ಮುಖ್ಯ ಸುದ್ದಿ
ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ | 31 ರವರೆಗೆ ಅವಧಿ ವಿಸ್ತರಣೆ

CHITRADURGA NEWS | 07 JULY 2024
ಚಿತ್ರದುರ್ಗ: ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಗೆ ಜುಲೈ 31 ರವರೆಗೆ ಅವಧಿ ವಿಸ್ತರಣೆ ಮಾಡಿ ಅವಕಾಶ ನೀಡಲಾಗಿದೆ.
2024-25ನೇ ಸಾಲಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು 2024ರ ಏಪ್ರಿಲ್ ತಿಂಗಳಲ್ಲಿ ಪಾವತಿಸಿದವರಿಗೆ ಸರ್ಕಾರದ ಆದೇಶದ ಅನ್ವಯ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತಿರುವುದನ್ನು ಜುಲೈ 31 ರವರೆಗೆ ಅವಧಿ ವಿಸ್ತರಿಸಿ ಆದೇಶಿಸಲಾಗಿದೆ.
ಕ್ಲಿಕ್ ಮಾಡಿ ಓದಿ: ಬನ್ನಿ..ಚಿನ್ನ ಕೊಡ್ತಿವಿ..ಆದ್ರೆ ಯಾರಿಗೂ ಹೇಳಬೇಡಿ | ಬಯಲಾಯ್ತು ವಂಚನೆ ಕೇಸ್
ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರು ತಮ್ಮ ಆಸ್ತಿಗಳಿಗೆ ಜುಲೈ 31 ರೊಳಗಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿಸಿ, ಶೇ. 5ರಷ್ಟು ರಿಯಾಯಿತಿ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ 2024-25ನೇ ಸಾಲಿಗೆ ಮೇ ಮತ್ತು ಜೂನ್ ತಿಂಗಳಲ್ಲಿ ಶೇ.5ರಷ್ಟು ರಿಯಾಯಿತಿ ಪಡೆಯದೇ ಪೂರ್ಣ ಪ್ರಮಾಣದಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಿರುವ ಆಸ್ತಿ ಮಾಲೀಕರು, ಚಲನ್ ಮತ್ತು ವಿವರದ ಪಟ್ಟಿ ತೋರಿಸಿ ಮುಂದಿನ ಆರ್ಥಿಕ ವರ್ಷ ಅಂದರೆ, 2025-26ನೇ ಸಾಲಿನಲ್ಲಿ ಆಸ್ತಿ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಶೇ.5ರಷ್ಟು ರಿಯಾಯಿತಿ ಪಡೆಯಬಹುದು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.
