಾಣಕ್ಕಾಗಿ ಶ್ರಮಿಸಿದ ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರ ಸ್ವಾಮಿಯ ವಿಜೃಂಭಣೆಯ ಜಾತ್ರೆಗೆ ದಿನಗಣನೆ ಪ್ರಾರಂಭವಾಗಿದೆ.
ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಸಚಿವರ ತವರು ಕ್ಷೇತ್ರದಲ್ಲೇ ಭುಗಿಲೆದ್ದ ಕಾಂಗ್ರೆಸ್ ಮುಖಂಡರ ಅಸಮಾಧಾನ | ತೋಟದ ಮನೆ ಸಭೆಯಲ್ಲಿ ಬಹಿರಂಗ
ಮಾರ್ಚ್ 19ರಿಂದ ಏಪ್ರಿಲ್ 1 ರವರೆಗೆ ಜಾತ್ರೆ ನಡೆಯಲಿದೆ. ಗುರು ತಿಪ್ಪೇರುದ್ರ ಸ್ವಾಮಿಯ ಮಹಾರಥೋತ್ಸವದ ವೈಭವಕ್ಕೆ ಮಾರ್ಚ್ 26 ಸಾಕ್ಷಿಯಾಗಲಿದೆ. ಜಾತ್ರೆಗೆ ಸಿದ್ಧತೆ ಪ್ರಾರಂಭಿಸಲು ಸಂಪ್ರದಾಯಂತೆ ಫೆ. 24 ರಂದು ಪೂರ್ವಸಿದ್ಧತಾ ಸಭೆ ಆಯೋಜಿಸಲಾಗಿದೆ.
ಇದನ್ನೂ ಓದಿ: ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ | ಮೂರು ದಿನ ಸರಳ ಆಚರಣೆ
ಗುರುತಿಪ್ಪೇರುದ್ರಸ್ವಾಮಿ ದೇವಾಲಯದ ಒಳಮಠದ ಸಮುದಾಯ ಭವನದಲ್ಲಿ ಫೆ.24 ರಂದು ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಮೊಳಕಾಲ್ಮುರು ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ನೇತೃತ್ವದಲ್ಲಿ ಸಭೆ ನಡೆಯಲಿದೆ. ಜಿಲ್ಲಾಧಿಕಾರಿ ವೆಂಕಟೇಶ್ ಅಧ್ಯಕ್ಷತೆವಹಿಸಲಿದ್ದಾರೆ. ಸಭೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಭದ್ರತೆ ವಿಷಯಗಳು ಮುಖ್ಯ ಚರ್ಚೆಯಾಗಲಿವೆ.
ಇದನ್ನೂ ಓದಿ: ಪ್ರಭಾವಿ ಮಠಮಾನ್ಯಗಳಿಗೆ ಮಾತ್ರ ಅನುದಾನ | ಸರ್ಕಾರದ ನಡೆಗೆ ಸರ್ದಾರ್ ಸೇವಾ ಲಾಲ್ ಸ್ವಾಮೀಜಿ ಅಸಮಾಧಾನ
ಮಾರ್ಚ್ 26 ರಂದು ಚಿತ್ತಾ ನಕ್ಷತ್ರದ ಸಮಯದಲ್ಲಿ ತಿಪ್ಪೇರುದ್ರಸ್ವಾಮಿಯ ಜಾತ್ರಾ ಮಹೋತ್ಸವವೂ ವಿಜೃಂಭಣೆಯಿಂದ ಭಕ್ತರ ಜಯಘೋಷದೊಂದಿಗೆ ನಡೆಯಲಿದೆ. ನೆರೆಯ ಆಂಧ್ರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಬಳ್ಳಾರಿ, ರಾಣೆಬೆನ್ನೂರು, ಹರಪನಹಳ್ಳಿ, ಬೆಂಗಳೂರು, ಹಾವೇರಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ಗರು ಪಾಲ್ಗೊಳ್ಳಲಿದ್ದಾರೆ.
ಸ್ವಾಮಿಯ ರಥವೂ ರಾಜ ಗಾಂಭೀರ್ಯದೊಂದಿಗೆ ರಥಬೀದಿಯಲ್ಲಿ ಮುನ್ನಡೆಯುತ್ತಿದ್ದರೆ, ಕಣ್ಣು ಹಾಯಿಸಿದಷ್ಟೂ ದೂರ ಜನಸಾಗರ. ಮುಂಭಾಗದಲ್ಲಿ ನಂದಿ ಕೋಲಿನ ಕುಳಿತ, ಸಂಗೀತದ ಸೆಳೆತ. ಡೊಳ್ಳು, ಕಹಳೆ, ತಮಟೆ ಸದ್ದಿನೊಂದಿಗೆ ಕುಣಿಯುವ ಭಕ್ತಸಮೂಹ. ರಥ ಸಾಗುವ ಮಾರ್ಗದುದ್ದಕ್ಕೂ ಎತ್ತ ನೋಡಿದರೂ ಮನೆಗಳ, ಮಹಡಿಗಳ ಮೇಲೆಲ್ಲಾ ತಿಪ್ಪೇಶನ ಭಕ್ತರೇ ಕಾಣುತ್ತಾರೆ. ಲಕ್ಷಾಂತರ ಭಕ್ತರ ಮಧ್ಯೆ ಸ್ವಾಮಿಯ ರಥ ರಾರಾಜಿಸುವುದನ್ನು ನೋಡುವುದೇ ಒಂದು ರೀತಿ ಧನ್ಯತಾಭಾವವನ್ನು ಉಂಟು ಮಾಡುತ್ತದೆ.