ಮುಖ್ಯ ಸುದ್ದಿ
Rain: ವರುಣಾರ್ಭಟಕ್ಕೆ ಮಲೆನಾಡು ತತ್ತರ | ಬಯಲುಸೀಮೆಯಲ್ಲಿ ಮಳೆಗೆ ಪ್ರಾರ್ಥನೆ
CHITRADURGA NEWS | 28 JULY 2024
ಚಿತ್ರದುರ್ಗ: ಮಳೆಯ ಆರ್ಭಟಕ್ಕೆ ಮಲೆನಾಡು, ಉತ್ತರ ಕರ್ನಾಟಕ ತತ್ತರಿಸಿವೆ. ಜಲಾಶಯಗಳೊಗೆ ದಾಖಲೆ ಪ‍್ರಮಾಣದಲ್ಲಿ ಒಳಹರಿವು ಹೆಚ್ಚಾಗಿದ್ದು, ಮಳೆ ಬಿಡುವು ನೀಡಿದರೆ ಸಾಕು ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ಆದರೆ ಬಯಲುಸೀಮೆಯಲ್ಲಿ ಮಾತ್ರ ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋಗಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಗಡಿ ಗ್ರಾಮ ಕಾಲುವೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡರಹಟ್ಟಿ ಗ್ರಾಮಸ್ಥರು ಶನಿವಾರ ಕತ್ತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಮುಖ ಬೀದಿಯಲ್ಲಿ ತಮಟೆ ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು.
ರಾಜ್ಯದ ವಿವಿಧೆಡೆ ನದಿ, ಕಣಿವೆ, ಕೆರೆ– ಕಟ್ಟೆ ತುಂಬಿ ಜನರು ನೆರೆ ಹಾವಳಿ ಎದುರಿಸುತ್ತಿದ್ದರೂ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯೇ ಇಲ್ಲ. ಮುಂಗಾರು ಹಂಗಾಮಿನಲ್ಲಿ ಮೊದಲ ಹಂತದಲ್ಲಿ ಬಿತ್ತಿರುವ ಶೇಂಗಾ, ತೊಗರಿ, ಸಜ್ಜೆ, ಔಡಲ, ಸಿರಿಧಾನ್ಯ ಮುಂತಾದ ಬೆಳೆ ಮಳೆ ಇಲ್ಲದ ಕಾರಣ ಬಾಡುತ್ತಿವೆ.
ಇದನ್ನೂ ಓದಿ: ಪೊರಕೆ ಕಡ್ಡಿ ವ್ಯಾಪಾರಿ ಮನೆಗೆ ಕನ್ನ | ಸಿಸಿಟಿವಿಯ ಡಿವಿಆರ್ ಕದ್ದೊಯ್ಯದ ಗ್ಯಾಂಗ್
ಎರಡನೇ ಹಂತದ ಬಿತ್ತನೆಗೆ ಶೇಂಗಾ ಬೀಜ– ಗೊಬ್ಬರ ಸಿದ್ಧತೆ ಮಾಡಿಕೊಂಡು ಮುಗಿಲ ಕಡೆ ಮಳೆಗಾಗಿ ಎದುರು ನೋಡುವಂತಾಗಿದೆ. ಇನ್ನು 3–4 ದಿನಗಳಲ್ಲಿ ಮಳೆ ಬರದೆ ಹೋದರೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತದೆ. ನಗರಪ್ರದೇಶಕ್ಕೆ ಗುಳೆ ಹೋಗುವ ಪರಿಸ್ಥಿತಿ ಒದಗಿಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಮುಖಂಡರಾದ ಎಸ್.ರಂಗಪ್ಪ, ಕೆ.ಪಿ.ಹನುಮಂತರಾಯ, ಜಯಣ್ಣ, ಮಂಜುನಾಥ, ಮಲಕಿಸಾಬ್, ಕೃಷ್ಣಪ್ಪ, ಗೋಪಾಲಪ್ಪ, ಗಾದ್ರಿಪಾಲ, ನಾಗರಾಜ, ಮಹಾಂತೇಶ್, ಗಂಗಾಧರ, ರಾಘವೇಂದ್ರ, ಯರಓಬಳಯ್ಯ, ಎಸ್.ತಿಪ್ಪೇಶ್, ಜಿ.ಗಾದ್ರಿಪಾಲಯ್ಯ, ರಾಮಣ್ಣ, ಕಾಂತರಾಜ ಇದ್ದರು.