ಮುಖ್ಯ ಸುದ್ದಿ
ನಾಳೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?

CHITRADURGA NEWS | 22 FEBRUARY 2025
ಚಿತ್ರದುರ್ಗ: ನಗರ ಉಪ ವಿಭಾಗ ಘಟಕ-2 ರ ವ್ಯಾಪ್ತಿಯಲ್ಲಿ ಬರುವ ವಿದ್ಯಾನಗರ ಮತ್ತು ಮಿಲ್ ಏರಿಯಾ ಮಾರ್ಗದ ಜೆ.ಎಮ್.ಐ.ಟಿ ವೃತ್ತದ ಮುಂಭಾಗದಲ್ಲಿ ಕಾಮಗಾರಿಗೆ ಅಡ್ಡಲಾಗಿರುವ 11ಕೆವಿ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ನಗರಸಭೆ ವತಿಯಿಂದ ನಿರ್ವಹಿಸುತ್ತಿದ್ದು, ಈ ಮಾರ್ಗದ ಕೆಲವು ಪ್ರದೇಶಗಳಲ್ಲಿ ಫೆ.23ರಂದು ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
Also Read: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ಎಫ್-8 ವಿದ್ಯಾನಗರ: ವಿದ್ಯಾನಗರ, ತರಳಬಾಳು ನಗರ, ಜೆ.ಎಮ್.ಐ.ಟಿ ಕ್ಯಾಂಪಸ್ ಸುತ್ತ ಮುತ್ತ, ಕಾವಾಡಿಗರಹಟ್ಟಿ, ಎಮ್.ಕೆ.ಹಟ್ಟಿ, ಗಾರೇಹಟ್ಟಿ, ಎಮ್.ಆರ್. ಎಸ್.ಆರ್.ಲೇಔಟ್, ಮರಳುಸಿದ್ದೇಶ್ವರ ಬಡಾವಣೆ, ಹನುಮಂತ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶ.
ಎಫ್-15 ಮಿಲ್ ಏರಿಯಾ:ಇಂಡಸ್ಟ್ರಿಯಲ್ ಏರಿಯಾ, ಎಮ್.ಕೆ ಪ್ಯಾಲೇಸ್ ಹತ್ತಿರ, ರೈಲ್ವೇ ಸ್ಟೇಷನ್, ಚೋಳುಗುಡ್ಡ, ನೆಹರು ನಗರ, ಅಗಸನಕಲ್ಲು, ತಾಜ್ ಪೀರ್ ಲೇಔಟ್, ಆಶ್ರಯ ಬಡಾವಣೆ ಹಂತ-1 ಮತ್ತು ಹಂತ-2, ಇಟಗಿ ಚನ್ನಬಸಪ್ಪ ಲೇಔಟ್, ಸದಾನಂದಯ್ಯ ಬಡಾವಣೆ, ಸಿದ್ದಾರ್ಥ ಬಡಾವಣೆ, ಧವಳಗಿರಿ ಬಡಾವಣೆ 3ನೇಹಂತ, ವಿದ್ಯಾಶ್ರೀ ಬಡಾವಣೆ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯವಾಗಲಿದೆ.
Also Read: ಬಜೆಟ್ ನಲ್ಲಿ ಸರ್ಕಾರಿ ಶಾಲೆಗೆ ಹೆಚ್ಚಿನ ಅನುದಾನ ನೀಡಿ | ಕರುನಾಡ ವಿಜಯಸೇನೆ ಒತ್ತಾಯ
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
