Connect with us

    150 ಎಕರೆ ಪ್ರದೇಶದಲ್ಲಿ ಸಮಾವೇಶದ ಸಿದ್ಧತೆ | ಚಿತ್ರದುರ್ಗದಲ್ಲಿ ಐತಿಹಾಸಿಕ ಶೋಷಿತರ ಸಮಾವೇಶ

    ಚಿತ್ರದುರ್ಗದಲ್ಲಿ ಐತಿಹಾಸಿಕ ಶೋಷಿತರ ಸಮಾವೇಶ

    ಮುಖ್ಯ ಸುದ್ದಿ

    150 ಎಕರೆ ಪ್ರದೇಶದಲ್ಲಿ ಸಮಾವೇಶದ ಸಿದ್ಧತೆ | ಚಿತ್ರದುರ್ಗದಲ್ಲಿ ಐತಿಹಾಸಿಕ ಶೋಷಿತರ ಸಮಾವೇಶ

     CHITRADURGA NEWS | 28 JANUARY 2024

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆ ಇಂದು ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಗಲಿದೆ.

    ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಶೋಷಿತ ಸಮುದಾಯಗಳ ರಾಜ್ಯಮಟ್ಟದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.

    ಇದನ್ನೂ ಓದಿ: ಮುರುಘಾ ಮಠದಿಂದ ಸೀಬಾರ ಹೆದ್ದಾರಿ ಬಂದ್

    ಇದು ಒಂದು ರೀತಿಯಲ್ಲಿ ಶೋಷಿತ ಸಮುದಾಯಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿದೆ.

    ಚಿತ್ರದುರ್ಗ ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದಲ್ಲಿ ಸುಮಾರು 150 ಎಕರೆ ಪ್ರದೇಶದಲ್ಲಿ ಸಮಾವೇಶಕ್ಕೆ ಕಳೆದ ಒಂದು ತಿಂಗಳಿನಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಚಿತ್ರದುರ್ಗದಲ್ಲಿ ಐತಿಹಾಸಿಕ ಶೋಷಿತರ ಸಮಾವೇಶ

    ಚಿತ್ರದುರ್ಗದಲ್ಲಿ ಐತಿಹಾಸಿಕ ಶೋಷಿತರ ಸಮಾವೇಶ

    ಈಗಾಗಲೇ ಬೃಹತ್ ವೇದಿಕೆ ಸಿದ್ಧವಾಗಿದ್ದು, ಸುಮಾರು ಮೂರುವರೇ ಲಕ್ಷ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

    ಇದನ್ನೂ ಓದಿ: ಚಿತ್ರದುರ್ಗ ಲೋಕಸಭೆಗೆ ಶಾಸಕ ಚನ್ನಬಸಪ್ಪ, ಎಸ್.ಲಿಂಗಮೂರ್ತಿ ಉಸ್ತುವಾರಿ

    ಈ ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.

    ಜ.28 ಭಾನುವಾರ(ಇಂದು) ಬೆಳಗ್ಗೆ 11 ಗಂಟೆಗೆ ನಡೆಯುವ ಶೋಷಿತ ವರ್ಗಗಳ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ.

    ವೇದಿಕೆಯಲ್ಲಿ ಎಷ್ಟು ಜನರಿರುತ್ತಾರೆ:

    ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಆಗಿರುವುದರಿಂದ ಸಹಜವಾಗಿ ಸಾಕಷ್ಟು ಹಿಂದುಳಿದ ಜಾತಿಗಳ ಒಕ್ಕೂಟವೇ ಇಲ್ಲಿರುತ್ತದೆ. ನಾಯಕರ ಸಂಖ್ಯೆ ಕೂಡಾ ದೊಡ್ಡ ಮಟ್ಟದಲ್ಲಿರುತ್ತದೆ.

    ಈ ಹಿನ್ನೆಲೆಯಲ್ಲಿ ವೇದಿಕೆಯಲ್ಲಿ ನಾಯಕರಿಗಾಗಿಯೇ 200 ಕುರ್ಚಿಗಳನ್ನು ಹಾಕಲಾಗುತ್ತದೆ. ಅಷ್ಟು ವಿಶಾಲವಾದ ವೇದಿಕೆ ನಿರ್ಮಾಣವಾಗಿದೆ.

    ಇದನ್ನೂ ಓದಿ: ಶಾಸಕರಾದ ಟಿ.ರಘುಮೂರ್ತಿ-ಬಿಜಿ.ಗೋವಿಂದಪ್ಪಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

    ಇನ್ನೂ ವೇದಿಕೆಯ ಎರಡೂ ಬದಿಗಳಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳಿಗಾಗಿ ಎಡ ಮತ್ತು ಬಲ ಬದಿಯಲ್ಲಿ ತಲಾ 200 ರಂತೆ 400 ಕುರ್ಚಿಗಳನ್ನು ಹಾಕಲಾಗಿದೆ.

