Connect with us

    plants; ತಾಯಿಯ ಹೆಸರಿನಲ್ಲಿ ಗಿಡ ನೆಡಿ | ನಗರಸಭೆ ಅಧ್ಯಕ್ಷೆ ಸುಮಿತಾ

    ನಗರಸಭೆಯಿಂದ ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಸಾಧಿಕ್ ನಗರ ಪಾರ್ಕ್ ಸ್ವಚ್ಚತಾ ಕಾರ್ಯ ಮತ್ತು ಸಸಿ ನೆಡುವ ಕಾರ್ಯಕ್ರಮ ಜರುಗಿತು

    ಮುಖ್ಯ ಸುದ್ದಿ

    plants; ತಾಯಿಯ ಹೆಸರಿನಲ್ಲಿ ಗಿಡ ನೆಡಿ | ನಗರಸಭೆ ಅಧ್ಯಕ್ಷೆ ಸುಮಿತಾ

    CHITRADURGA NEWS | 29 SEPTEMBER 2024

    ಚಿತ್ರದುರ್ಗ: ನಗರದಲ್ಲಿನ ಉದ್ಯಾನವನಗಳನ್ನು ನಗರಸಭೆ ನಿರ್ಮಾಣ ಮಾಡಿದರೂ, ಸಸಿ(plants)ಗಳನ್ನು ಹಾಕಿದರೂ, ಸ್ಥಳೀಯರು ಜವಾಬ್ದಾರಿ ತೆಗೆದುಕೊಂಡು ನಿರ್ವಹಣೆ ಮಾಡಬೇಕು, ಆಗಲೇ‌ ಉದ್ಯಾನವನಗಳು ನಳನಳಿಸುತ್ತವೆ ಎಂದು ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಹೇಳಿದರು.

    ಕ್ಲಿಕ್ ಮಾಡಿ ಓದಿ: Kannada Novel: 5. ಕೆನ್ನಳ್ಳಿಯ ದುರಂತ | ಹಬ್ಬಿದಾ ಮಲೆಮಧ್ಯದೊಳಗೆ

    ನಗರದ ಐಯುಡಿಪಿ ಬಡಾವಣೆಯ ಸಾಧಿಕ್ ನಗರದ ಉದ್ಯಾನವನದಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ಗಿಡ ಎಂಬ ಘೋಷ ವಾಕ್ಯದಂತೆ ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ನಗರದ ಸ್ವಚ್ಛತೆ, ನೈರ್ಮಲ್ಯ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ, ಸರ್ಕಾರದ ಜತೆಯಲ್ಲಿ ಸಾರ್ವಜನಿಕರು ಇಚ್ಛಾಶಕ್ತಿಯಿಂದ ಸ್ವಯಂ ಪ್ರೇರಿತವಾಗಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದಾಗ ಮಾತ್ರ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.

    ನಿಮ್ಮೊಂದಿಗೆ ನಗರಸಭೆ ಸದಾ ಇರುತ್ತದೆ. ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸುವ ಮೂಲಕ ನಗರದ ಸ್ವಚ್ಚತೆಯಾಗಿದೆ ಎಂದರು.

    ಕ್ಲಿಕ್ ಮಾಡಿ ಓದಿ: FIRE INCIDENT: ಹೊತ್ತಿ ಉರಿದ ಕಂಟೈನರ್‌ | ಜನವಸತಿ ಪ್ರದೇಶದ ಬಳಿ ತಪ್ಪಿದ ಅನಾಹುತ

    ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಅರ್ಥಪೂರ್ಣವಾಗಿದೆ. ನಗರಸಭೆಯಲ್ಲಿ ಸ್ವಚ್ಛತಾ ಸೆಲ್ಪಿ ಪಾಯಿಂಟ್‌ಗಳನ್ನು ಸ್ಥಾಪಿಸಿ, ಸಾರ್ವಜನಿಕರಿಗೆ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

    ಸಾರ್ವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲು ಸೆ.14 ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಂದೋಲನ ನಡೆಯುತ್ತಿದ್ದು, ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಶಾಲಾ-ಕಾಲೇಜು, ದೇವಾಲಯ, ಆಸ್ಪತ್ರೆ, ಉದ್ಯಾನವನಗಳಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದೇವೆ, ನಾವೆಲ್ಲರೂ ಸೇರಿ ಚಿತ್ರದುರ್ಗ ನಗರವನ್ನು ಪರಿಪೂರ್ಣ ಸ್ವಚ್ಛತೆ, ಸುಂದರ ನಗರ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದರು.

    ಪ್ರಸ್ತುತ ವಾತಾವರಣದಲ್ಲಿ ಪ್ಲಾಸ್ಟಿಕ್ ಎಂಬುದು ಹೇರಳವಾಗಿ ಬೆರತು ಹೋಗಿದೆ. ಇದರಿಂದ ಕ್ಯಾನ್ಸರ್, ಹೃದಯಾಘಾತ ಮುಂತಾದ ಮಾರಣಾಂತಿಕ ಖಾಯಿಲೆಗಳು ಹರಡುತ್ತಿವೆ. ಹಾಗಾಗಿ ಇದರಿಂದ ಮುಕ್ತವಾಗಲು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು.

    ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಹಸಿಕಸ-ಒಣಕಸ ವಿಂಗಡಿಸಿ ನಗರಸಭೆ ವಾಹನಗಳಿಗೆ ನೀಡುವ ಮೂಲಕ ನಾವೆಲ್ಲರೂ ಮುಂದಿನ ಪೀಳಿಗೆಗೆ ಸುಂದರ ಹಾಗೂ ಸ್ವಚ್ಚವಾದ ವಾತವಾರಣ ಉಳಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಕ್ಲಿಕ್ ಮಾಡಿ ಓದಿ: Civil servants; ಹಿಂದೂ ಮಹಾಗಣಪತಿ ಶೋಭಾಯಾತ್ರೆ | ನಗರ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ವಿಶೇಷ ಅನುದಾನ ನೀಡಿ | ಕರುನಾಡ ವಿಜಯಸೇನೆ ಮನವಿ 

    ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಆಡಳಿತಾಧಿಕಾರಿ ಮಾಲತೇಶ್ ಅರಸ್, ಟಾರ್ಗೆಟ್ ಯುವ ವೇದಿಕೆ ಅಧ್ಯಕ್ಷ ಸಿದ್ದರಾಜು ಜೋಗಿ ಇವರು ಮಾತನಾಡಿದರು.

    ಈ ಸಂದರ್ಭದಲ್ಲಿ ರೈತ ಮುಖಂಡ ತಿಪ್ಪೇಸ್ವಾಮಿ, ದೇವರಾಜ್, ನಗರಸಭೆ ಪರಿಸರ ಅಭಿಯಂತ ಜಾಫರ್, ಆರೋಗ್ಯ ನಿರೀಕ್ಷಕರುಗಳಾದ ಬಾಬುರೆಡ್ಡಿ, ಭಾರತಿ, ರುಕ್ಮಿಣಿ, ನಾಗರಾಜು, ಹೀನಾ ಕೌಸರ್, ನಿರ್ಮಲ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಪೌರ ಕಾರ್ಮಿಕರು ಭಾಗವಹಿಸಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top