ಹಿರಿಯೂರು
ಇಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯ

CHITRADURGA NEWS | 25 FEBRUARY 2025
ಹಿರಿಯೂರು: ಹಿರಿಯೂರು 66/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.25 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
Also Read: ಮುಖ್ಯಮಂತ್ರಿಗೆ ಪತ್ರ ಬರೆದ ಸಚಿವ ಡಿ.ಸುಧಾಕರ್ | ಪತ್ರದ ಪೂರ್ಣ ವಿವರ ಇಲ್ಲಿದೆ
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು :
ಹಿರಿಯೂರುನಗರ, ಹಿರಿಯೂರು ಗ್ರಾಮೀಣದ ಕೈಗಾರಿಕಾ ಪ್ರದೇಶಗಳಾದ ಅಕ್ಷಯಪುಡ್ ಪಾರ್ಕ, ಹಬೀಬ್ ಸಾಲ್ವೆಂಟ್, ನಂದಶ್ರೀ, ಪಿ.ಜಿ.ಸಿ.ಎಲ್, ವಿ.ವಿ.ಕ್ರಾಸ್, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಸಿಗೇಹಟ್ಟಿ, ಕೂನಿಕೆರೆ, ಬಬ್ಬುರು, ತೋಟಗಾರಿಕಾ ವಿಶ್ವವಿದ್ಯಾನಿಲಯ, ಆದಿವಾಲ, ಆದಿವಾಲ ಪಾರಂ, ಪಟ್ರೆಹಳ್ಳಿ ಹಾಗೂ ಸುತ್ತ ಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
Also Read: ಮೂವರು PDO ಗಳ ವೇತನ ಬಡ್ತಿಗೆ ಬ್ರೇಕ್ | ಕಾರಣ ಏನು ಗೊತ್ತಾ ?
ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕೆಂದು ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