    ಎಲ್ಲೆಲ್ಲಿಂದ ಬರಲಿದ್ದಾರೆ ಜನ:

    ಚಿತ್ರದುರ್ಗ ಜಿಲ್ಲೆಯಲ್ಲಿ ಸಮಾವೇಶ ನಡೆಯುತ್ತಿರುವುದರಿಂದ ಸಹಜವಾಗಿ ಹೆಚ್ಚು ಜನ ಈ ಜಿಲ್ಲೆಯವರು ಸೇರುತ್ತಾರೆ. ಆನಂತರ ಅಕ್ಕಪಕ್ಕದಲ್ಲೇ ಇರುವ ದಾವಣಗೆರೆ, ಶಿವಮೊಗ್ಗ, ತುಮಕೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ, ಹಾವೇರಿ ಭಾಗದಿಂದ ಹೆಚ್ಚು ಸಂಖ್ಯೆಯಲ್ಲಿ ಜನ ಬರಲಿದ್ದಾರೆ.

    ಉಳಿದಂತೆ ರಾಜ್ಯದ ಪ್ರತಿ ಜಿಲ್ಲೆಯಿಂದಲೂ 5 ರಿಂದ 10 ಸಾವಿರ ಜನ ಭಾಗವಹಿಸಲಿದ್ದಾರೆ. ಸಮಾವೇಶಕ್ಕೆ ಜನರನ್ನು ಹೊತ್ತು ತರುವ ವಾಹನಗಳ ಸಂಖ್ಯೆಯೇ 10 ಸಾವಿರ ಮುಟ್ಟಲಿದೆ ಎನ್ನುವುದು ಸಂಘಟಕರ ಲೆಕ್ಕಾಚಾರವಾಗಿದೆ.

    ಚಿತ್ರದುರ್ಗದಲ್ಲಿ ಐತಿಹಾಸಿಕ ಶೋಷಿತರ ಸಮಾವೇಶ

    ಚಿತ್ರದುರ್ಗದಲ್ಲಿ ಐತಿಹಾಸಿಕ ಶೋಷಿತರ ಸಮಾವೇಶ

    ಸಮಾವೇಶಕ್ಕೆ ಬಂದವರಿಗೆ ಭರ್ಜರಿ ಬಾಡೂಟ:

    ಶೋಷಿತರ, ಹಿಂದುಳಿದವರ ಸಮಾವೇಶ ಆಗಿರುವುದರಿಂದ ಇಲ್ಲಿಗೆ ಬರುವ ಬಹುತೇಕ ಎಲ್ಲರೂ ಮಾಂಸಹಾರಿಗಳೇ ಆಗಿದ್ದಾರೆ. ಆದ್ದರಿಂದ ಶೋಷಿತರ ಆಹಾರ ಪದ್ಧತಿಯಾಗಿರುವ ಮಾಂಸಾಹರವನ್ನೇ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

    ಸುಮಾರು 3 ಲಕ್ಷ ಜನರಿಗೆ ಶೋಷಿತರ ಮಾಂಸಾಹಾರಿ(ಚಿಕನ್ ಬಿರಿಯಾನಿ) ಊಟದ ವ್ಯವಸ್ಥೆ ಮಾಡಲಾಗಿದೆ.
    ಶೋಷಿತರಾಗಿದ್ದರೂ ಮಾಂಸಾಹಾರ ಸೇವನೆ ಮಾಡದವರಿಗೆ ಸಸ್ಯಾಹಾರಿ ಊಟವೂ ಇರುತ್ತದೆ.

    ಇಲ್ಲಿ ಜನ ಹೆಚ್ಚಾದರೆ ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಕೆಲವರು ಅವರ ಬಸ್ಸುಗಳಲ್ಲೇ ಊಟದ ವ್ಯವಸ್ಥೆ ಮಾಡಿಕೊಂಡು ಬರಲಿದ್ದಾರೆ.

    ಸೀಬಾರ-ಮುರುಘಾ ಮಠ ಹೆದ್ದಾರಿ ಬಂದ್:

    ಮಾದಾರ ಚನ್ನಯ್ಯ ಗುರುಪೀಠದ ಪಕ್ಕದಲ್ಲಿ ಸಮಾವೇಶ ನಡೆಯುತ್ತಿದ್ದು, ಮುರುಘಾ ಮಠದಿಂದ ಸೀಬಾರ ಹೋಗುವ ಹೆದ್ದಾರಿಯನ್ನು ಪೊಲೀಸರು ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಿದ್ದಾರೆ.

    ದಾವಣಗೆರೆ ಕಡೆಯಿಂದ ಚಿತ್ರದುರ್ಗಕ್ಕೆ ಬರಬೇಕಾದವರು ಸೀಬಾರಾ ಬೈಪಾಸ್ ಮೂಲಕ ಮದಕರಿ ಪುರ ಬಳಿ ಇಳಿದು ಚಳ್ಳಕೆರೆ ಗೇಟ್ ಮೂಲಕ ಚಿತ್ರದುರ್ಗ ನಗರ ಪ್ರವೇಶಿಸಲು ಮನವಿ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top