ಮುಖ್ಯ ಸುದ್ದಿ
ಬಿಎಸ್ಸಿ ಆಗ್ರಿ ಪ್ರವೇಶ ಪರೀಕ್ಷೆಗೆ ಪ್ರಾಯೋಗಿಕ ತರಬೇತಿ

CHITRADURGA NEWS | 26 APRIL 2024
ಚಿತ್ರದುರ್ಗ: 2024-25ನೇ ಸಾಲಿಗೆ ಕೃಷಿ ಕೋಟಾದಡಿ ರಾಜ್ಯದ ಕೃಷಿ ಹಾಗೂ ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಿಗೆ ಸ್ನಾತಕ ಪದವಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಮೇ.6 ಮತ್ತು 7ರಂದು ನಗರದ ಎ.ಪಿ.ಎಂ.ಸಿ ಆವರಣದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಪ್ರಾಯೋಗಿಕ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಮತದಾನದ ಹಬ್ಬಕ್ಕೆ ಕಂಗೋಳಿಸುತ್ತಿವೆ ಮತಗಟ್ಟೆ | ಮತ ಚಲಾಯಿಸಿ ಸಂಭ್ರಮಿಸಿ
ತರಬೇತಿಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಹಣ್ಣು, ತರಕಾರಿ, ಬಿತ್ತನೆ ಬೀಜ, ಆಹಾರ ಧಾನ್ಯ, ಕೃಷಿ ಪರಿಕರಗಳ ಬಗ್ಗೆ ಪರಿಚಯಿಸಲಾಗುತ್ತದೆ. ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕ ಪದವಿಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಮೇ.5ರೊಳಗೆ ಕೃಷಿ ತಂತ್ರಜ್ಞರ ಸಂಸ್ಥೆಯ ಕಛೇರಿಯಲ್ಲಾಗಲಿ ಅಥವಾ 9742455666 ಸಂಖ್ಯೆಗೆ ಫೋನ್ ಪೇ ಮೂಲಕವಾಗಲೀ ರೂ.700/- ಪಾವತಿಸಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ವೋಟರ್ ಕಾರ್ಡ್ ಇಲ್ಲ ಅಂದ್ರು ವೋಟ್ ಮಾಡಿ | ಈ ದಾಖಲೆ ಇರಲಿ
ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ದೂರವಾಣಿ ಸಂಖ್ಯೆ: 9742455666 ಅಥವಾ ಖಜಾಂಚಿ ದೂರವಾಣಿ ಸಂಖ್ಯೆ: 9448656231 ಗೆ ಸಂಪರ್ಕಿಸಬಹುದು ಎಂದು ಐ.ಎ.ಟಿ ಸಂಸ್ಥೆ ಅಧ್ಯಕ್ಷ ಜಿ.ಸಿ. ರಂಗಸ್ವಾಮಿ ತಿಳಿಸಿದ್ದಾರೆ.
